Advertisement

“ಜನಪ್ರಿಯ ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕು’

12:30 AM Mar 02, 2019 | |

ಕೋಟ: ಕೇಂದ್ರ ಸರಕಾರದ ಆಯುಷ್ಮಾನ್‌ ಯೋಜನೆ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಯೋಜನೆಯಾಗಿದ್ದು, ಇದರ ಕಾರ್ಡ್‌ಗಳನ್ನು ಅಂಚೆ ಮೂಲಕ ತಲುಪಿಸಲಾಗುತ್ತದೆ. ಆದರೆ ಕೆಲವು ಕಡೆಗಳಲ್ಲಿ ವಿಳಾಸದಲ್ಲಿ ಅಲ್ಪ-ಸ್ವಲ್ಪ ಬದಲಾವಣೆಯಾಗುವುದರಿಂದ ಕಾರ್ಡ್‌ಗಳು ಸರಿಯಾಗಿ ತಲುಪುತ್ತಿಲ್ಲ. ಹೀಗಾಗಿ  ಸ್ವಲ್ಪ ಕಷ್ಟವಾದರೂ  ಕಾರ್ಡ್‌ಗಳನ್ನು ಸರಿಯಾಗಿ ತಲುಪಿಸುವ ಕಾರ್ಯವನ್ನು ಅಂಚೆ ಇಲಾಖೆಯವರು ಮಾಡಬೇಕು. ಈ ಮೂಲಕ ಜನಪ್ರಿಯ ಯೋಜನೆಯ ಯಶಸ್ವಿಗೆ ಕೈಜೋಡಿಸಬೇಕು ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. 

Advertisement

ಅವರು ಮಾ. 1ರಂದು ಕೋಟ ಉಪ ಅಂಚೆ ಕಚೇರಿಯ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು.

ಸ್ಥಳೀಯಾಡಳಿತ ಪ್ರತಿನಿಧಿಗಳನ್ನು ವಿಶ್ವಾಸಕ್ಕೆಸೂಚನೆ 
ಸ್ಥಳೀಯ ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಗೈರಾಗಿದ್ದರು. ಈ ಕುರಿತು ವಿಷಯ ಪ್ರಸ್ತಾವಿಸಿ ಸಂಸದರು, ಇಲಾಖೆಯ ಸಂಹಿತೆಯಂತೆ ಆಮಂತ್ರಣವನ್ನು ಮುದ್ರಿಸಿದರು ಕೂಡ  ತಳಮಟ್ಟದಲ್ಲಿ ಜನರ ಸೇವೆಯನ್ನು ಮಾಡುವ ಹಾಗೂ ಸರಕಾರಿ ಇಲಾಖೆಯ ಜತೆ ಸಮನ್ವಯಕ್ಕೆ ಸಹಕರಿಸುವ  ಸ್ಥಳೀಯಾಡಳಿತ ಪ್ರತಿನಿಧಿಗಳ ಹೆಸರನ್ನು ಆಮಂತ್ರಣದಲ್ಲಿ ಮುದ್ರಿಸಬೇಕು ಎಂದು ಕಿವಿಮಾತು ಹೇಳಿದರು.

49ಲಕ್ಷ ರೂನಲ್ಲಿ ನೂತನ ಕಟ್ಟಡ 
ಕೋಟ ಅಂಚೆ ಕಚೇರಿ 1954ರಲ್ಲಿ ಇ.ಡಿ.ಎಸ್‌.ಒ. ಆಗಿ ಕಾರ್ಯಾರಂಭಗೊಂಡಿತು ಹಾಗೂ 1958ರಲ್ಲಿ ಉಪ ಅಂಚೆಕಚೇರಿಯಾಗಿ ಮೇಲ್ದರ್ಜೆಗೇರಿ ಇದುವರೆಗೆ ಬಾಡಿಗೆ ಕಟ್ಟಡಲ್ಲಿ ಕಾರ್ಯನಿರ್ವಹಿಸುತಿತ್ತು. ಇದೀಗ 49ಲಕ್ಷ ರೂ.ವೆಚ್ಚದಲ್ಲಿ ಕಟ್ಟಡ ನಿರ್ಮಾಣಗೊಂಡಿದೆ ಎಂದು ಇಲಾಖೆಯ ಉಡುಪಿ ವಿಭಾಗದ ಅಧೀಕ್ಷಕ ಸುಧಾಕರ ದೇವಾಡಿಗ ತಿಳಿಸಿದರು.ದಕ್ಷಿಣ ಕರ್ನಾಟಕ ವಲಯ ಪೋಸ್ಟ್‌ ಮಾಸ್ಟರ್‌ ಜನರಲ್‌ ಎಸ್‌. ರಾಜೇಂದ್ರ ಕುಮಾರ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.

ಸಹಕರಿಸಿದವರಿಗೆ ಅಭಿನಂದನೆ 
ಸಾಮಾಜಿಕ ಹೋರಾಟಗಾರರಾದ ಕೋಟ ಗಿರೀಶ್‌ ನಾಯಕ್‌ ಅವರು ಇಲಾಖೆಯೊಂದಿಗೆ ನಡೆಸಿದ ಸತತ ಪತ್ರ ವ್ಯವಹಾರ ಹಾಗೂ ಒತ್ತಡದಿಂದ ಕಟ್ಟದ ಮಂಜೂರಾಗಿದೆ ಎಂದು ಗಿರೀಶ್‌ ನಾಯಕ್‌ ಅವರಿಗೆ ಇಲಾಖೆಯ ವತಿಯಿಂದ ಅಭಿನಂದನೆ ಸಲ್ಲಿಸಲಾಯಿತು ಹಾಗೂ ಸಹಕರಿಸಿದ ಶ್ರೀಕಾಂತ್‌ ಶೆಣೈ ಅವರನ್ನು ಅಭಿನಂದಿಸಲಾಯಿತು.  ಇಲಾಖೆಯ ಪೂರ್ಣಿಮ ಜನಾರ್ಧನ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next