ವಾಷಿಂಗ್ಟನ್: ಅಮೆರಿಕದ ಮೇರಿಲ್ಯಾಂಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳು ಏಡಿಗಳು, ನಳ್ಳಿಗಳು ಮತ್ತು ಸಿಗಡಿಗಳಲ್ಲಿರುವ ವಿಶೇಷ ರಾಸಾಯನಿಕವನ್ನು ಬಳಸಿ ಬ್ಯಾಟರಿ ತಯಾರಿಸುವುದನ್ನು ಕಂಡುಕೊಂಡಿದ್ದಾರೆ.
ಈ ಕಠಿಣಚರ್ಮಿಗಳಲ್ಲಿರುವ “ಚಿಟಿನ್’ ಎಂಬ ರಾಸಾಯನಿಕ ಬಳಸಿ ಬ್ಯಾಟರಿಗಳನ್ನು ವಿಜ್ಞಾನಿಗಳು ತಯಾರಿಸಿದ್ದಾರೆ. ಈ ಕುರಿತು ವಿವಿಯ ಪ್ರೊ. ಲಿಯಾಂಗ್ಬಿಂಗ್ ಹು ನೇತೃತ್ವದಲ್ಲಿ ವಿಜ್ಞಾನಿಗಳು ಸಂಶೋಧನಾ ವರದಿ ಪ್ರಕಟಿಸಿದ್ದಾರೆ.
“ವಸ್ತುಗಳ ಜೈವಿಕ ವಿಘಟನೀಯತೆ, ಪರಿಸರದ ಪ್ರಭಾವ ಮತ್ತು ಬ್ಯಾಟರಿಗಳ ಕಾರ್ಯಕ್ಷಮತೆಯು ಉತ್ಪನನಕ್ಕೆ ಮುಖ್ಯವಾದದು. ಇದು ವಾಣಿಜ್ಯೀಕರಣಗೊಳ್ಳುವ ಸಾಮರ್ಥಯ ಹೊಂದಿದೆ ಎಂದು ನಾವು ಭಾವಿಸುತ್ತೇವೆ,” ಎಂದು ಪ್ರೊ. ಲಿಯಾಂಗ್ಬಿಂಗ್ ಹು ಅಭಿಪ್ರಾಯಪಟ್ಟರು.
“ಹಸಿರು ಇಂಧನದತ್ತ ಜಗತ್ತು ಮುಖ ಮಾಡಿರುವ ಈ ಸಂದರ್ಭದಲ್ಲಿ ಬ್ಯಾಟರಿಗಳು ಕೂಡ ಪರಿಸರ ಸ್ನೇಹಿಯಾಗಿರಬೇಕು. ಸದ್ಯ ಲೀಥಿಯಮ್-ಐಯಾನ್‌ನಿಂದ ತಯಾರಾಗುವ ಸಂಪ್ರದಾಯಿಕ ಬ್ಯಾಟರಿಗಳು ವಿಘಟನೆ ಹೊಂದಲು ನೂರಾರು ವರ್ಷಗಳು ಬೇಕಾಗುತ್ತದೆ. ಎಲೆಕ್ಟ್ರಾನಿಕ್ ಬ್ಯಾಟರಿಗಳು ಕೆಲವೊಮ್ಮೆ ಬೆಂಕಿ ಅವಘಡಗಳಿಗೆ ಕಾರಣವಾಗುತ್ತದೆ. ಹಾಗಾಗಿ ಪರಿಸರ ಸ್ನೇಹಿ ಬ್ಯಾಟರಿಗಳತ್ತ ಮುಖ ಮಾಡುವುದು ಅನಿವಾರ್ಯವಾಗಿದೆ,” ಎಂದರು.
“ಏಡಿ, ಸಿಗಡಿ, ನಳ್ಳಿಗಳಂತಹ ಕಠಿಣಚರ್ಮಿಗಳ ಎಕೊÕàಸ್ಕೆಲಿಟನ್, “ಚಿಟಿನ್’ ಒಳಗೊಂಡಿರುವ ಕೋಶಗಳಿಂದ ಮಾಡಲ್ಪಟ್ಟಿದೆ. ಇದು ಒಂದು ರೀತಿಯ ಕಾಬೋìಹೈಡ್ರೇಟ್ ಆಗಿದ್ದು, ಅವುಗಳ ಚಿಪ್ಪುಗಳಿಗೆ ಗಟ್ಟಿಯಾದ ಮೇಲ್ಮೈಗೆ ಕಾರಣವಾಗಿದೆ. ಅಲ್ಲದೇ ರೆಸ್ಟೋರೆಂಟ್‌ಗಳ ಆಹಾರ ತ್ಯಾಜ್ಯವು ಸಾಮಾನ್ಯವಾಗಿ ಈ ಉಪಯುಕ್ತ ವಸ್ತುವನ್ನು ಹೊಂದಿರುತ್ತದೆ. ಇದು ಶಿಲೀಂಧ್ರಗಳು ಮತ್ತು ಕೀಟಗಳಲ್ಲಿಯೂ ಇರುತ್ತದೆ. ಇದನ್ನು ಬ್ಯಾಟರಿ ತಯಾರಿಕೆಗೆ ಬಳಸಬಹುದಾಗಿದೆ,” ಎಂದು ಪ್ರೊ. ಲಿಯಾಂಗ್ಬಿಂಗ್ ಹು ಮಾಹಿತಿ ನೀಡಿದ್ದಾರೆ.