Advertisement

ಅಲೆಮಾರಿ ಮಕ್ಕಳಿಗೊಂದು ಟೆಂಟ್‌ ಶಾಲೆ

05:52 PM Nov 08, 2021 | Team Udayavani |

ಸಿಂಧನೂರು: ನಗರದ ಸುಕಾಲಪೇಟೆಯಲ್ಲಿ ಅಲೆಮಾರಿ ಕುಟುಂಬಗಳು ನೆಲೆಸಿರುವ ಜಾಗದಲ್ಲಿ ಕಳೆದ 6 ತಿಂಗಳ ಹಿಂದೆ ಟೆಂಟ್‌ ಶಾಲೆ ತೆರೆಯಲಾಗಿದೆ.

Advertisement

ಸಮಾಜ ಸೇವಕ ಸುರೇಶ ಹಚ್ಚೊಳ್ಳಿ, ನಾಗರಾಜ ಬಾದರ್ಲಿ, ಶಂಬಣ್ಣ ಸುಕಾಲಪೇಟೆ, ನಾಗರಾಜ್‌ ಕವಿತಾಳ ಅವರನ್ನೊಳಗೊಂಡ ಸ್ನೇಹಿತರ ಬಳಗ, ಶಿಕ್ಷಕ ಪ್ರಶಾಂತ್‌ ದಾನಪ್ಪ ಅವರ ನೆರವಿನೊಂದಿಗೆ ಇಲ್ಲೊಂದು ಶಾಲೆ ತೆರೆಯುವಲ್ಲಿ ಯಶಸ್ಸಿಯಾಗಿದೆ. ಪಾಲಕರು ಕೂಡ ಕೈಜೋಡಿಸಿ ಟೆಂಟ್‌ ಹಾಕಿಕೊಟ್ಟಿದ್ದು, ಅಲ್ಲಿ ನೆಲಹಾಸು (ಬಂಡೆ) ಹಾಕಿಸಿ ಅಲೆಮಾರಿ ಮಕ್ಕಳ ಶಾಲೆ ಎಂಬ ಫಲಕ ಹಾಕಲಾಗಿದೆ. ನಿತ್ಯ ಸಂಜೆ 5 ಗಂಟೆಯಿಂದ 7 ಗಂಟೆ ತನಕ 53 ಮಕ್ಕಳಿಗೆ ಕಲಿಕೆ ನಡೆಯುತ್ತಿದ್ದು, ಸ್ವಯಂ ಸೇವಕರನ್ನು ಪಾಠಕ್ಕೆ ಬಳಸಿಕೊಳ್ಳಲಾಗುತ್ತಿದೆ.

ಮುಖ್ಯವಾಹಿನಿಗೆ ತರುವ ಕನಸು

80ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿದ್ದರೂ ಇಲ್ಲಿನ ಒಬ್ಬ ವಿದ್ಯಾರ್ಥಿ ಮಾತ್ರ ಪಿಯುಸಿ ದಾಟಿದ್ದಾನೆ. 4-5ನೇ ತರಗತಿಗೆ ಕಾಲಿಟ್ಟರೂ ಇಲ್ಲಿನ ಮಕ್ಕಳಿಗೆ ಕನ್ನಡ ಓದಲು ಬರುತ್ತಿಲ್ಲ. ಕಲಿಕೆಯಲ್ಲಿ ಹಿಂದುಳಿದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಈ ಟೆಂಟ್‌ ಗೆ ಕರೆ ತರಲಾಗುತ್ತಿದೆ. ಪಾಲಕರ ಮನವೊಲಿಸಿದ ಪರಿಣಾಮ ಅವರು ಕೂಡ ಸಾಥ್‌ ನೀಡುತ್ತಿದ್ದು, ಟೆಂಟ್‌ನಲ್ಲಿ ಅಕ್ಷರಾಭ್ಯಾಸ ಮುಂದುವರಿದಿದೆ.

ಇದನ್ನೂ ಓದಿ: ಶಾಸಕ ಬಾಲಚಂದ್ರ ಜಾರಕಿಹೊಳಿ ಅಪರೂಪದ ರಾಜಕಾರಣಿ: ಶ್ರೀಶೈಲ ಭಗವತ್ಪಾದರು

Advertisement

ಬುಡಕಟ್ಟು, ಅಲೆಮಾರಿ ಕುಟುಂಬದ ಮಕ್ಕಳು ಶಿಕ್ಷಣದ ಮೂಲಕವೇ ಮುಂದೆ ಬರಬೇಕು. ಅವರಲ್ಲಿ ಜಾಗೃತಿ ಮೂಡಿಸಿ ಅಕ್ಷರ ಕಲಿಕೆಗೆ ತರುವ ಉದ್ದೇಶದಿಂದ ಟೆಂಟ್‌ ನಿರ್ಮಿಸಿ, ಶಾಲೆ ತೆರೆಯಲು ಕೈ ಜೋಡಿಸಿದ್ದು, ಹಲವರ ಸಹಕಾರವಿದೆ. -ಸುರೇಶ ಹಚ್ಚೊಳ್ಳಿ, ಸುಕಾಲಪೇಟೆ

ನಾನಾ ಕಡೆಗಳಲ್ಲಿ ಈ ರೀತಿ ಟೆಂಟ್‌ ಶಾಲೆಗಳನ್ನು ತೆಗೆದು ಅಲೆಮಾರಿ ಮಕ್ಕಳನ್ನು ಶಿಕ್ಷಣದ ಮುಖ್ಯವಾಹಿನಿಗೆ ಕರೆತರುತ್ತಿದ್ದು, ಸಿಂಧನೂರಿನಲ್ಲೂ ಯುವ ಪಡೆಯ ನೆರವಿನಿಂದ ಇದು ಸಾಧ್ಯವಾಗಿದೆ. -ಪ್ರಶಾಂತ ದಾನಪ್ಪ, ಅಲೆಮಾರಿ ಸಂಜೆ ಶಾಲೆ ನಿರ್ದೇಶಕರು, ಮಸ್ಕಿ
-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next