ಹೊಸಬೆಟ್ಟು: ಕೀರ್ತಿಶೇಷ ಶ್ರೀ ಹರಿದಾಸ ರತ್ನ ಹೊಸಬೆಟ್ಟು ವಾದೀಶ ಆಚಾರ್ಯರ ಕನಸಿನಂತೆ ಭಕ್ತರಿಗಾಗಿ, ಭಕ್ತರಿಂದ ಸರ್ವರ ಸಹಕಾರದಲ್ಲಿ ಭಕ್ತರಿಗೋಸ್ಕರ 1997ರಲ್ಲಿ ನಿರ್ಮಾಣಗೊಂಡ ಹೊಸಬೆಟ್ಟು ನವವೃಂದಾವನ ಸೇವಾ ಪ್ರತಿಷ್ಠಾನ, ಶ್ರೀ ರಾಘವೇಂದ್ರ ಸ್ವಾಮಿ ಮಠ ಹೊಸಬೆಟ್ಟುವಿನಲ್ಲಿ 11ನೇ ವರ್ಷದ ಧನುರ್ಮಾಸ ಪೂಜೆ ಡಿ. 16ರಿಂದ ಆರಂಭವಾಗಿದ್ದು ಜ. 12ರವರೆಗೆ ಜರಗಲಿದೆ.
ಜ.12ರ ಬೆಳಗ್ಗೆ 8 ಗಂಟೆಯಿಂದ ವೇ| ಕಗ್ಗಿ ಚಿತ್ರಾಪುರ ಶ್ರೀನಿವಾಸ ಆಚಾರ್ಯ ಮತ್ತು ವೇ| ಮೂ| ಶ್ರೀಕಾಂತ್ ಭಟ್ ಕೋಟೆಕಾರ್ ಅವರುಗಳ ಪೌರೋಹಿತ್ಯದಲ್ಲಿ ವಾಯುಸ್ತುತಿ ಪುರಶ್ಚರಣ ಹೋಮ, ಪಂಚಮುಖೀ ಆಂಜನೇಯ ದೇವರಿಗೆ ಕಲಶಾಭೀಷೇಕ, ನವಗ್ರಹ ಪೂಜೆ ಹಾಗೂ ಶ್ರೀ ಶನಿ ಶಾಂತಿ ಹೋಮ ಜರಗಲಿದೆ.
ಈ ಹಿಂದೆ ಕೀರ್ತಿಶೇಷ ಹರಿದಾಸ ರತ್ನ ವಾದೀಶಾಚಾರ್ಯರ ನೇತೃತ್ವದಲ್ಲಿ ಶ್ರೀ ಶನಿ ಹನುಮತೇ ಯಾಗವು ಜರಗಿತ್ತು. ಈ ಬಾರಿ ಶನಿಗ್ರಹನು ಧನುರಾಶಿಯಿಂದ ಮಕರ ರಾಶಿಯ ಪ್ರವೇಶ ಮಾಡುವ ಪರ್ವಕಾಲದಲ್ಲಿ ಲೋಕಕಲ್ಯಾಣಕ್ಕಾಗಿ, ಭಕ್ತರ ಕಷ್ಟ ನಿವಾರಣೆಗಾಗಿ ಈ ವಿಶೇಷ ಧಾರ್ಮಿಕ ಕಾರ್ಯಕ್ರಮ ಜರಗಲಿದೆ. ಶ್ರೀ ಕ್ಷೇತ್ರದ ಸನ್ನಿಧಾನದಲ್ಲಿ ಜ.12ರ ಬೆಳಗ್ಗೆಯಿಂದ ಮಧ್ಯಾಹ್ನ 12ರವರೆಗೆ ನಿರಂತರ ಅಷ್ಟೋತ್ತರ, 108 ಕಲಶ ಪ್ರತಿಷ್ಟಾಪಿಸಿ ಶ್ರೀ ಶನೈಚ್ಚರ ಪೂಜೆ, ಕಥಾ ಪ್ರವಚನ ಪ್ರಸಾದ ವಿತರಣೆ ಜರಗಲಿದೆ.
ಗುರು ಪೂರ್ಣಿಮೆಯಂದು ಶ್ರೀ ರಾಯರಿಗೆ ವಿಶೇಷ ಆರಾಧನಾ ಮಹೋತ್ಸವವು ಜರಗುತ್ತದೆ. ಪ್ರತಿಷ್ಠಾ ಮಹೋತ್ಸವವು ಈ ಬಾರಿ ಮೇ ತಿಂಗಳಲ್ಲಿ ನಡೆಯಲಿದೆ. ಪ್ರತೀ ಗುರುವಾರ ಸರ್ವ ಸೇವೆಯ ಅಂಗವಾಗಿ ಹರಿವಾಯು ಗುರುಗಳಿಗೆ ರಂಗ ಪೂಜೆ, ಬೆಳಗ್ಗೆ ಪಂಚಾಮೃತ ಅಭಿಷೇಕ, ಹನುಮಾನ್ ದೇವರಿಗೆ ಪೂಜೆ, ಅಷ್ಟಾವಧಾನ, ರಥೋತ್ಸವ, ತೊಟ್ಟಿಲು ಸೇವೆ ನಡೆಯುತ್ತಿದ್ದು, ಭಕ್ತರೂ ಅಪೇಕ್ಷಿಸಿದಲ್ಲಿ ಸೇವೆ ನೀಡಬಹುದಾಗಿದೆ. ಕಾರ್ತಿಕ ದೀಪೋತ್ಸವ ನಡೆಯುತ್ತದೆ. ಪ್ರತೀ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿ, ಗಣೇಶಚೌತಿ ಸಂದರ್ಭ ಗಣೇಶ ವಿಗ್ರಹವನ್ನಿಟ್ಟು ಒಂದು ದಿನದ ಪೂಜೆ ನಡೆಯುತ್ತದೆ. ವಾದೀಶಾಚಾರ್ಯರ ಸಂಸ್ಮರಣ ಕಾರ್ಯಕ್ರಮವಾಗಿ ಪ್ರತೀ ಗುರುವಾರ ಯಜ್ಞೆàಶ ಐತಾಳ್ ಅವರಿಂದ ಭಾಗವತ ಪ್ರವಚನ ಮಾಲಿಕೆ ಸಂಜೆ 7.30ಕ್ಕೆ ನಡೆಯುತ್ತದೆ.
ವರ್ಷವಿಡೀ ಹಬ್ಬ ಹರಿದಿನಗಳ ಸಂದರ್ಭ ವಿವಿಧ ಧಾರ್ಮಿಕ, ಭಜನೆ, ಸಾಂಸ್ಕೃತಿಕ ಕಾರ್ಯಕ್ರಮ, ಪ್ರವಚನ ನಡೆಯುತ್ತದೆ. ಧನುರ್ಮಾಸದ ಪೂಜೆ ಕಳೆದ ಹನ್ನೊಂದು ವರ್ಷಗಳಿಂದ ನಡೆಯುತ್ತಾ ಬಂದಿದೆ. ಈ ವರ್ಷವೂ ಧನುರ್ಮಾಸದ ಪೂಜೆಯನ್ನು ಪುತ್ತಿಗೆ ಶ್ರೀಗಳ ಆಶೀರ್ವಾದದೊಂದಿಗೆ ಧಾರ್ಮಿಕ ವಿಧಾನನಗಳೊಂದಿಗೆ ನಡೆಸುತ್ತಾ ಬರಲಾಗುತ್ತಿದೆ. ಜ. 12ರಂದು ಪೂಜೆ, ಶನಿ ಹೋಮ, ಪೂರ್ಣಾಹುತಿ, ಭಕ್ತರಿಗೆ ಅನ್ನಸಂತರ್ಪಣೆ ನಡೆಯಲಿದೆ.ವೆ.
-ರಾಘವೇಂದ್ರ ಎಚ್. ವಿ. ರಾಘವೇಂದ್ರ ಮಠ