ಕಲಬುರಗಿ: ಸರ್ಕಾರಿ ಶಾಲಾ ಮಕ್ಕಳು ವರ್ಷಕ್ಕೊಮ್ಮೆ ಬಸ್, ಟ್ರ್ಯಾಕ್ಸ್, ಟೆಂಪೋದಲ್ಲಿ ಪ್ರವಾಸ ಹೋಗುವುದು ವಾಡಿಕೆ. ಆದರೆ ಗಡಿಭಾಗದ ಸರ್ಕಾರಿ ಶಾಲೆ ಹೆಣ್ಮಕ್ಕಳು ವಿಮಾನದಲ್ಲಿ ಟೂರ್‌ಗೆ ಹೋಗಿ ಬಂದಿದ್ದಾರೆ!
ಮಹಾರಾಷ್ಟ್ರದ ಗಡಿ ಭಾಗದ ಅಕ್ಕಲಕೋಟೆ ತಾಲೂ ಕಿನ ಮೈಂದರ್ಗಿಯ ಸರ್ಕಾರಿ ಕನ್ನಡ ಪ್ರಾಥ ಮಿಕ ಹೆಣ್ಣು ಮಕ್ಕಳ ಶಾಲೆ ಮುಖ್ಯ ಶಿಕ್ಷಕ ಮಹಾಂ ತೇಶ್ವರ ಕಟ್ಟಿಮನಿ ಈ ಬಾರಿ 35 ಮಕ್ಕ ಳನ್ನು ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿದ್ದರು. ಮಕ್ಕಳ ಪಾಲಕರ ಬಳಿ ಒಂದಷ್ಟು ಹಣ ಪಡೆದು ಉಳಿದಿದ್ದನ್ನು ಸ್ವಂತ ಹಣ ಹಾಕಿ ಪ್ರವಾಸ ಖರ್ಚು ನೋಡಿಕೊಂಡಿದ್ದಾರೆ.
ಅಂದ ಹಾಗೆ ಕಟ್ಟಿಮನಿ ಅವರು ಮಕ್ಕಳನ್ನು ವಿಮಾನ ದಲ್ಲಿ ಪ್ರವಾಸಕ್ಕೆ ಕರೆದುಕೊಂಡು ಹೋಗು ತ್ತಿ ರೋದು ಐದನೇ ಬಾರಿ. ಈ ಹಿಂದೆ ಯಾವ್ಯಾವ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿದ್ದಾರೋ ಅಲ್ಲಿನ ಮಕ್ಕಳಿಗೂ ವಿಮಾನದಲ್ಲೇ ಪ್ರವಾಸ ಮಾಡಿಸಿದ್ದಾರೆ.
ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟೆ ತಾಲೂಕಿನ ಜೇವೂರ್ ಹಾಗೂ ಗೌಡಗಾಂವ್ ಸರ್ಕಾರಿ ಕನ್ನಡ ಶಾಲೆ ಮಕ್ಕಳಿಗೆ ಬೆಂಗಳೂರು, ನಾಗಣ ಸೂರು ಹಾಗೂ ಈಗ ಮೈಂದರ್ಗಿ ಕನ್ನಡ ಶಾಲೆ ಮಕ್ಕಳಿಗೆ ವಿಮಾನದಲ್ಲಿ ದೆಹಲಿಗೆ ಕರೆದುಕೊಂಡು ಹೋಗಿ ಪ್ರವಾಸ ಮಾಡಿಸಿದ್ದಾರೆ. ಈ ಬಾರಿ 35 ವಿದ್ಯಾ ರ್ಥಿನಿಯರು ತಲಾ ಏಳು ಸಾವಿರ ರೂ. ಪಾವತಿಸಿ ದೆಹಲಿ-ಮುಂಬೈ ಮಹಾನಗರ ಗಳ ಪ್ರವಾಸ ಕೈಗೊಂಡು ಖುಷಿ ಪಟ್ಟಿದ್ದಾರೆ.
ಮೈಂದರ್ಗಿ ಟು ದೆಹಲಿ: ಡಿ.28ರಂದು ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರು ರೈಲಿನ ಮೂಲಕ ಮುಂಬೈಗೆ ತೆರಳಿದ್ದರು. 2 ದಿನ ಮುಂಬೈ ನಲ್ಲಿ ಗೇಟ್‌ವೇ ಆಫ್ ಇಂಡಿಯಾ, ಮ್ಯೂಸಿಯಂ ಹಾಗೂ ಉದ್ಯಾನವನಗಳನ್ನು ವೀಕ್ಷಿಸಿದ್ದಾರೆ. ಅಲ್ಲಿಂದ ವಿಮಾನದ ಮೂಲಕ ದೆಹಲಿಗೆ ತೆರಳಿ ಕೆಂಪುಕೋಟೆ, ರಾಜಘಾಟ್, ಸಂಸತ್ ಭವನ ವೀಕ್ಷಣೆ ಮಾಡಿದ್ದಾರೆ. ವಾಪಸ್ ರೈಲಿನ ಮೂಲಕ ಮೈಂದರ್ಗಿ ಸೇರಿದ್ದಾರೆ. ಈ 7ದಿನದ ಪ್ರವಾಸಕ್ಕೆ ಒಟ್ಟು 4.50 ಲಕ್ಷ ರೂ. ಖರ್ಚಾಗಿದೆ. ಕಟ್ಟಿಮನಿ ಅವರೇ 2ಲಕ್ಷ ರೂ. ನೀಡಿರುವುದು ಶ್ಲಾಘನೀಯ. ವಿಮಾನದ ಟಿಕೆಟ್ 6000 ರೂ., ರೈಲ್ವೆ ಟಿಕೆಟ್ 1200 ರೂ., ಊಟ-ವಸತಿ ಮತ್ತು ಇತರೆ ಖರ್ಚು ಸೇರಿ ಪ್ರತಿ ದಿನವೂ 40 ಸಾವಿರ ರೂ.ಗಳಷ್ಟು ಖರ್ಚಾಗಿದೆ.