Advertisement
ಹಾಲಾಡಿ ಗ್ರಾಮದ ಮುದೂರಿಯ ನಿವಾಸಿ, ಪ್ರಸ್ತುತ ಮಂಗಳೂರಿನ ಶಾರದಾ ವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ಶಿಕ್ಷಕ ರಾಗಿರುವ ದಿನೇಶ್ ಮುದೂರಿ ಅವರೇ ಗುಡ್ಡ ಅಗೆದು, ಕೃಷಿ ಮಾಡಿದ ಶಿಕ್ಷಕ.
ದಿನೇಶ್ ಅವರು 12 ವರ್ಷಗಳಿಂದ ದೈ.ಶಿ. ಶಿಕ್ಷಕರಾಗಿದ್ದು ಊರಿಗೆ ಬರುತ್ತಿ ದ್ದರೂ, ಕೃಷಿಯಲ್ಲಿ ಸಕ್ರಿಯರಾಗಿ ತೊಡಗಿ ಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಈಗ ಮನೆ ಸನಿಹ ಅರ್ಧ ಕಿ.ಮೀ. ದೂರದಲ್ಲಿ ಗುಡ್ಡ ಸಮತಟ್ಟುಗೊಳಿಸಿ ತರಕಾರಿ ಕೃಷಿಗೆ ಮುಂದಾಗಿದ್ದಾರೆ. ಇದಕ್ಕೆ ವಾರಾಹಿ ನೀರು ವರವಾಗಿದೆ. ಕಾಡುಪ್ರಾಣಿ ಉಪಟಳ ತಡೆಗೆ ಬೇಲಿ ವ್ಯವಸ್ಥೆ ಮಾಡಿದ್ದಾರೆ. ಸಾವಯವ ತರಕಾರಿ
ಈ ಕೈತೋಟದಲ್ಲಿ ಸೌತೆ, ಬೆಂಡೆಕಾಯಿ, ಅಲಸಂಡೆ ಬೆಳೆದಿದ್ದಾರೆ. ಸೌತೆ ಬಳ್ಳಿ ಕಾಯಿ ಬಿಟ್ಟಿದ್ದು, ಅಲಸಂಡೆ ಬಳ್ಳಿ, ಬೆಂಡೆ ಗಿಡ ಇನ್ನಷ್ಟು ಬೆಳೆಯಬೇಕಿದೆ. ರಾಸಾಯನಿಕ ಗೊಬ್ಬರ ಹಾಕದೇ, ಹಟ್ಟಿ ಗೊಬ್ಬರ ಬಳಸಿ ಬೆಳೆಯಲಾದ ಸಾವಯವ ಬೆಳೆ ಇದಾಗಿದೆ ಎನ್ನುತ್ತಾರೆ ದಿನೇಶ್ ಮುದೂರಿ.
Related Articles
ಕೃಷಿ ಕಾಯಕ ಮನಸ್ಸಿಗೆ ತುಂಬಾ ಸಂತೃಪ್ತಿ ನೀಡಿದೆ. ಲಾಕ್‌ಡೌನ್ ಸಮಯವನ್ನು ಹೇಗೆ ಕಳೆಯುವುದೆಂದು ಯೋಚಿಸುತ್ತಿದ್ದಾಗ ತರಕಾರಿ ಕೃಷಿ ಮಾಡುವ ಯೋಚನೆ ಬಂತು. ಉತ್ತಮ ನೀರು ಕೂಡ ಇರುವುದರಿಂದ ಬೆಂಡೆ, ಅಲಸಂಡೆ, ಸೌತೆ ಬಳ್ಳಿಗಳು ಉತ್ತಮವಾಗಿ ಬೆಳೆಯುತ್ತಿದೆ. ಸಾವಯವ ಗೊಬ್ಬರವೇ ಹಾಕಿರುವುದರಿಂದ ಉತ್ತಮ ಇಳುವರಿಯ ನಿರೀಕ್ಷೆಯಿದೆ.
-ದಿನೇಶ್ ಮುದೂರಿ,
ಕೃಷಿಯಲ್ಲಿ ತೊಡಗಿರುವ ಶಿಕ್ಷಕ.
Advertisement