Advertisement

ಪೊಲೀಸ್‌ ಆಗುವ ಕನಸು ಹೊತ್ತಿದ್ದ ವಿದ್ಯಾರ್ಥಿನಿ ಸಾವು

06:27 PM Dec 16, 2022 | Team Udayavani |

ಪುತ್ತೂರು: ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ಅನುಶ್ರೀ (14) ಡಿ.15 ರಂದು ಅನಾರೋಗ್ಯದಿಂದ ನಿಧನ ಹೊಂದಿದರು.

Advertisement

ಕಾವು ನಿವಾಸಿ ಧರ್ಮಲಿಂಗಮ್‌ ಅವರ ಪುತ್ರಿ. ಮೂರು ದಿನಗಳಿಂದ ಜ್ವರ ಕಾಣಿಸಿದ್ದು, ಪುತ್ತೂರು ಆಸ್ಪತ್ರೆಯಿಂದ ಔಷಧ ಪಡೆದಿದ್ದರು. ಡಿ.15 ರಂದು ರಾತ್ರಿ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನಲೆಯಲ್ಲಿ ಪುತ್ತೂರು ಆಸ್ಪತ್ರೆಗೆ ಕರೆ ತಂದಿದ್ದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಡಿವೈಎಸ್ಪಿ ಭೇಟಿ
ಅನುಶ್ರೀ ಅವರು ಭವಿಷ್ಯದಲ್ಲಿ ಪೊಲೀಸ್‌ ಅಧಿಕಾರಿ ಆಗಬೇಕು ಎನ್ನುವ ಕಾರಣಕ್ಕೆ ಕೊಂಬೆಟ್ಟಿಗೆ ಸೇರಿದ್ದಳು. ಇಲ್ಲಿ ಪೊಲೀಸ್‌ ಕೆಡೆಟ್‌ ತರಬೇತಿ ಪಡೆಯುತ್ತಿದ್ದು, ತಾನು ಪೊಲೀಸ್‌ ಆಗುವ ಕನಸು ಹೊತ್ತಿದ್ದಳು. ಅನಾರೋಗ್ಯದಿಂದ ಮೃತಪಟ್ಟ ಹಿನ್ನೆಲೆಯಲ್ಲಿ ಅವರ ಪೊಲೀಸ್‌ ಆಗುವ ಕನಸು ಕನಸಾಗಿ ಉಳಿದು ಹೋಯಿತು. ಈ ಕುರಿತು ಮಾಹಿತಿ ಪಡೆದ ಪುತ್ತೂರು ಡಿವೈಎಸ್ಪಿ ಡಾ| ವೀರಯ್ಯ ಹಿರೇಮಠ್ ಅವರು ಅನುಶ್ರೀ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಕೊಂಬೆಟ್ಟು ಸರಕಾರಿ ಪ್ರೌಢಶಾಲೆಯ ಶಾಲಾಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಪಿ.ಜಿ.ಜಗನ್ನಿವಾಸ ರಾವ್‌ ಉಪಸ್ಥಿತರಿದ್ದರು. ಅನುಶ್ರೀ ಅವರ ನಿಧನದ ಹಿನ್ನಲೆಯಲ್ಲಿ ಡಿ.16 ರಂದು ಶಾಲೆಗೆ ರಜೆ ಸಾರಲಾಯಿತು.

 

Advertisement

Udayavani is now on Telegram. Click here to join our channel and stay updated with the latest news.

Next