Advertisement
ಮೂಲತಃ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದವರಾಗಿದ್ದು, ವೀರಾಪುರ ಶಾಲೆಗೆ ಹತ್ತಿರದಲ್ಲಿರುವ ತಾವರೆಕೆರೆ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಈರಣ್ಣ ಮತ್ತು ಶಾಲೆ ಮುಖ್ಯ ಶಿಕ್ಷಕ ಆಂಜನೇಯ, ಶಿಕ್ಷಕರಾದ ರಜಾಕ್ ಚೌಧರಿ, ಮಲ್ಲಯ್ಯ, ಮಲ್ಲಪ್ಪ ಬಳಿಗಾರ್, ಶ್ರೀಕಾಂತ್, ಶಂಕರಯ್ಯ ಅಮರೇಶ್ ಎಂಬುವರೊಡನೆ ಕರ್ನಾಟಕ ಸಾರಿಗೆ ಇಲಾಖೆ ಬಸ್‌ನಲ್ಲಿ ಕಳೆದ ಡಿ.19 ರಂದು ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 50 ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಹೊರಟು ಶಿರಸಿ, ಕುಮುಟ, ಇಡಗುಂಜಿ, ಜೋಗ್ ಫಾಲ್ಸ್, ಮುರುಡೆಶ್ವರ, ಉಡುಪಿ, ತಲಕಾವೇರಿ, ಭಾಗಮಂಡಲ, ಪ್ರವಾಸ ಮುಗಿಸಿ ಸೋಮವಾರ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕಾರಂಜಿ ಕೆರೆ ಪ್ರವಾಸ ಮುಗಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಊರಿಗೆ ತೆರಳುತ್ತಿದ್ದರು.
Related Articles
Advertisement
ಮೃತ ಶಿಕ್ಷಕನ ಪುತ್ರನಿಗೆ ಇಂದು ಎಂಬಿಬಿಎಸ್ ಪರೀಕ್ಷೆ: ಅಫಘಾತದಲ್ಲಿ ಮೃತಪಟ್ಟ ಈರಣ್ಣ ನರಸಪ್ಪ ಅಗನೂರು ರವರಿಗೆ ಮೂವರು ಮಕ್ಕಳು. ಪುತ್ರ ನವೀನ್, ಕೊಪ್ಪಳದ ಮೆಡಿಕಲ್ ಕಾಲೇಜಿನಲ್ಲಿ ಎಂಬಿಬಿಎಸ್ ಅಂತಿಮ ವರ್ಷದ ವಿದ್ಯಾರ್ಥಿ. ನವೀನ್‌ಗೆ ಮಂಗಳವಾರ ಪರೀಕ್ಷೆಯಿದ್ದಿದ್ದರಿಂದ, ತಂದೆ ಹುಷಾರಿಲ್ಲ ಎಂದು ಹೇಳಿ ಕುಟುಂಬದವರು ಪಿರಿಯಾಪಟ್ಟಣಕ್ಕೆ ಬಂದಿದ್ದರು. ಉಳಿದಂತೆ, ಪುತ್ರಿ ಪೂಜಾ ಬಿಎಸ್‌ಸಿ, ಮತ್ತೂಬ್ಬ ಪುತ್ರ ಸಚೀನ್ ದ್ವಿತೀಯ ಪಿಯುಸಿ ಇದ್ದಾರೆ.
ಬಿಇಒ, ತಾಲೂಕು ಶಿಕ್ಷಕರು, ಸಾರ್ವಜನಿಕರಿಂದ ನೆರವು: ಶಿಕ್ಷಕ ಈರಣ್ಣ ನರಸಪ್ಪ ಅಗನೂರು ಮೃತಪಟ್ಟ ವಿಷಯ ತಿಳಿದ ಕೂಡಲೇ ತಾಲೂಕಿನ ಶಿಕ್ಷಕರು ಮತ್ತು ಸಾರ್ವಜನಿಕರು ತಡರಾತ್ರಿಯಲ್ಲೂ ನೆರವಿಗೆ ಧಾವಿಸಿ ಮಾನವೀಯತೆ ಮೆರೆದರು. ಮಕ್ಕಳು ಮತ್ತು ಜೊತೆಯಲ್ಲಿ ಬಂದಿದ್ದ ಶಿಕ್ಷಕರಿಗೆ ಸಾಂತ್ವನ ಹೇಳಿ, ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದರು. ಮೃತರ ಶವ ಪರೀಕ್ಷೆ ನಡೆಸಲು ಡಿವೈಎಸ್‌ಪಿ ಸುಂದರ್ ರಾಜ್ ಮತ್ತು ಸಿಪಿಐ ಬಿ.ಆರ್. ಪ್ರದೀಪ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಶವ ಪರೀಕ್ಷೆ ಮಾಡಿದರೆ, ದೂರದ ರಾಯಚೂರಿಗೆ ಕಳುಹಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ಮೃತರ ಶವ ಪರೀಕ್ಷೆ ನಡೆಸಿ ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು.
ಮೃತರಿಗೆ ಶ್ರದ್ಧಾಂಜಲಿ: ಮೃತರ ಕುಟುಂಬದವರಿಗೆ ಶವವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕಿನ ಬಿಇಒ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮೃತರಿಗೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರ್.ರಾಮಾರಾಧ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್ ಕುಮಾರ್, ಕಾರ್ಯದರ್ಶಿ ಗಾಯತ್ರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಕಾರ್ಯದರ್ಶಿ ಶಿವಕುಮಾರಯ್ಯ, ಖಜಾಂಚಿ ಅಣ್ಣೇಗೌಡ, ನಿರ್ದೇಶಕ ಪ್ರಕಾಶ, ಶಿಕ್ಷಕರಾದ ಎಸ್.ಬಿ.ಪುಟ್ಟರಾಜು, ಪಿ.ವಿ.ದೇವರಾಜು, ಹೆಚ್.ಟಿ.ಗಣೇಶ, ನಟರಾಜ ನಾಯ್ಕ, ನೌಕರರಾದ ಸೋಮಶೇರ್ಖ, ಪ್ರಕಾಶ್ ಉದ್ಯಮಿ ಸತೀಶ, ಸ್ಥಳೀಯ ಮುಖಂಡರಾದ ಮಲ್ಲಿಕಾರ್ಜುನ, ತೆಲುಗಿನಕುಪ್ಪೆ ಕಾಂತರಾಜು ಆಟೋ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.