Advertisement

ಉತ್ತರದ 5 ರಾಜ್ಯಗಳಲ್ಲಿ ಒಟ್ಟಾರೆ 58 ಮಂದಿ ಬಲಿ

01:46 AM Aug 21, 2019 | mahesh |

ನವದೆಹಲಿ: ಕಳೆದ ಕೆಲವು ದಿನಗಳಿಂದ ಉತ್ತರ ಭಾರತದಲ್ಲಿ ಅಬ್ಬರಿಸಿದ ಮಳೆ ಹಾಗೂ ಭೂಕುಸಿತವು ದೆಹಲಿ, ಹಿಮಾಚಲ ಪ್ರದೇಶ, ಪಂಜಾಬ್‌, ಹರ್ಯಾಣ ಮತ್ತು ಉತ್ತರಾಖಂಡಗಳಲ್ಲಿ ಒಟ್ಟಾರೆ 58 ಮಂದಿಯನ್ನು ಬಲಿತೆಗೆದುಕೊಂಡಿದೆ.

Advertisement

ಹಿಮಾಚಲ, ದೆಹಲಿಯಲ್ಲಿ ಮಂಗಳವಾರವೂ ಮಳೆ ಮುಂದುವರಿದರೆ, ಪಂಜಾಬ್‌ ಹಾಗೂ ಹರ್ಯಾಣದಲ್ಲಿ ಸ್ವಲ್ಪಮಟ್ಟಿಗೆ ತಗ್ಗಿದೆ. ಹಿಮಾಚಲದ ಕೃಷಿ ಸಚಿವ ರಾಮ್‌ ಲಾಲ್ ಮಾರ್ಕಂಡ ಅವರು ಲಾಹೌಲ್ ಜಿಲ್ಲೆಯಲ್ಲಿ ಸಿಲುಕಿದ್ದು, ಮಂಗಳವಾರ ಅವರನ್ನು ಶಿಮ್ಲಾಗೆ ಏರ್‌ಲಿಫ್ಟ್ ಮಾಡಲಾಯಿತು. ಇನ್ನೂ 150 ಮಂದಿ ಆ ಪ್ರದೇಶದಲ್ಲೇ ಇದ್ದು, ಬುಧವಾರದೊಳಗಾಗಿ ಅವರನ್ನೂ ರಕ್ಷಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಉತ್ತರಾಖಂಡ ಸಿಎಂ ತ್ರಿವೇಂದ್ರ ಸಿಂಗ್‌ ರಾವತ್‌ ಪ್ರವಾಹ ಪೀಡಿತ ಉತ್ತರಕಾಶಿಗೆ ಭೇಟಿ ನೀಡಿ ರಕ್ಷಣೆ ಹಾಗೂ ಪರಿಹಾರ ಕಾರ್ಯಗಳನ್ನು ಪರಿಶೀಲಿಸಿದ್ದಾರೆ.

ಗುಜರಾತ್‌ನ ನರ್ಮದಾ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣವು 133 ಮೀಟರ್‌ಗೆ ತಲುಪಿದ್ದು, ಗರಿಷ್ಠ ಮಟ್ಟ ತಲುಪಲು ಕೇವಲ 5 ಮೀಟರ್‌ ಮಾತ್ರ ಬಾಕಿಯಿದೆ.

ಮಂಜು ವಾರಿಯರ್‌ ಮತ್ತು ತಂಡದ ರಕ್ಷಣೆ
ಮಲಯಾಳಿ ನಟಿ ಮಂಜು ವಾರಿಯರ್‌ ಹಾಗೂ ಅವರೊಂದಿಗಿದ್ದ ಚಿತ್ರತಂಡದ 30 ಮಂದಿ ಹಿಮಾಚಲ ಪ್ರದೇಶದ ಗ್ರಾಮ ವೊಂದರಲ್ಲಿ ಸಿಲುಕಿ ಕೊಂಡಿದ್ದರು. ನಮಗೆ ಇನ್ನು 2 ದಿನಗಳಿಗಾಗುವಷ್ಟು ಆಹಾರ ಮಾತ್ರವೇ ಇದೆ ಎಂದು ಮಂಜು ಅವರು ಸೋಮವಾರ ರಾತ್ರಿ ಸ್ಯಾಟಲೈಟ್ ಫೋನ್‌ ಮೂಲಕ ತಮ್ಮ ಸಹೋದರ ನಿಗೆ ಸಂದೇಶ ರವಾನಿಸಿದ್ದರು. ಇದು ಬಹಿರಂಗವಾದ ಕೆಲವೇ ಕ್ಷಣಗಳಲ್ಲಿ ಕಾರ್ಯಾಚರಣೆ ನಡೆಸಿ, ಇಡೀ ತಂಡವನ್ನು ರಕ್ಷಿಸಲಾಗಿದೆ. ಮನಾಲಿ ಯಿಂದ 80 ಕಿ.ಮೀ. ದೂರವಿರುವ ಛಾತ್ರಾ ಎಂಬ ಪ್ರದೇಶಕ್ಕೆ 2 ವಾರಗಳ ಹಿಂದೆಯೇ ಚಿತ್ರತಂಡವು ಚಿತ್ರೀಕರಣಕ್ಕಾಗಿ ತೆರಳಿತ್ತು

Advertisement
Advertisement

Udayavani is now on Telegram. Click here to join our channel and stay updated with the latest news.

Next