ಕೀವ್: ಉಕ್ರೇನ್ ಮೇಲೆ ನಡೆಸುತ್ತಿರುವ ದಾಳಿಗೆ 36 ಗಂಟೆಗಳ ಕಾಲ ವಿರಾಮ ನೀಡಲು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗುರುವಾರ ನಿರ್ಧರಿಸಿದ್ದಾರೆ.
ಕಳೆದ ವರ್ಷದ ಫೆ.24ರಂದು ಯುದ್ಧ ಘೋಷಣೆ ಮಾಡಿದ ಇದೇ ಮೊದಲ ಬಾರಿಗೆ ಇಂಥ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ವಿಶ್ಲೇಷಣೆಗಳು ನಡೆದಿವೆ.
ರಷ್ಯನ್ ಆರ್ಥಡಾಕ್ಸ್ ಚರ್ಚ್‌ನ ಧರ್ಮಗುರು ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾಗಿ ಕದನ ವಿರಾಮ ಜಾರಿಗೆ ತರುವ ಬಗ್ಗೆ ಮಾತುಕತೆ ನಡೆಸಿದ್ದು. ಅದಕ್ಕೆ ಪೂರಕವಾಗಿ ಪುಟಿನ್ ತೀರ್ಮಾನ ಪ್ರಕಟಿಸಿದ್ದಾರೆ.
ಆದರೆ, ಘೋಷಣೆಯಿಂದಾಗಿ 11 ತಿಂಗಳಿಂದ ನಡೆಯುತ್ತಿರುವ ಸಮರ ಪೂರ್ಣ ಪ್ರಮಾಣದಲ್ಲಿ ನಿಲ್ಲಲಿದೆ ಎಂಬ ಆಶಾಭಾವನೆ ಗೋಚರಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ.
ಶುಕ್ರವಾರ ಮಧ್ಯಾಹ್ನದಿಂದ ಶನಿವಾರ ಮಧ್ಯರಾತ್ರಿಯ ವರೆಗೆ ಕದನ ವಿರಾಮ ಜಾರಿಯಲ್ಲಿ ಇರಲಿದೆ.
ಎರಡು ದೇಶಗಳ ನಡುವೆ ನಡೆಯುತ್ತಿರುವ ಕದನಕ್ಕೆ ಪೂರ್ಣ ವಿರಾಮ ತರುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದಿದ್ದರೂ, ಅದು ಫಲ ನೀಡಿಲ್ಲ.