Advertisement
ಶೂನ್ಯ ಕೋವಿಡ್ ನೀತಿ ಮತ್ತು ಕುಸಿಯುತ್ತಿರುವ ದೇಶದ ಆರ್ಥಿಕತೆಯ ಹೊರತಾಗಿಯೂ ಮೂರನೇ ಅವಧಿಗೂ ಚೀನ ಅಧ್ಯಕ್ಷರಾಗಿ ಕ್ಸಿ ಜಿನ್‌ಪಿಂಗ್ ಮುಂದುವರಿಯುವ ಸಾಧ್ಯತೆ ದಟ್ಟವಾಗಿದೆ.
Related Articles
ಇನ್ನೊಂದೆಡೆ ಶನಿವಾರವೂ ಚೀನ ಸರ್ಕಾರದ ಶೂನ್ಯ ಕೊರೊನಾ ನೀತಿ ವಿರುದ್ಧ ಹಾಗೂ ಜಿನ್‌ಪಿಂಗ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವಂತೆ ಆಗ್ರಹಿಸಿ ಬೀಜಿಂಗ್‌ನಲ್ಲಿ ಪ್ರತಿಭಟನೆ ನಡೆದಿದೆ.
Advertisement
ಈ ವೇಳೆ ಪ್ರದರ್ಶಿಸಲಾದ ಬ್ಯಾನರ್‌ನಲ್ಲಿ “ಕೋವಿಡ್ ಪರೀಕ್ಷೆಗೆ ಇಲ್ಲ ಎಂದು ಹೇಳಿ, ಆಹಾರಕ್ಕೆ ಹೌದು ಎಂದು ಹೇಳಿ. ಲಾಕ್‌ಡೌನ್ ಇಲ್ಲ, ಸ್ವಾತಂತ್ರ್ಯಕ್ಕೆ ಹೌದು. ಸುಳ್ಳಿಗೆ ಇಲ್ಲ, ಘನತೆಗೆ ಹೌದು. ಸಾಂಸ್ಕೃತಿಕ ಕ್ರಾಂತಿ ಬೇಡ, ಸುಧಾರಣೆಗೆ ಹೌದು. ಮಹಾನ್ ನಾಯಕನಿಗೆ ಇಲ್ಲ ಎಂದು ಹೇಳಿ, ಮತ ಚಲಾಯಿಸಲು ಹೌದು ಎಂದು ಹೇಳಿ. ಗುಲಾಮರಾಗಬೇಡಿ, ನಾಗರಿಕರಾಗಿರಿ’ ಎಂದು ಬರೆಯಲಾಗಿತ್ತು.
ಅಧ್ಯಕ್ಷರ ಆಯ್ಕೆ ಮತ್ತು ಪ್ರತಿಭಟನೆ ಹಿನ್ನೆಲೆಯಲ್ಲಿ ಬೀಜಿಂಗ್ ಸೇರಿದಂತೆ ದೇಶಾದ್ಯಂತ ಬಿಗಿ ಭದ್ರತೆ ಏರ್ಪಡಿಸಲಾಗಿದೆ.
ಇನ್ನೊಂದೆಡೆ ಚೀನದಲ್ಲಿ ಸಾಮಾಜಿಕ ಜಾಲತಾಣಗಳಿಗೆ ನಿಯಂತ್ರಣ ಹೇರಲಾಗಿದೆ. ಇಂಟರ್ನೆಟ್‌ನಲ್ಲಿ ಬೀಜಿಂಗ್, ಹೈದನ್, ಬ್ರಿಡ್ಜ್, ಬ್ರೇವ್ ಮ್ಯಾನ್, ವಾರಿಯರ್ ಮತ್ತು ಕರೇಜ್ ಪದಗಳ ಸರ್ಚ್ ಟೈಮ್ ಮೇಲೆ ಸೆನ್ಸಾರ್ ವಿಧಿಸಲಾಗಿದೆ.