Advertisement

ಅನರ್ಹರ ಶಾಸಕರಿಗೆ ಟಿಕೆಟ್, ಬಿಜೆಪಿಗೆ ಲಾಭವೇ? ಕಳೆದ ಬಾರಿ ಆ ಕ್ಷೇತ್ರದ ಫಲಿತಾಂಶ ಹೇಗಿತ್ತು?

11:13 AM Nov 14, 2019 | Nagendra Trasi |

ಬೆಂಗಳೂರು: ಅನರ್ಹ ಶಾಸಕರ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠ ಹಿಂದಿನ ಸ್ಪೀಕರ್ ರಮೇಶ್ ಕುಮಾರ್ ಅವರ ಆದೇಶವನ್ನು ಎತ್ತಿಹಿಡಿದಿದ್ದು, ಉಪಚುನಾವಣೆಯಲ್ಲಿ ಸ್ಪರ್ಧಿಸಲು ಹಸಿರು ನಿಶಾನೆ ತೋರಿಸಿದೆ.

Advertisement

ಇದೀಗ 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ರಾಜಕೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು ನಡೆಯತೊಡಗಿದೆ. ಆದರೆ ಹದಿನೈದು ಕ್ಷೇತ್ರಗಳಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ಕಳೆದ ಬಾರಿ ಸ್ಪರ್ಧಿಸಿ ಪರಾಜಯಗೊಂಡ ಬಿಜೆಪಿ ಅಭ್ಯರ್ಥಿಗಳಿಗೆ ಹೆಚ್ಚಿನ ನಿರಾಸೆ ತಂದಿದೆ.

ಯಾಕೆಂದರೆ ಅವರ ಕ್ಷೇತ್ರಗಳನ್ನು ಅನರ್ಹರಿಗೆ ಬಿಟ್ಟುಕೊಡಬೇಕಾದ ಅನಿವಾರ್ಯತೆ ಎದುರಾಗಿದೆ. ಅಷ್ಟೇ ಅಲ್ಲದೇ 15 ಕ್ಷೇತ್ರಗಳಲ್ಲಿ ಕಳೆದ ಬಾರಿ ಬಿಜೆಪಿಯಿಂದ ಸೋತ ಅಭ್ಯರ್ಥಿಗಳು ಯಾರು? ಎಷ್ಟು ಮತದ ಅಂತರದಿಂದ ಸೋತಿದ್ದಾರೆ ಎಂಬ ವಿಶ್ಲೇಷಣೆ ಇಲ್ಲಿದೆ…

ಹದಿನೈದು ಕ್ಷೇತ್ರಗಳು ಯಾವುದು?

1)ಕಾಂಗ್ರೆಸ್ ನ ಬೈರತಿ ಬಸವರಾಜ(ಕೆಆರ್ ಪುರ), 2)ಎಸ್ ಟಿ ಸೋಮಶೇಖರ್(ಕಾಂಗ್ರೆಸ್-ಯಶವಂತಪುರ), 3)ರೋಷನ್ ಬೇಗ್ (ಕಾಂಗ್ರೆಸ್-ಶಿವಾಜಿನಗರ), 4)ಎಂಟಿಬಿ ನಾಗರಾಜ್ (ಕಾಂಗ್ರೆಸ್-ಹೊಸಕೋಟೆ), 5)ಡಾ.ಸುಧಾಕರ್(ಕಾಂಗ್ರೆಸ್-ಚಿಕ್ಕಬಳ್ಳಾಪುರ), 6)ರಮೇಶ್ ಜಾರಕಿಹೊಳಿ(ಕಾಂಗ್ರೆಸ್-ಗೋಕಾಕ್), 7)ಮಹೇಶ್ ಕುಮಟಳ್ಳಿ(ಅಥಣಿ), 8)ಶ್ರೀಮಂತ ಪಾಟೀಲ್ (ಕಾಂಗ್ರೆಸ್-ಕಾಗವಾಡ), 9)ಬಿಸಿ ಪಾಟೀಲ್(ಕಾಂಗ್ರೆಸ್-ಹಿರೇಕೆರೂರು), 10)ಶಿವರಾಮ್ ಹೆಬ್ಬಾರ್ (ಕಾಂಗ್ರೆಸ್-ಯಲ್ಲಾಪುರ), 11)ಆನಂದ್ ಸಿಂಗ್ (ಕಾಂಗ್ರೆಸ್-ವಿಜಯನಗರ), 12)ಆರ್ ಶಂಕರ್ (ಕೆಪಿಜೆಪಿ-ರಾಣೆಬೆನ್ನೂರು), 13)ಎಚ್. ವಿಶ್ವನಾಥ್(ಜೆಡಿಎಸ್-ಹುಣಸೂರು), 14)ಕೆ.ಗೋಪಾಲಯ್ಯ(ಜೆಡಿಎಸ್-ಮಹಾಲಕ್ಷ್ಮಿ ಲೇಔಟ್), 15)ನಾರಾಯಣಗೌಡ(ಜೆಡಿಎಸ್-ಕೆಆರ್ ಪೇಟೆ).

Advertisement

ಕಳೆದ ಚುನಾವಣೆಯಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳಿಗೆ ನಿರಾಸೆ-ಬಿಜೆಪಿಗೆ ಲಾಭವಾಗಲಿದೆಯಾ?

ಅಥಣಿ ಕ್ಷೇತ್ರದಲ್ಲಿ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಮಹೇಶ್ ಕುಮಟಳ್ಳಿ ಪಡೆದ ಮತ 82094, ಪರಾಜಿತ ಬಿಜೆಪಿ ಅಭ್ಯರ್ಥಿ ಲಕ್ಷ್ಮಣ ಸವದಿ ಪಡೆದ ಮತ 79,763.

ಕಾಗವಾಡ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಶ್ರೀಮಂತ್ ಪಾಟೀಲ್ ಪಡೆದ ಮತ 83060, ಬಿಜೆಪಿಯ ರಾಜು ಕಾಗೆ(ಈ ಬಾರಿ ಕೈ ಅಭ್ಯರ್ಥಿ) ಪಡೆದ ಮತ 50118.

ಗೋಕಾಕ್ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರಮೇಶ್ ಜಾರಕಿಹೊಳಿ ಪಡೆದ ಮತ 90,249, ಪರಾಜಿತ ಬಿಜೆಪಿ ಅಭ್ಯರ್ಥಿ ಅಶೋಕ್ ಪೂಜಾರಿ(ಕೈ ಅಭ್ಯರ್ಥಿಯಾಗುವ ಸಾಧ್ಯತೆ) ಪಡೆದ ಮತ 75,969.

ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಮ್ ಹೆಬ್ಬಾರ್ ಪಡೆದ ಮತ 66,290, ಪರಾಜಿತ ಬಿಜೆಪಿ ಅಭ್ಯರ್ಥಿ ಶಿವನಗೌಡ ಪಾಟೀಲ್ ಪಡೆದ ಮತ 64,807.

ಹಿರೇಕೆರೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಸಿ ಪಾಟೀಲ್ ಪಡೆದ ಮತ 72,461, ಬಿಜೆಪಿಯ ಪರಾಜಿತ ಯು ಬಣಾಕಾರ್ ಪಡೆದ ಮತ 71,906.

ರಾಣೆಬೆನ್ನೂರು ಕ್ಷೇತ್ರದಲ್ಲಿ ಕೆಪಿಜೆಪಿಯಿಂದ ಸ್ಪರ್ಧಿಸಿದ್ದ ಆರ್ ಶಂಕರ್ ಪಡೆದ ಮತ 63,910, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಪ್ಪ ಕೋಳಿವಾಡ ಪಡೆದ ಮತ 59,572.

ಬಳ್ಳಾರಿಯ ವಿಜಯನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿದ್ದ ಆನಂದ್ ಸಿಂಗ್ ಪಡೆದ ಮತ 83,214, ಪರಾಜಿತ ಬಿಜೆಪಿ ಅಭ್ಯರ್ಥಿ ಎಚ್.ಆರ್.ಗವಿಯಪ್ಪ ಪಡೆದ ಮತ 74,986.

ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಕೆ.ಸುಧಾಕರ್ ಪಡೆದ ಮತ 82,006, ಜೆಡಿಎಸ್ ನ ಬಚ್ಚೇಗೌಡ ಪಡೆದ ಮತ 51,575.

ಕೆಆರ್ ಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೈರತಿ ಬಸವರಾಜ ಪಡೆದ ಮತ 1,35,404, ಪರಾಜಿತ ಬಿಜೆಪಿ ಅಭ್ಯರ್ಥಿ ನಂದೀಶ್ ರೆಡ್ಡಿ ಪಡೆದ ಮತ 1,02,675.

ಯಶವಂತಪುರ್ ಕಾಂಗ್ರೆಸ್ ಅಭ್ಯರ್ಥಿ ಎಸ್ ಟಿ ಸೋಮಶೇಖರ್ ಪಡೆದ ಮತ 1,15,273, ಪರಾಜಿತ ಜೆಡಿಎಸ್ ನ ಜಯರಾಜ್ ಗೌಡ ಪಡೆದ ಮತ 104,562.

ಮಹಾಲಕ್ಷ್ಮೀ ಲೇಔಟ್ ಕ್ಷೇತ್ರದಲ್ಲಿ ಜೆಡಿಎಸ್ ನ ಕೆ.ಗೋಪಾಲಯ್ಯ ಪಡೆದ ಮತ 88,218, ಪರಾಜಿತ ಬಿಜೆಪಿ ಅಭ್ಯರ್ಥಿ ಎನ್.ಎಲ್. ನರೇಂದ್ರ ಬಾಬು ಪಡೆದ ಮತ 47,118.

ಶಿವಾಜಿನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ನ ರೋಷನ್ ಬೇಗ್ ಪಡೆದ ಮತ 59,742, ಪರಾಜಿತ ಬಿಜೆಪಿ ಅಭ್ಯರ್ಥಿ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪಡೆದ ಮತ 44,702.

ಹೊಸಕೋಟೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂಟಿಬಿ ನಾಗರಾಜ್ ಪಡೆದ ಮತ 98,824, ಪರಾಜಿತ ಬಿಜೆಪಿಯ ಶರತ್ ಕುಮಾರ್ ಬಚ್ಚೇಗೌಡ ಪಡೆದ ಮತ 91,227.

ಕೃಷ್ಣರಾಜ್ ಪೇಟೆ ಕ್ಷೇತ್ರದಲ್ಲಿ ಜೆಡಿಎಸ್ ನಿಂದ ಸ್ಪರ್ಧಿಸಿದ್ದ ನಾರಾಯಣ ಗೌಡ ಪಡೆದ ಮತ 88016, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕೆಬಿ ಚಂದ್ರಶೇಖರ್ ಪಡೆದ ಮತ 70,897.

ಹುಣಸೂರು ಕ್ಷೇತ್ರದಲ್ಲಿ ಸ್ಪರ್ಧಿಸಿದ್ದ ಜೆಡಿಎಸ್ ನ ಎಚ್.ವಿಶ್ವನಾಥ್ ಪಡೆದ ಮತ 91,667, ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಚ್.ಪಿ.ಮಂಜುನಾಥ್ ಪಡೆದ ಮತ 83,092.

Advertisement

Udayavani is now on Telegram. Click here to join our channel and stay updated with the latest news.

Next