Advertisement

ಪುರಸಭೆಗೆ ಸಿಐಡಿ ಅಧಿಕಾರಿಗಳ ತಂಡ ಭೇಟಿ

04:46 PM Jul 03, 2021 | Team Udayavani |

ಮಹಾಲಿಂಗಪುರ: ಪುರಸಭೆ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ವೇಳೆ ಶಾಸಕರು ಮತ್ತು ಪುರಸಭೆ ಬಿಜೆಪಿ ಸದಸ್ಯರು, ವಿರೋಧ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಬಿಜೆಪಿಯ ಮೂವರು ಮಹಿಳಾ ಸದಸ್ಯೆಯರ ಎಳೆದಾಟ ಗಲಾಟೆ ಪ್ರಕರಣ ಕುರಿತು ಸಿಐಡಿ ತನಿಖೆ ಆರಂಭಿಸಿದೆ.

Advertisement

ಬೆಂಗಳೂರಿನ ಸಿಐಡಿ ಅಧಿಕಾರಿಗಳ ತಂಡ ಶುಕ್ರವಾರ ಪುರಸಭೆಗೆ ಆಗಮಿಸಿ ಅಧಿಕಾರಿಗಳು, ಪುರಸಭೆ ಸದಸ್ಯೆ ಚಾಂದನಿ ನಾಯಕ, ಪತಿ ನಾಗೇಶ ನಾಯಕ ಅವರನ್ನು ಗಂಟೆಗಟ್ಟಲೇ ವಿಚಾರಣೆ ನಡೆಸಿದ್ದಾರೆ. ನ.9ರ ಗಲಾಟೆಗೆ ಸಂಬಂಧಿ ಸಿದಂತೆ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ. ಅಲ್ಲದೇ ಮಹಾಲಿಂಗಪುರ ಠಾಣೆಯಲ್ಲಿ ದಾಖಲಾದ ಪ್ರಕರಣಗಳು, ಮಹಿಳಾ ದೌರ್ಜನ್ಯ ತಡೆ ಕಾಯ್ದೆ ಮತ್ತು ಪ್ರಜಾಪ್ರತಿನಿಧಿ ಕಾಯ್ದೆ-1951ಯ ಅಡಿಯಲ್ಲಿ ದಾಖಲಾದ ಪ್ರಕರಣವನ್ನು ಡಿಜಿ-ಐಜಿಪಿ ಹೆಚ್ಚಿನ ತನಿಖೆಯ ಸಂಬಂಧ ಸಿಐಡಿ ವಿಭಾಗದಲ್ಲಿ ಕೈಗೊಳ್ಳುವಂತೆ ಆದೇಶಿಸಿರುವ ಕಾರಣ ಬೆಂಗಳೂರು ಸಿಐಡಿ ವಿಶೇಷ ವಿಚಾರಣೆಗಳ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಸತ್ಯವತಿ. ಎಸ್‌ ನೇತೃತ್ವದ 5 ಜನ ಅಧಿ ಕಾರಿಗಳ ತಂಡ ತನಿಖೆ ಆರಂಭಿಸಿದೆ.

ಶುಕ್ರವಾರ ವಿಚಾರಣೆ ವೇಳೆ ಪುರಸಭೆ ಸದಸ್ಯೆ ಚಾಂದನಿ ನಾಯಕ, ಅವರ ಪತಿ ನಾಗೇಶ ನಾಯಕ, ಮುಖ್ಯಾಧಿಕಾರಿ ಎಚ್‌. ಎಸ್‌.ಚಿತ್ತರಗಿ, ಸ್ಥಳಿಯ ಠಾಣಾಧಿಕಾರಿ ಎಸ್‌.ಎಸ್‌.ಘಾಟಗೆ ಸೇರಿದಂತೆ ಹಲವರು ಇದ್ದರು. ಪುರಸಭೆಯಲ್ಲಿನ ವಿಚಾರಣೆ ಬಳಿಕ ಅಧಿಕಾರಿಗಳ ತಂಡವು ಚಾಂದನಿ ನಾಯಕ ಅವರ ಮನೆ ಸೇರಿದಂತೆ ಘಟನೆಗೆ ಕಾರಣವಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next