Advertisement
“ಈಗಾಗಲೇ ಮಳೆಗಾಲ ಆರಂಭವಾಗಿದ್ದು, ನಗರದಲ್ಲಿ ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ. ಹೀಗಿ ದ್ದಾಗ ವಾಹನಗಳು ತುಕ್ಕು ಹಿಡಿದು ನೀರು ನಿಲ್ಲುವ ಸಾಧ್ಯತೆ ಹೆಚ್ಚಿದೆ. ಇನ್ನು, ಈ ಟಿಪ್ಪರ್‌ನ ಕೆಲ ಭಾಗ ಈಗಾಗಲೇ ತುಕ್ಕು ಹಿಡಿದಿದೆ. ಬಿಡಿ ಭಾಗಗಳೆಲ್ಲ ಹಾಳಾಗಿವೆ. ಹೀಗಿರುವಾಗ ಟಿಪ್ಪರ್ ಅನ್ನು ತೆರವು ಮಾಡಬೇಕು’ ಎನ್ನುತ್ತಾರೆ ಸ್ಥಳೀಯರಾದ ಗಾವಳಿ ಸುರೇಶ್ ಎನ್. ಶೆಟ್ಟಿ ಅವರು. ಈ ಬಗ್ಗೆ ಮಂಗಳೂರು ಟ್ರಾಫಿಕ್ ವಿಭಾಗದ ಎಸಿಪಿ ಮಂಜುನಾಥ ಶೆಟ್ಟಿ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ಈ ಹಿಂದೆ ಮರೋಳಿಯಲ್ಲಿ ಗ್ರಾಮಾಂತರ ಪೊಲೀಸ್ ಠಾಣೆ ಇತ್ತು. ಆ ಸಂದರ್ಭ ಮುಟ್ಟುಗೋಲು ಹಾಕಿದ ವಾಹನ ಇದಾಗಿದೆ. ಆದರೆ ಪೊಲೀಸ್ ಠಾಣೆ ಸದ್ಯ ವಾಮಂಜೂರಿಗೆ ಸ್ಥಳಾಂತರ ಮಾಡಲಾಗಿದೆ. ಈ ಟಿಪ್ಪರ್ ತೆರವು ಮಾಡುವ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ’ ಎಂದಿದ್ದಾರೆ. Advertisement
3 ವರ್ಷಗಳಿಂದ ರಸ್ತೆ ಬದಿ ನಿಂತಿದೆ ಕಲ್ಲು ತುಂಬಿದ ಟಿಪ್ಪರ್ !
12:24 PM Jun 25, 2020 | mahesh |
Advertisement
Udayavani is now on Telegram. Click here to join our channel and stay updated with the latest news.