Advertisement

Manipur: ಮಣಿಪುರದಲ್ಲಿ ಒಟ್ಟಾರೆ 175 ಸಾವು

10:55 PM Sep 15, 2023 | Team Udayavani |

ಇಂಫಾಲ: ಮಣಿಪುರದಲ್ಲಿ ಜನಾಂಗೀಯ ಗಲಭೆ ಆರಂಭವಾದ ಮೇ ತಿಂಗಳಿಂದ ಇಲ್ಲಿಯವರೆಗೆ ಒಟ್ಟು 175 ಮಂದಿ ಮೃತಪಟ್ಟಿದ್ದು, 1,118 ಜನರು ಗಾಯಗೊಂಡಿದ್ದಾರೆ ಹಾಗೂ ಇತರೆ 33 ಮಂದಿ ನಾಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಒಟ್ಟು 4,786 ಮನೆಗಳಿಗೆ ಹಾಗೂ 386 ಧಾರ್ಮಿಕ ಸ್ಥಳಗಳಿಗೆ ಬೆಂಕಿ ಹಚ್ಚಲಾಗಿದೆ.

Advertisement

ಈ ಸಂಬಂಧ ಒಟ್ಟು 5,172 ಪ್ರಕರಣಗಳು ದಾಖಲಾಗಿದೆ. ಪೊಲೀಸರಿಂದ ಒಟ್ಟು 5,668 ಶಸ್ತ್ರಾಸ್ತ್ರಗಳನ್ನು ಲೂಟಿಕೋರರು ದೋಚಿದ್ದಾರೆ. ಈ ಪೈಕಿ 1,329 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಜತೆಗೆ 400 ಬಾಂಬ್‌ಗಳು ಹಾಗೂ 15,050 ಮದ್ದು-ಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದೇ ವೇಳೆ ರಾಜ್ಯದಲ್ಲಿ ಕನಿಷ್ಠ 360 ಅಕ್ರಮ ಬಂಕರ್‌ಗಳನ್ನು ಭದ್ರತಾ ಪಡೆಗಳು ನಾಶಪಡಿಸಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next