ಕಾಕ್ಟೈಲ್‌ಗೆ ಪ್ರೇಮ್ ಸಾಥ್ ವಿಜಯಲಕ್ಷ್ಮೀ ಕಂಬೈನ್ಸ್ ಬ್ಯಾನರ್‌ನಲ್ಲಿ ಡಾ.ಶಿವಪ್ಪ ನಿರ್ಮಾಣದ “ಕಾಕ್ಟೈಲ್’ ಸಿನಿಮಾದ ಚಿತ್ರೀಕರಣವು ಮುಗಿದಿದ್ದು, ಸದ್ಯ ಪೋಸ್ಟ್ ಪ್ರೂಡಕ್ಷನ್ ಕೆಲಸದಲ್ಲಿ ಬಿಝಿ ಇದೆ.
ಇತ್ತೀಚೆಗೆ ನಿರ್ದೇಶಕ ಜೋಗಿ ಪ್ರೇಮ್ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ಈಗಾಗಲೇ ಸಿನಿರಸಿಕರಿಂದ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗೊಂಡಿದ್ದು, ಚಿತ್ರತಂಡದ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಈ ಚಿತ್ರವನ್ನು ಶ್ರೀರಾಮ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಹೊಸ ಪ್ರತಿಭೆಗಳಾದ ವೀರೇನ್ ಕೇಶವ್ ನಾಯಕ, ಚರಿಷ್ಮಾ ನಾಯಕಿ. ಇವರೊಂದಿಗೆ ಶೋಭರಾಜ್, ರಮೇಶ್ ಪಂಡಿತ್, ಮಹಾಂತೇಶ್ ಹಿರೇಮಠ್, ಶಿವಮಣಿ, ಚಂದ್ರಕಲಾ ಮೋಹನ್ ಮುಂತಾದವರ ತಾರಾಗಣವಿದೆ. ಹೃದಯ ಶಿವ-ಸಿರಾಜ್ ಮಿಜಾರ್ ಸಾಹಿತ್ಯದ ಗೀತೆಗಳಿಗೆ ಅರ್ಮನ್ ಮಲ್ಲಿಕ್, ಅನುರಾಧ ಭಟ್ ಧ್ವನಿ ನೀಡಿದ್ದು, ಲೋಕಿತವಸ್ಯ ಸಂಗೀತ ಸಂಯೋಜಿಸಿದ್ದಾರೆ. ರವಿವರ್ಮ(ಗಂಗು) ಛಾಯಾಗ್ರಹಣ, ಮೋಹನ್.ಬಿ.ರಂಗಕಹಳೆ ಸಂಕಲನ, ನರಸಿಂಹ ಸಾಹಸ, ಸುನಿಲ್ ನೃತ್ಯವಿದೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್,ಮರ್ಡರ್ ಮಿಸ್ಟರಿ ಕಥೆಯನ್ನು ಹೊಂದಿದೆ. “ಈ ಸಿನಿಮಾದಲ್ಲಿ ಹುಡುಗ-ಹುಡುಗಿಯ ನಡುವಿನ ಪ್ರೀತಿಯಿದೆ. ಆದ್ರೆ ಲವ್‌ಸ್ಟೋರಿಯಲ್ಲ. ಒಂದಷ್ಟು ಕೊಲೆಗಳ ಸುತ್ತ ಕಥೆ ನಡೆಯುತ್ತದೆ. ಆದರೆ ಮರ್ಡರ್ ಮಿಸ್ಟರಿಯಲ್ಲ. ಮಾಟ-ಮಂತ್ರದ ದೃಶ್ಯಗಳಿವೆ, ಆದ್ರೆ ಹಾರರ್ ಸಿನಿಮಾವಲ್ಲ…’ ಎನ್ನುತ್ತದೆ ಚಿತ್ರತಂಡ.
ಆದರೆ ಇದ್ಯಾವುದೂ ಅಲ್ಲ ಅಂದಮೇಲೆ ” ಕಾಕ್ಟೈಲ್’ ಯಾವ ಥರದ ಸಿನಿಮಾ? ಎಂದು ಕೇಳಿದರೆ, ಇದೊಂದು ಕಂಪ್ಲೀಟ್ ಎಂಟರ್‌ಟೈನ್ಮೆಂಟ್ ಸಿನಿಮಾ. ನೋಡುಗರು ಭಯಸುವ ಎಲ್ಲ ಅಂಶಗಳೂ ಸಿನಿಮಾದಲ್ಲಿರುವುದರಿಂದ, ಇದು ಯಾವುದೋ ಒಂದು ಜಾನರ್‌ಗೆ ಸೀಮಿತವಾದ ಸಿನಿಮಾವಲ್ಲ. “ಕಾಕ್ಟೇಲ್’ ಅಂದ್ರೆ “ಮಿಕ್ಸ್ ಆಫ್ ವೆರೈಟಿ ಡ್ರಿಂಕ್ಸ್’ ಅದರಂತೆ, ಇದೊಂದು “ಮಿಕ್ಸ್ ಆಫ್ ವೆರೈಟಿ ಸಬ್ಜೆಕ್ಟ್’ ಸಿನಿಮಾ ಎನ್ನುವುದು ಚಿತ್ರತಂಡದ ಮಾತು.
ಗಣೇಶ ಹಬ್ಬಕ್ಕೆ ಚಿತ್ರದ ಟೀಸರ್ ಬಿಡುಗಡೆಯಾಗಲಿದೆ.