Advertisement

Teacher: ಶಾಲೆಗೆ ಬಾರದೆ 9 ವರ್ಷ ಸಂಬಳ ಪಡೆದ ಶಿಕ್ಷಕ!

10:39 AM Aug 28, 2023 | Team Udayavani |

ಶ್ರೀರಂಗಪಟ್ಟಣ: ಶಾಲೆಗೆ ಕರ್ತವ್ಯಕ್ಕೆ ಹಾಜರಾಗದೆ ಹಾಜರಿ ಪುಸ್ತಕದಲ್ಲಿ ನಿರಂತರವಾಗಿ ಸಹಿ ಹಾಕಿ ಶಿಕ್ಷಕನೊಬ್ಬ ಸಂಬಳ ಪಡೆಯುತ್ತಿರುವ ಪ್ರಕರಣ ತಾಲೂಕಿನ ನೆಲಮನೆ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಬೆಳಕಿಗೆ ಬಂದಿದೆ.

Advertisement

ಕಾಡಪ್ಪ ಗೋಳ ಎಂ.ಬಿ. ಎಂಬ ಸಹ ಶಿಕ್ಷಕ ಶಾಲೆಗೇ ಬಾರದೆ ಸಂಬಳವನ್ನು 2023 ಜೂನ್‌ವರೆಗೂ ಪಡೆದಿದ್ದಾನೆಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರು ಸೇರಿದಂತೆ ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಶಿಕ್ಷಕ 2014ರಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಕೇವಲ 2 ವರ್ಷಗಳಷ್ಟೇ. ಅನಂತರ ಕರ್ತವ್ಯಕ್ಕೆ ಹಾಜರಾಗದಿದ್ದರೂ, ಚಾಚೂ ತಪ್ಪದೆ ಕಾಲ ಕಾಲಕ್ಕೆ ಸಂಬಳ ಮಾತ್ರ ಪಡೆದಿದ್ದಾನೆ. ಇದರ ಹಿಂದೆ ಹಿರಿಯ ಅಧಿಕಾರಿಗಳ ಕೈವಾಡವಿರುವುದಾಗಿ ಗ್ರಾಮಸ್ಥರು ಆರೋಪಿಸಿದ್ದಾರೆ.

ಹಾಜರಾತಿ ತನಿಖೆ: ಆಗ್ರಹ

ಶಾಲೆಯ ಹಾಜರಾತಿ ಕುರಿತಾಗಿ ತನಿಖೆ ಮಾಡಬೇಕು. ಹಾಜರಾತಿ ಇಲ್ಲದೆ ಕಳೆದ 8-10 ವರ್ಷಗಳಿಂದ ನಿರಂತರವಾಗಿ ವೇತನ ಪಡೆಯುತ್ತಿರುವ ಈ ಶಿಕ್ಷಕನ ವೇತನವನ್ನು ಶಿಕ್ಷಣ ಇಲಾಖೆ ಮುಟ್ಟುಗೋಲು ಹಾಕಿಕೊಂಡು ಸೇವೆಯಿಂದ ವಜಾ ಮಾಡಬೇಕೆಂದು ಎಸ್‌ಡಿಎಂಸಿ ಸದಸ್ಯರು ಹಾಗೂ ಗ್ರಾಮಸ್ಥರು ಆಗ್ರಹಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next