Advertisement

ರಸ್ತೆ ಬದಿ ಕಸ ಎಸೆದ ವಿದ್ಯಾರ್ಥಿಗೆ 1000 ರೂ. ದಂಡ !

11:49 AM Jul 06, 2019 | keerthan |

ಸುಳ್ಯ: ನಗರದ ರಸ್ತೆ ಬದಿಯಲ್ಲಿ ಕಸ ಎಸೆದ ವಿದ್ಯಾರ್ಥಿಯೊಬ್ಬನಿಗೆ ನಗರ ಪಂಚಾಯತ್‌ 1,000 ರೂ. ದಂಡ ವಿಧಿಸಿದ ಘಟನೆ ಸುಳ್ಯದಲ್ಲಿ ನಡೆದಿದೆ.

Advertisement

ಶುಕ್ರವಾರ ಬೆಳಗ್ಗೆ ನಗರದ ಲೋಕೋಪಯೋಗಿ ಇಲಾಖೆ ಹಳೆ ಕಚೇರಿ ಬಳಿ ಕಸದ ಕಟ್ಟೊಂದು ಕಂಡುಬಂದಿತ್ತು. ಈ ಸ್ಥಳದಲ್ಲಿ ಕಸ ಹಾಕಬಾರದು ಎಂಬ ನಾಮಫಲಕ ಇದ್ದರೂ ಅದಕ್ಕೆ ಸ್ಪಂದನೆ ದೊರಕದ ಕಾರಣ ಎರಡು ಸಿಸಿ ಕೆಮರಾ ಅಳವಡಿಸಲಾಗಿತ್ತು. ಕಸದ ಕಟ್ಟು ಕಂಡಾಕ್ಷಣ ಅಧಿಕಾರಿಗಳು ಕೆಮರಾ ಪರಿಶೀಲಿಸಿದರು. ಅದರಲ್ಲಿ ಬೈಕ್‌ ನಲ್ಲಿ ಬಂದ ವ್ಯಕ್ತಿಯೋರ್ವ ಕಸ ಎಸೆಯುತ್ತಿರುವ ದೃಶ್ಯ ಸೆರೆಯಾಗಿತ್ತು. ಪರಿಶೀಲನೆ ನಡೆಸಿದಾಗ ಕಸ ಎಸೆದ ವ್ಯಕ್ತಿಯ ಗುರುತು ಪತ್ತೆಯಾಯಿತು.

ಆತ ಪದವಿ ಓದುತ್ತಿರುವ ವಿದ್ಯಾರ್ಥಿ ಆಗಿದ್ದು ಬಾಡಿಗೆ ಕೊಠಡಿಯಲ್ಲಿ ಇರುವುದಾಗಿ ಖಚಿತಪಡಿಸಿಕೊಂಡ ಅಧಿಕಾರಿಗಳು ಅಲ್ಲಿಗೆ ಭೇಟಿ ನೀಡಿದರು. ಆಗ ವಿದ್ಯಾರ್ಥಿ ಅಲ್ಲಿರಲಿಲ್ಲ. ಕೊನೆಗೆ ಕೊಠಡಿಗೆ ಬೀಗ ಜಡಿದು ಈ ವಿದ್ಯಾರ್ಥಿ ನ.ಪಂ.ಗೆ ಬರುವಂತೆ ಮಾಲಕರಿಗೆ ತಿಳಿಸಿದರು. ವಿಷಯ ತಿಳಿದು ನ.ಪಂ.ಗೆ ಬಂದ ವಿದ್ಯಾರ್ಥಿಗೆ 1,000 ರೂ. ದಂಡ ವಿಧಿಸಿ ಎಚ್ಚರಿಕೆ ನೀಡಿ ಕಳುಹಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next