Advertisement
ಪ್ರತೀ ವರ್ಷ ಮೇ 31ಕ್ಕೆ ಇದನ್ನು ಆಚರಿಸಲಾಗುತ್ತದೆ; ಜಾಗತಿಕವಾಗಿ ತಂಬಾಕಿನ ಬಳಕೆಯಿಂದ ಕನಿಷ್ಠ 24 ತಾಸುಗಳ ಕಾಲ ದೂರವಿರುವುದನ್ನು ಪ್ರೋತ್ಸಾಹಿಸುವ ಗುರಿಯನ್ನು ಇದು ಹೊಂದಿದೆ.
Related Articles
Advertisement
ಒಟ್ಟಾರೆಯಾಗಿ ಹೇಳುವುದಾದರೆ ಧೂಮಪಾನವನ್ನು ಮತ್ತು ಇತರ ಸ್ವರೂಪಗಳಲ್ಲಿ ತಂಬಾಕು ಬಳಕೆಯನ್ನು ತ್ಯಜಿಸುವುದರಿಂದ ಗಂಟಲು ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಒಟ್ಟು ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ದೂರ ಮಾಡಲು ಕೆಲವು ಆರೋಗ್ಯಯುತ ಜೀವನ ವಿಧಾನ ಆಯ್ಕೆಗಳನ್ನು ಶಿಫಾರಸು ಮಾಡಲಾಗಿದೆ:
- ತಂಬಾಕು ಬಳಕೆ ತ್ಯಜಿಸಿ: ಇದು ಅತ್ಯಂತ ನಿರ್ಣಾಯಕವಾದ ಹೆಜ್ಜೆಯಾಗಿದೆ. ಧೂಮಪಾನವನ್ನು ಮತ್ತು ಇತರ ಯಾವುದೇ ಸ್ವರೂಪದಲ್ಲಿ ತಂಬಾಕು ಬಳಕೆಯನ್ನು ತ್ಯಜಿಸುವುದರಿಂದ ಗಂಟಲು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯ ಗಣನೀಯವಾಗಿ ಕಡಿಮೆಯಾಗುತ್ತದೆಯಲ್ಲದೆ ಒಟ್ಟಾರೆ ಉತ್ತಮ ಆರೋಗ್ಯಕ್ಕೆ ಕಾರಣವಾಗುತ್ತದೆ.
- ಮದ್ಯಪಾನ ಮಿತಿಯಲ್ಲಿರಲಿ: ನೀವು ತಂಬಾಕು ಬಳಸುತ್ತಿರುವಿರಾದರೆ ಅದರ ಜತೆಗೆ ಅತಿಯಾದ ಮದ್ಯಪಾನವು ಗಂಟಲು ಕ್ಯಾನ್ಸರ್‌ನ ಅಪಾಯವನ್ನು ಇಮ್ಮಡಿಗೊಳಿಸುತ್ತದೆ. ಮದ್ಯಪಾನವನ್ನು ಕಡಿಮೆ ಮಾಡಿ ಅಥವಾ ಪೂರ್ಣ ತ್ಯಜಿಸಿ.
- ಸಮತೋಲಿತ ಆಹಾರ ಕ್ರಮ ಪಾಲಿಸಿ: ವೈವಿಧ್ಯಮಯ ಹಣ್ಣುಗಳು, ತರಕಾರಿ, ಇಡೀ ಧಾನ್ಯಗಳು ಮತ್ತು ಲೀನ್ ಪ್ರೊಟೀನ್‌ಗಳನ್ನು ಸೇವಿಸುವುದರತ್ತ ಗಮನ ಹರಿಸಿ. ಆರೋಗ್ಯಯುತ, ಸಮತೋಲಿತ ಆಹಾರವು ದೇಹಕ್ಕೆ ಒಟ್ಟು ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳುವುದಕ್ಕೆ ಅಗತ್ಯವಾದ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುತ್ತದೆ.
- ಆರೋಗ್ಯಯುತ ದೇಹತೂಕ ಕಾಪಾಡಿಕೊಳ್ಳಿ: ಸಮತೋಲಿತ ಆಹಾರ ಮತ್ತು ನಿಯಮಿತವಾದ ವ್ಯಾಯಾಮದ ಮೂಲಕ ಆರೋಗ್ಯಯುತ ದೇಹತೂಕವನ್ನು ಕಾಪಾಡಿ.
- ದೈಹಿಕವಾಗಿ ಚಟುವಟಿಕೆಯಿಂದ ಇರಿ: ನಿಯಮಿತವಾಗಿ ವ್ಯಾಯಾಮ ಮಾಡುವುದು ದೇಹತೂಕವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದಕ್ಕೆ ಮಾತ್ರವೇ ಅಲ್ಲದೆ ರೋಗನಿರೋಧಕ ಶಕ್ತಿಯನ್ನು ಚೆನ್ನಾಗಿರಿಸಿಕೊಳ್ಳಲು ಸಹಾಯ ಮಾಡುವ ಮೂಲಕ ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ. ವಾರಕ್ಕೆ 150 ನಿಮಿಷಗಳ ಕಾಲ ಮಧ್ಯಮ ತೀವ್ರತೆಯ ವ್ಯಾಯಾಮ ಮಾಡುವ ಗುರಿ ಇರಿಸಿಕೊಳ್ಳಿ.
- ಬಾಯಿಯ ನೈರ್ಮಲ್ಯ ಚೆನ್ನಾಗಿ ಇರಿಸಿಕೊಳ್ಳಿ: ಬಾಯಿಯ ನೈರ್ಮಲ್ಯ ಕಳಪೆಯಾಗಿರುವುದು ಕೂಡ ಗಂಟಲು ಕ್ಯಾನ್ಸರ್‌ಗೆ ಕೊಡುಗೆ ನೀಡಬಲ್ಲುದು. ಹಲ್ಲುಗಳನ್ನು ನಿಯಮಿತವಾಗಿ ಬ್ರಶ್ ಮಾಡಿ ಮತ್ತು ಫ್ಲಾಸ್ ಮಾಡಿ, ನಿಯಮಿತವಾದ ತಪಾಸಣೆ ಮತ್ತು ಶುಚೀಕರಣ ಪ್ರಕ್ರಿಯೆಗಾಗಿ ದಂತವೈದ್ಯರನ್ನು ಭೇಟಿ ಮಾಡಿ.
- ನಿಯಮಿತವಾಗಿ ತಪಾಸಣೆ ಮಾಡಿಸಿಕೊಳ್ಳಿ: ನಿಮ್ಮ ಆರೋಗ್ಯ ಸೇವಾ ಪೂರೈಕೆದಾರರ ಬಳಿ ನಿಯಮಿತವಾಗಿ ತಪಾಸಣೆ, ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಗಂಟಲು ಕ್ಯಾನ್ಸರ್‌ನ ಯಾವುದೇ ಚಿಹ್ನೆಗಳನ್ನು ಬೇಗನೆ ಗುರುತಿಸಬಹುದಾಗಿದೆ. ಆರಂಭಿಕ ಹಂತದಲ್ಲಿಯೇ ಪತ್ತೆಹಚ್ಚಿದರೆ ಗುಣಪಡಿಸುವುದಕ್ಕೆ ಸುಲಭವಾಗಿರುತ್ತದೆ.