ಹುಣಸೂರು: 18 ವರ್ಷದೊಳಗಿನವರು ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದಲ್ಲಿ ಮಾಲಿಕರು, ಚಾಲಕರಿಗೂ ದಂಡ ಕಟ್ಟಿಟ್ಟ ಬುತ್ತಿ. ಅಲ್ಲದೆ ಕಠಿಣ ಶಿಕ್ಷೆಯೂ ಕಾದಿದೆ ಎಂದು ಮಡಿಕೇರೆ ಮತ್ತು ಹುಣಸೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಜೆ.ಪಿ.ಗಂಗಾಧರ್ ಎಚ್ಚರಿಸಿದರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಆಯೋಜಿಸಿದ್ದ ಸರ್ಕಾರದ ಮಹತ್ವಾಕಾಂಕ್ಷೆಯ ರೈತ ಸಾರಥಿ ಯೋಜನೆಯಡಿ ಹುಣಸೂರು ಸಹಾಯಕ ಪ್ರಾದೇಶಿಕ ಸಾರಿಗೆ ಕಚೇರಿವತಿಯಿಂದ ರೈತರಿಗೆ ಉಚಿತ ಚಾಲನ ತರಬೇತಿ ಮತ್ತು ಕಾಯಂ ಚಾಲನಾ ಪರವಾನಗಿ ಪತ್ರ ವಿತರಣಾ ಸಮಾರಂಭದಲ್ಲಿ ರೈತರಿಗೆ ಡಿಎಲ್ ವಿತರಿಸಿ ಮಾತನಾಡಿದ ಅವರು, ಸಂಚಾರಿ ನಿಯಮವೆನ್ನುವುದು ಬ್ರಹ್ಮಜಾnನವೇನಲ್ಲ.
ಸುರಕ್ಷಿತ ವಾಹನ ಚಾಲನೆಗಾಗಿ ರೂಪಿಸಿರುವ ಹಲವು ನಿಯಮಗಳನ್ನು ಚಾಚುತಪ್ಪದೇ ಪಾಲಿಸಿದಲ್ಲಿ ಎಲ್ಲರಿಗೂ ಅನುಕೂಲ. ರೈತರು ಕೃಷಿ ಕಾರ್ಯಕ್ಕಾಗಿ ಅತ್ಯಂತ ಹೆಚ್ಚು ಬಳಸುವ ಟ್ರಾಕ್ಟರ್‌ಗಳು ಹೆಚ್ಚಿನ ವೇಗ ಚಾಲನಾ ಸಾಮರ್ಥ್ಯವನ್ನು ಹೊಂದಿವೆ. ಹಾಗಾಗಿ ಅತ್ಯಂತ ಎಚ್ಚರಿಕೆಯಿಂದ ಚಾಲನೆ ಅಗತ್ಯ , ಜೊತೆಗೆ ಚಾಲನಾ ಪರವಾನಗಿ ಇಲ್ಲದವರು ಟ್ರಾಕ್ಟರ್ ಚಲಾಯಿಸದಂತೆ ಮನವಿ ಮಾಡಿದರು.
1360 ಡಿಎಲ್ ವಿತರಣೆ ಗುರಿ: ಕಚೇರಿ ಅಧೀಕ್ಷಕ ಎಂಆರ್‌ಎನ್ ಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಇಲ್ಲಿಯವರಗೆ 3114 ಟ್ರಾಕ್ಟರ್‌ಗಳಿಗೆ ಡಿಎಲ್ ನೀಡಲಾಗಿದೆ. ಜ.31ರವರೆಗೆ ಒಟ್ಟು 576 ಎಲ್‌ಎಲ್‌ಆರ್, 481 ಡಿ ಎಲ್ ವಿತರಿಸಲಾಗಿದೆ. ಈವರೆಗೆ ಒಟ್ಟು 7740 ಟ್ರಾಕ್ಟರ್‌ಗಳು ನೋಂದಣಿಯಾಗಿದ್ದು,
2017-18ಕ್ಕೆ ಹುಣಸೂರು ಕಚೇರಿಗೆ 760 ಟ್ರಾಕ್ಟರ್‌ಗಳು ಹಾಗೂ ಮಡಿಕೇರಿಯಿಂದ ಹುಣಸೂರು ಕಚೇರಿಗೆ ಸ್ಥಳಾಂತರಗೊಂಡಿರುವ 600 ಟ್ರಾಕ್ಟರ್‌ಗಳು, ಒಟ್ಟು 1360 ಡಿಎಲ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ ಎಂದರು. ಕಾರ್ಯಕ್ರಮದಲ್ಲಿ ಸಿಬ್ಬಂದಿಗಳಾದ ವೆಂಕಟೇಶ್, ಶರತ್‌ಚಂದ್ರ, ಶಿವಣ್ಣ, ಹರೀಶ್, ಶ್ಯಾಮ್, ಬಿ.ಎಂ.ಶಾರದಾದೇವಿ, ವಿ.ಆರ್.ಜಾನಕಿ ಹಾಗೂ ರೈತರು ಇದ್ದರು.