ಸುರತ್ಕಲ್: ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಭಾರತವನ್ನು “ವಿಶ್ವ ಗುರು’, ಬಲಿಷ್ಠ ರಾಷ್ಟ್ರ ವನ್ನಾಗಿ ಮಾಡಲು ಸಾಧ್ಯ. ಹಾಗಾಗಿ ಅವರು ಮತ್ತೂಮ್ಮೆ ಸರಕಾರ ರಚಿಸಬೇಕು ಎಂದು ಬಿಜೆಪಿ ಶಾಸಕ ಡಾ| ಭರತ್ ಶೆಟ್ಟಿ ವೈ. ಹೇಳಿದರು.
ಚುನಾವಣ ಅಭಿಯಾನದ ಭಾಗ ವಾಗಿ ನಡೆದ ಬಿಜೆಪಿ ಮುಖಂಡರ, ಕಾರ್ಯ ಕರ್ತರ ಸಭೆಯಲ್ಲಿ ಮಾತನಾಡಿದ ಅವರು, ವಿಶ್ವದ ಆರ್ಥಿಕ ಶಕ್ತಿಗಳಲ್ಲಿ ಈಗ ಭಾರತ ಆರನೇ ಸ್ಥಾನದಲ್ಲಿದೆ. ಅದು ಒಂದನೇ ಸ್ಥಾನಕ್ಕೆ ತರಲು ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದರು.
ಮೋದಿ ಅವರ ಆಡಳಿತ ಭ್ರಷ್ಟಾಚಾರ ಮುಕ್ತವಾಗಿದೆ. ಭಯೋತ್ಪಾದಕರ ವಿರುದ್ಧ ಕಠಿನ ಕ್ರಮ ಕೈಗೊಂಡಿದ್ದಾರೆ. ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಮಹಾಘಟಬಂಧನದ ನಾಯಕರಾದ ಮುಲಾಯಂ ಸಿಂಗ್ ಯಾದವ್ ಅವರೇ ಹೇಳಿದ್ದಾರೆ. ದೇಶದ ಎಲ್ಲ ಕಡೆಗಳಲ್ಲಿ ಈಗಲೂ ಮೋದಿ ಪರ ಅಲೆ ಇದೆ ಎಂದರು.
ಆಧುನಿಕ ತಂತ್ರಜ್ಞಾನವನ್ನು ಬಳಸಿ ಕೊಂಡು ಅವರು ಸದಾ ಜನರೊಂದಿಗೆ ಬೆರೆಯುತ್ತಾರೆ. ಈ ಪ್ರಮಾಣದಲ್ಲಿ ದೇಶದ ಪ್ರಜೆಗಳೊಂದಿಗೆ ನೇರವಾಗಿ ಸಂಪರ್ಕ ಹೊಂದಿರುವ ಮೊದಲ ಪ್ರಧಾನಿ ಅವರು ಎಂದು ಹೇಳಿದರು.
“ಸ್ವತ್ಛ ಭಾರತ, ಬೇಟಿ ಬಚಾವೊ, ಬೇಟಿ ಪಡಾವೊ, ಇಜ್ವಲ್, ಕಿಸಾನ್ ಸಮ್ಮಾನ್ ಹೀಗೆ ಹಲವು ಜನಸ್ನೇಹಿ ಯೋಜನೆಗಳನ್ನು ಮೋದಿ ಸರಕಾರ ಜಾರಿಗೆ ತಂದಿದೆ. 2022ರ ವೇಳೆಗೆ ದೇಶದ ಪ್ರತಿಯೊಬ್ಬ ಬಡವನಿಗೂ ಮನೆ ನಿರ್ಮಿಸಿಕೊಡಬೇಕು ಎಂಬ ಗುರಿಯನ್ನು ಹೊಂದಿದೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾವಿ ಸಿರುವ ಕನಿಷ್ಠ ಆದಾಯ ಖಾತರಿ ಯೋಜನೆಯನ್ನು ಟೀಕಿಸಿದ ಅವರು, ಇಂತಹ ಯೋಜನೆಗಳ ಮೂಲಕ ಕಾಂಗ್ರೆಸ್ ಜನರಲ್ಲಿ ಕನಸು ಬಿತ್ತುತ್ತಿದೆ. ಎಲ್ಲರೂ “ಗರೀಬೀ ಹಠಾವೊ’ ಎಂದು ಹೇಳುತ್ತಲೇ ಬಂದಿದ್ದರು. ಈಗ ರಾಹುಲ್ ಗಾಂಧಿ ಅವರು ಕೂಡ ಅದನ್ನೇ ಹೇಳುತ್ತಿದ್ದಾರೆ. ಇಂತಹ ಯೋಜನೆಗಳ ಮೂಲಕ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದರು.
ಬಿಜೆಪಿ ಮುಖಂಡರಾದ ಗಣೇಶ್ ಹೊಸಬೆಟ್ಟು, ಗುಣಶೇಖರ ಶೆಟ್ಟಿ, ವಿಟuಲ ಸಾಲ್ಯಾನ್, ಅಶೋಕ್ ಕೃಷ್ಣಾಪುರ, ವರುಣ್ ಚೌಟ ಮತ್ತಿತರ ನಾಯಕರು, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.