Advertisement
ಶಾಲೆಯಲ್ಲಿ 1ರಿಂದ 8ನೇ ತರಗತಿ ವರೆಗೆ 400ರಷ್ಟು ವಿದ್ಯಾರ್ಥಿಗಳಿದ್ದಾರೆ. ಅವರಲ್ಲಿ 4, 5, 7, 8ನೇ ತರಗತಿಯ ಹತ್ತು ವಿದ್ಯಾರ್ಥಿನಿಯರು ಈ ಯೋಗ ಪ್ರದರ್ಶನದಲ್ಲಿ ತೊಡಗಿಸಿಕೊಂಡು ತಾಲೂಕಿನ ವಿದ್ಯಾರ್ಥಿ ವೃಂದಕ್ಕೆ ಆದರ್ಶಪ್ರಾಯವಾಗಿದ್ದಾರೆ.
Related Articles
ವೃಕ್ಷಾಸನ, ಮತ್ಸೇಂದ್ರಾಸನ, ಶೀರ್ಷಾಸನ ಮತ್ತು ಪಿರಾಮಿಡ್‌ಗಳ ಪ್ರದರ್ಶನ ನೀಡುತ್ತಲಿದ್ದಾರೆ.
Advertisement
ವಿದ್ಯಾರ್ಥಿನಿಯರು ಶಾಲೆ ಹಾಗೂ ಗ್ರಾಮದಲ್ಲಿ ಜರುಗುತ್ತಿರುವ ವಿಶೇಷ ಕಾರ್ಯಕ್ರಮಗಳಲ್ಲಿ ತಮ್ಮ ಯೋಗ ಪ್ರದರ್ಶನವನ್ನು ನೀಡಿ ಜನ ಮನ್ನಣೆ ಪಡೆಯುತ್ತ ಇತರೆ ಮಕ್ಕಳನ್ನೂ ಆಕರ್ಷಿಸುತ್ತಿದ್ದಾರೆ. ಅಂಬಿಗ ಅವರು ಪ್ರತಿ ಬುಧವಾರ ಯೋಗ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆನ್ನುವ ಮನೋಬಲ ಹೊಂದಿದ್ದು, ಶಿಕ್ಷಕರು, ಎಸ್‌ಡಿಎಂಸಿಯವರು ಮತ್ತು ಗ್ರಾಮಸ್ಥರು ಸಹಕರಿಸುತ್ತಿದ್ದಾರೆ. ಶಿಕ್ಷಣ ಇಲಾಖೆ ಈ ಮಕ್ಕಳ ಪ್ರತಿಭೆ ಪ್ರೋತ್ಸಾಹಿಸುವುದರೊಂದಿಗೆ ತಾಲೂಕಿನ ಎಲ್ಲ ಶಾಲೆಗಳಲ್ಲಿಯೂ ಯೋಗಾಭ್ಯಾಸಕ್ಕೆ ಹೆಚ್ಚಿನ ಮುತುವರ್ಜಿ ವಹಿಸಲು ಮುಂದಾಗಬೇಕೆಂಬುದು ಪಾಲಕರ ಹಾಗೂ ಸಾರ್ವಜನಿಕರ ಅಪೇಕ್ಷೆಯಾಗಿದೆ.
ಮಕ್ಕಳ ಪ್ರತಿಭೆ ಗುರುತಿಸಿ ಅನಾವರಣಗೊಳಿಸುತ್ತಿರುವ ದೈಹಿಕ ಶಿಕ್ಷಣ ಶಿಕ್ಷಕ ಡಿ.ಎಸ್. ಅಂಬಿಗ ಅವರ ಕಾರ್ಯ ಶ್ಲಾಘನೀಯ. ಎಲ್ಲ ವಿದ್ಯಾರ್ಥಿಗಳು ಪ್ರತಿದಿನ ಯೋಗಾಭ್ಯಾಸದಲ್ಲಿ ತೊಡಗಿಸಿಕೊಳ್ಳಬೇಕು. ಎಂ.ಎಚ್. ಮುನ್ನೊಳ್ಳಿ, ಮುಖ್ಯಾಧ್ಯಾಪಕ ಶಾಲೆಯಲ್ಲಿ ಯೋಗ ಚಟುವಟಿಕೆಗಳು ಆರಂಭಗೊಂಡಂದಿನಿಂದ ಮಕ್ಕಳು ನಿರಂತರವಾಗಿ ಉತ್ಸುಕತೆಯಿಂದ ಆಟ-ಪಾಟಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿರುವುದು ಕಾಣಿಸುತ್ತಿದೆ.ಚನ್ನಪ್ಪ ಬಳಗಲಿ, ಪಾಲಕ, ಬೆಲವಂತರ
ಹಿರಿ-ಕಿರಿಯರೆಲ್ಲರೂ ಪ್ರತಿದಿನ ಜೀವನದಲ್ಲಿ ಯೋಗಾಭ್ಯಾಸ ಮಾಡುವುದರಿಂದ ದೈಹಿಕ-ಮಾನಸಿಕ ಸದೃಢತೆ ಉಂಟಾಗಿ ಲವಲವಿಕೆಯಿಂದ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬಹುದು. ನಮ್ಮ ಶಾಲೆಯ ಮಕ್ಕಳು ಇದಕ್ಕೆ ಮುಂದಾಗಿರುವುದು ಹೆಮ್ಮೆ ಎನಿಸಿದೆ.
ಈರಪ್ಪ ಬಸನಕೊಪ್ಪ, ಬೆಲವಂತರ, ಎಸ್‌ಡಿಎಂಸಿ ಸದಸ್ಯ ಪ್ರಭಾಕರ ನಾಯಕ