ತೊಳೆಯಲು ಹೋಗಿದ್ದ ವಿದ್ಯಾರ್ಥಿನಿಯೊಬ್ಬಳು ಕಾಲು ಜಾರಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
Advertisement
ಮೃತಪಟ್ಟ ವಿದ್ಯಾರ್ಥಿನಿಯನ್ನು ಎಸ್ಸೆಸ್ಸೆಲ್ಸಿ ವ್ಯಾಸಂಗ ಮಾಡುತ್ತಿದ್ದ ದಾನೇಶ್ವರಿ ಧರಿಗೊಂಡ (16) ಎಂದು ಗುರುತಿಸಲಾಗಿದೆ. ದಾನೇಶ್ವರಿ, ಬಟ್ಟೆ ತೊಳೆಯಲು ಹಿಪ್ಪರಗಿ ಗ್ರಾಮದಬಳಿಯ ಕೃಷ್ಣಾ ನದಿ ದಡಕ್ಕೆ ಹೋಗಿದ್ದಳು. ಈ ವೇಳೆ ಕಪ್ಪೆಮಾಸದಿಂದ ಕಾಲು ಜಾರಿದ್ದು, ನದಿಯಲ್ಲಿ ಹರಿದುಕೊಂಡು ಹೋಗಿದ್ದಾಳೆ. ಪೊಲೀಸರು, ಅಗ್ನಿ ಶಾಮಕ ದಳದ ಸಿಬ್ಬಂದಿ ಸಹಿತ ಅಧಿಕಾರಿಗಳು ತಡರಾತ್ರಿ ವರೆಗೂ ವಿದ್ಯಾರ್ಥಿನಿಯ ಶವ ಹುಡುಕಾಟದಲ್ಲಿ ತೊಡಗಿದ್ದು, ಶವ ಪತ್ತೆಯಾಗಿಲ್ಲ ಈ ಕುರಿತು ಜಮಖಂಡಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.