Advertisement
ಅದರ ಭಾಗವಾಗಿ ಆಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಆರ್.ಲತಾ ಅವರು ಸಕಾಲ ಅರ್ಜಿದಾರರಿಗೆ ಮ್ಯೂಟೇಷನ್ ಹಾಗೂ ಪಹಣಿಗಳನ್ನು ವಿತರಿಸಿದರು. ಜತೆಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಸಕಾಲ ಅರಿವು ಜಾಥಾ” ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
Related Articles
Advertisement
ಈ ಜಾಥಾದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಇಂದಿರಾ ಆರ್.ಕಬಾಡೆ, ತಾಲೂಕು ಆರೋಗ್ಯ ಕಲ್ಯಾಣಾ ಧಿಕಾರಿ ಆರ್.ಮಂಜುಳಾ ಆರೋಗ್ಯಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳಿದ್ದರು.
ಬಾಗೇಪಲ್ಲಿ ತಾಲೂಕಿನಲ್ಲಿ ಬುಧವಾರ ತಾಲೂಕು ಆಡಳಿತ, ಪ್ರಾದೇಶಿಕ ಅರಣ್ಯ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಸಕಾಲ ದಶಮಾನೋತ್ಸವ ಅಂಗವಾಗಿ ಯೋಜನೆಗಳ ಮಹತ್ವವನ್ನು ನಗರದ ಮುಖ್ಯ ರಸ್ತೆ ಹಾಗೂ ಬೀದಿಗಳಲ್ಲಿ ಬ್ಯಾನರ್ ಗಳನ್ನು ಹಿಡಿದು ಜಾಥಾದ ಮೂಲಕ ಸಾರಿದರು. ಜಾಥಾದಲ್ಲಿ ತಾಲೂಕು ಮಟ್ಟದ ಎಲ್ಲಾ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಜರಿದ್ದರು. ಇದೇ ರೀತಿ ಚಿಂತಾಮಣಿ, ಶಿಡ್ಲಘಟ್ಟ, ಗುಡಿಬಂಡೆಯಲ್ಲಿಯೂ ಕಾರ್ಯಕ್ರಮಗಳು ಜರುಗಿದವು.
ಗಮನಾರ್ಹ ಸಾಧನೆ: ಸಕಾಲ ಯೋಜನೆ ಅನುಷ್ಠಾನದಲ್ಲಿ ಜಿಲ್ಲೆ ಸತತವಾಗಿ ಮುಂಚೂಣಿಯಲ್ಲಿದ್ದು, ಸದರಿ ಯೋಜನೆ ಆರಂಭವಾದಾಗಿನಿಂದ (2012 ರಿಂದ) ಈ ವರೆಗೆ ಸರ್ಕಾರ ಈ ಯೋಜನೆಯ ಪ್ರಗತಿಯ ಅಂಕಿ ಅಂಶಗಳನ್ನು ಬಿಡುಗಡೆ ಮಾಡಿದ ಮಾಹೆಗಳ ಪೈಕಿ ಚಿಕ್ಕಬಳ್ಳಾಪುರ ಜಿಲ್ಲೆ ರಾಜ್ಯದಲ್ಲಿಯೇ 49 ಬಾರಿ (ತಿಂಗಳು) ಪ್ರಥಮ ಸ್ಥಾನ ಉಳಿಸಿಕೊಂಡಿದೆ.
ಜಿಲ್ಲಾ ಡಳಿತದ ತ್ವರಿತ ಸ್ಪಂದನೆಯ ಆಡಳಿತಕ್ಕೆ ಹಾಗೂ ಸರ್ಕಾರದ ಎಲ್ಲಾ ಯೋಜನೆಗಳ ಅನುಷ್ಠಾನಕ್ಕೆ ಕೈಗನ್ನಡಿಯಾಗಿದೆ ಕರ್ನಾಟಕ ಸಕಾಲ ಸೇವೆಗಳ ಅ ನಿಯಮದಡಿ ಸಕಾಲ ಯೋಜನೆ ಆರಂಭದಿಂದ ಈ ವರೆಗೆ ಸರಾಸರಿ ಶೇ. 99.15ರ ಸರಾಸರಿಯಲ್ಲಿ ವಿಲೇವಾರಿ ಮಾಡಿದೆ. ಈ ಪೈಕಿ 49 ಬಾರಿ ಪ್ರಥಮ, 14 ಬಾರಿ ದ್ವಿತೀಯ ಹಾಗೂ 10 ಬಾರಿ ತೃತೀಯ ಸ್ಥಾನ ಗಳಿಸಿದೆ. ಒಟ್ಟಾರೆ 49 ಬಾರಿ (ಮಾಹೆ) ರಾಜ್ಯ ದಲ್ಲಿಯೇ ಚಿಕ್ಕಬಳ್ಳಾಪುರ ಜಿಲ್ಲೆ ಪ್ರಥಮಸ್ಥಾನ ಗಳಿಸಿ ಜಿಲ್ಲಾಡಳಿತ ಗಮನಾರ್ಹ ಸಾಧನೆ ಮಾಡಿದೆ. ಜಿಲ್ಲೆಗೆ ಪ್ರಶಂಸನೀಯ ಪತ್ರ
ಚಿಕ್ಕಬಳ್ಳಾಪುರ ಜಿಲ್ಲಾ ಸಕಾಲ ತಂಡಕ್ಕೆ ಅತ್ಯುತ್ತಮ ಹಾಗೂ ಅಸಾಧಾರಣ ನಾಯಕತ್ವವನ್ನು ನೀಡಿ ಮಾರ್ಚ್ 2022 ಮಾಹೆಯಲ್ಲಿ ರಾಜ್ಯದ 31 ಜಿಲ್ಲೆಗಳ ಪೈಕಿ ಪ್ರಥಮ ಶ್ರೇಯಾಂಕವನ್ನು ಪಡೆವ ಮೂಲಕ ಜಿಲ್ಲಾ ಧಿಕಾರಿ ಆರ್.ಲತಾ ಅವರು ಏ. 4 ರಂದು ರಾಜಧಾನಿ ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ ಪ್ರಶಂಸನೀಯ ಪತ್ರ ಪಡೆದಿದ್ದರು.ಜಿಲ್ಲೆಯಲ್ಲಿ ಮಾರ್ಚ್ ಮಾಹೆಯಲ್ಲಿ ಒಟ್ಟು 81,842 ಅರ್ಜಿಗಳನ್ನು ಸಕಾಲ ಯೋಜನೆಯಡಿ ಸ್ವೀಕರಿಸಿ, ಹಿಂದಿನ ತಿಂಗಳೂ ಸೇರಿ 92,786 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ. , 4,699 ಅರ್ಜಿಗಳು ಸೂಕ್ತ ದಾಖಲೆಗಳಿಲ್ಲದ ಕಾರಣ ತಿರಸ್ಕೃತಗೊಂಡಿವೆ. 2,165 ಅರ್ಜಿಗಳು ಬಾಕಿಯಿದೆ.