Advertisement

ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಹೆಸರು ದಾಖಲಿಸಿದ ಜಿಲ್ಲೆಯ ವಿದ್ಯ

04:29 PM Nov 22, 2018 | Team Udayavani |

ಚಿಕ್ಕಮಗಳೂರು: ಕಾಫಿ ನಾಡು ಚಿಕ್ಕಮಗಳೂರಿನ ಬಾಲಕನೋರ್ವ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸ್ಥಾನ ಪಡೆದಿದ್ದಾನೆ.  ನಗರದ ವಾಸವಿ ವಿದ್ಯಾಸಂಸ್ಥೆಯಲ್ಲಿ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಹಮಿª ಇಮ್ರಾನ್‌ ಸಣ್ಣ ವಯಸ್ಸಿನಲ್ಲೇ ಅತೀ ಹೆಚ್ಚು ವರ್ಣ ಚಿತ್ರ ರಚಿಸಿ ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ತನ್ನ ಹೆಸರು ದಾಖಲಿಸಿದ್ದಾನೆ.

Advertisement

ಈ ಬಗ್ಗೆ ಬಾಲಕನ ತಾಯಿ ಶಹಿದಾ ಶಬಾನ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಮಿ ಇಮ್ರಾನ್‌ ಅತೀ ಕಡಿಮೆ ವಯಸ್ಸಿನಲ್ಲಿ  400ಕ್ಕೂ ಹೆಚ್ಚುವರ್ಣ ಚಿತ್ರಗಳನ್ನು ರಚಿಸಿದ ವಿಭಾಗದಲ್ಲಿ ದಾಖಲೆ ನಿರ್ಮಿಸಿದ್ದಾನೆ. ಶಾಲೆಗೆ ಸೇರುವ ಮೊದಲೆ ಇಮ್ರಾನ್‌ಗೆ ಚಿತ್ರ ಬರೆಯುವ ಹವ್ಯಾಸವಿತ್ತು. ನೋಡಿದ್ದನ್ನು ಬರೆಯುತ್ತಿದ್ದ.

ಚಿತ್ರಗಳು ದೊರೆತರೆ ಅವುಗಳಿಗೆ ಬಣ್ಣ ಹಚ್ಚುತ್ತಿದ್ದ. ಆತನಲ್ಲಿ ಚಿತ್ರ ಬರೆಯುವ ಹವ್ಯಾಸ ಇದ್ದುದನ್ನು ಗಮನಿಸಿ ಅವರಿಗೆ ಪ್ರೋತ್ಸಾಹ ನೀಡಿದೆವು. ಚಿತ್ರಕಲಾ ಶಿಕ್ಷಕರಾದ ಕಟ್ಟಿಮನಿ, ಪೂರ್ಣಿಮಾ ಮಹೇಶ್‌, ಇಂದಿರಾ ಕುಶಕುಮಾರ್‌, ಭಗವಾನ್‌, ಗಣೇಶ್‌ ಆಚಾರ್ಯ, ವಿಶ್ವಕರ್ಮ ಆಚಾರ್ಯ ಸೇರಿದಂತೆ ಶಾಲೆಯ ಶಿಕ್ಷಕರು ಆತನಿಗೆ ಉತ್ತೇಜನ ನೀಡಿದರು ಎಂದರು.

ಇಮ್ರಾನ್‌ ಬರೆದ ವರ್ಣಚಿತ್ರಗಳಿಗೆ ಈವರೆಗೂ ಹಲವು ಪ್ರಶಸ್ತಿಗಳು ಬಂದಿವೆ. ಕಳೆದ ವರ್ಷ ಈತ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ ಪ್ರವೇಶಿಸಿದ್ದ, ಇದೀಗ ಏಷ್ಯ ಬುಕ್‌ ಆಫ್‌ ರೆಕಾರ್ಡ್‌ ಪ್ರವೇಶಿಸಿದ್ದಾನೆ. ನ.10 ರಂದು ಏಷ್ಯಾ ಬುಕ್‌ ಆಫ್‌ ರೆಕಾರ್ಡ್‌ನಿಂದ ಪ್ರಶಸ್ತಿ ಪತ್ರ ಬಂದಿದೆ ಎಂದು ಹೇಳಿದರು.

ಇಮ್ರಾನ್‌ ಶಿಕ್ಷಕ ಕಟ್ಟಿಮನಿ ಮಾತನಾಡಿ, ವರ್ಣಚಿತ್ರ ರಚನೆಯಲ್ಲಿ ಈತ ಉತ್ತಮ ಆಸಕ್ತಿ ಹೊಂದಿದ್ದಾನೆ. ಮಗುವಿನಲ್ಲಿದ್ದ ಆಸಕ್ತಿ ಗಮನಿಸಿ ಅವನ ಪೋಷಕರು ನೀಡಿದ ಪ್ರೋತ್ಸಾಹದಿಂದಾಗಿ ಇಮ್ರಾನ್‌ ಸಾಧನೆ ಮಾಡಲು ಸಾಧ್ಯವಾಗಿದೆ. ಮಕ್ಕಳಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂಬುದನ್ನು ಈತ ಒಳ್ಳೆಯ ಸಾಕ್ಷಿಯಾಗಿದ್ದಾನೆ.’ 

Advertisement

ಪೋಷಕರು ತಮ್ಮ ಮಕ್ಕಳು ಇಂಜಿನಿಯರ್‌ ಆಗಲಿ, ವೈದ್ಯರಾಗಲಿ ಎಂದು ಹಂಬಲಿಸುವ ಬದಲು ಅವರಲ್ಲಿರುವ ಆಸಕ್ತಿ ಗುರುತಿಸಿ ಪ್ರೋತ್ಸಾಹಿಸಬೇಕು ಎಂದರು. ಹಮಿ ಇಮ್ರಾನ್‌ ತಂದೆ ಖಾಲಿದ್‌ ಇಮ್ರಾನ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next