Advertisement

ಸಂಪರ್ಕಿತರ ಪತ್ತೆಗೆ 25,000 ಮಂದಿ ತಂಡ

03:39 PM May 29, 2020 | mahesh |

ಲಂಡನ್‌: ಇಂಗ್ಲಂಡ್‌ನ‌ಲ್ಲಿ ಕೋವಿಡ್‌ ಸೋಂಕಿತರ ಪ್ರಥಮ ಸಂಪರ್ಕಗಳನ್ನು ಪತ್ತೆ ಹಚ್ಚುವ ಸಲುವಾಗಿ ಹೊಸ ವ್ಯವಸ್ಥೆಯೊಂದನ್ನು ಪ್ರಾರಂಭಿಸಲಾಗಿದ್ದು ಇದಕ್ಕಾಗಿ 25,000 ಮಂದಿ “ಕಾಂಟ್ಯಾಕ್ಟ್ ಟ್ರೇಸರ್’ಗಳನ್ನು ನೇಮಿಸಿಕೊಳ್ಳಲಾಗಿದೆ.

Advertisement

ಈ ಕಾಂಟ್ಯಾಕ್ಟ್ ಟ್ರೇಸರ್‌ಗಳು ಕೋವಿಡ್‌ ಪೊಸಿಟಿವ್‌ ಆದ ಸೋಂಕಿತರನ್ನು ಎಸ್‌ಎಂಎಸ್‌, ಇ-ಮೈಲ್‌ ಅಥವಾ ಕರೆ ಮಾಡಿ ಸಂಪರ್ಕಿಸಿ ಅವರು ಯಾರನ್ನೆಲ್ಲ ಭೇಟಿಯಾಗಿದ್ದಾರೆ ಎಂಬ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಹೀಗೆ ಸಂಗ್ರಹವಾದ ಮಾಹಿತಿಯ ಪೈಕಿ ಯಾರಾದರೂ ಸೋಂಕಿಗೆ ತುತ್ತಾಗುವ ಸಾಧ್ಯತೆಯಿದ್ದರೆ ಕೂಡಲೇ ಅವರನ್ನು 14 ದಿನಗಳ ಕ್ವಾರಂಟೈನ್‌ಗೆ ಕಳುಹಿಸಲಾಗುವುದು.ಈ ವ್ಯವಸ್ಥೆ ಸಾಕಷ್ಟು ಪ್ರಾಣಗಳನ್ನು ಉಳಿಸಲಿದೆ ಎಂದು ಬ್ರಿಟಿಶ್‌ ಪ್ರಧಾನಿ ಆಶಯ ವ್ಯಕ್ತಪಡಿಸಿದ್ದಾರೆ.

ಲಾಕ್‌ಡೌನ್‌ ಪೂರ್ಣವಾಗಿ ತೆರವುಗೊಂಡು ಜನಜೀವನ ಸಹಜ ಸ್ಥಿತಿಗೆ ಬಂದ ಬಳಿಕ ಈ ವ್ಯವಸ್ಥೆಯ ಅಗತ್ಯ ಹೆಚ್ಚು ಇದೆ. ಹೆಚ್ಚು ಸ್ಥಳೀಯವಾಗಿ ಪರೀಕ್ಷೆಗಳನ್ನು ನಡೆಸಲು ಇದು ನೆರವಾಗಲಿದೆ ಎಂದು ಪ್ರಧಾನಿ ಹೇಳಿದ್ದಾರೆ. ಇಂದು ಕೋವಿಡ್‌ ಸೋಂಕು ದೃಢಪಟ್ಟರೆ ನಾಳೆಯೊಳಗೆ ಕಾಂಟ್ಯಾಕ್ಟ್ ಟ್ರೇಸರ್ ಆತನ ಅಥವಾ ಆಕೆಯ ಪ್ರಾಥಮಿಕ ಸಂಪರ್ಕಗಳ ಮಾಹಿತಿ ಸಂಗ್ರಹಿಸಿ ಅವರನ್ನು ಪತ್ತೆಹಚ್ಚುತ್ತದೆ. ಹೀಗೆ ಹೆಚ್ಚು ಮಂದಿಗೆ ವೈರಸ್‌ ಹರಡುವುದನ್ನು ತಡೆಯಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next