Advertisement
ಹೌದು, ದೇಶದ ಯಾವುದೇ ಭಾಗಕ್ಕೆ ವಿದೇಶಿಗರು ಬಂದರೆ, ಭಾರತೀಯರು ವಿದೇಶಕ್ಕೆ ಹೋಗಿ ಮರಳಿದರೆ ಅವರ ಆರೋಗ್ಯ ತಪಾಸಣೆ ಮಾಡುವ ಜತೆಗೆ 14 ದಿನಗಳ ಕಾಲ ಮನೆಯಲ್ಲಿಯೇ ಇದ್ದು, ಆರೋಗ್ಯದ ಕುರಿತು ನಿಗಾ ವಹಿಸಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಅದರಲ್ಲೂ ಮಾ. 13ರಿಂದ ಯಾರೇ ವಿದೇಶಿಗರು ಬಂದಲ್ಲಿ, ನಮ್ಮವರು ವಿದೇಶಕ್ಕೆ ಹೋಗಿ ಮರಳಿದ್ದಲ್ಲಿ ಅವರನ್ನು ಕಡ್ಡಾಯವಾಗಿ ಗೃಹ ಬಂಧನದಲ್ಲಿಡಲಾಗುತ್ತಿದೆ.
ಜಿಲ್ಲೆಯ ಅಂತರ್‌ರಾಷ್ಟ್ರೀಯ ಪ್ರವಾಸಿ ತಾಣ ಪಟ್ಟದಕಲ್ಲ, ರಾಷ್ಟ್ರೀಯ ಸ್ಮಾರಕಗಳಾದ ಬಾದಾಮಿ, ಐಹೊಳೆ ಮುಂತಾದ ಪ್ರವಾಸಿ ತಾಣಗಳಿಗೆ ಮಾ. 10ರಿಂದ ಮಾ. 15ರ ವರೆಗೆ ಒಟ್ಟು 278 ಜನ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಅದರಲ್ಲಿ ಅತಿಹೆಚ್ಚು ರಷ್ಯಾ, ಪ್ರಾನ್ಸ ದೇಶದ ಪ್ರಜೆಗಳೇ ಹೆಚ್ಚು ಭೇಟಿ ನೀಡಿದ್ದು,ಅಮೆರಿಕ, ಬ್ರಿಟನ್ ಹಾಗೂ ಕೆನಡಾ ದೇಶದ ಪ್ರವಾಸಿಗರೂ ಬಂದು ಹೋಗಿದ್ದಾರೆ.
Related Articles
Advertisement
ಒಂದು ವಾರ ಬಂದ್ :ಕೊನೊರಾ ಭೀತಿಯಲ್ಲೂ ದೇಶ- ವಿದೇಶಿಗರ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ವೀಕ್ಷಣೆಗೆ ನಿರ್ಬಂಧ ಹೇರಲಾಗಿದೆ. ಮಾ. 15ರ ಬೆಳಗ್ಗೆ 6ರಿಂದ ಮಾರ್ಚ 22ರ ಬೆಳಗ್ಗೆ 6ರ ವರೆಗೆ ಭಾರತೀಯರು, ವಿದೇಶಿಗರು ಹಾಗೂ ಸ್ಥಳೀಯರ್‍ಯಾರೂ ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತಿಲ್ಲ. ಅದರಲ್ಲೂ ಪ್ರವಾಸಿ ತಾಣಗಳಲ್ಲಿ ಗುಂಪು ಗುಂಪಾಗಿ ಬಂದು ವೀಕ್ಷಣೆ ಮಾಡುವಂತಿಲ್ಲ. ಈ ಕುರಿತು ಬಾಗಲಕೋಟೆಯ ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ|ಕೆ. ರಾಜೇಂದ್ರ, ಅಧಿಕೃತ ಆದೇಶ ಹೊರಡಿಸಿದ್ದಾರೆ.