Advertisement
ಯಾವುದೇ ಸನ್ನಿವೇಶ, ಘಟನೆ, ವಿದ್ಯ ಮಾನ, ವಿಚಾರವನ್ನು ಅರ್ಥ ಮಾಡಿ ಕೊಳ್ಳುವುದಕ್ಕೆ ನಮಗೆ ಅಡ್ಡಿಯಾಗಿ ನಿಲ್ಲುವುದು ಈ ಗ್ರಹಿಕೆಗಳೇ. ಒಂದರ್ಥ ದಲ್ಲಿ ಇದು ನಾವು ಬಣ್ಣದ ಕನ್ನಡಕ ಧರಿಸಿ ಜಗತ್ತನ್ನು ನೋಡಿದ ಹಾಗೆ. ಬಣ್ಣದ ಕನ್ನಡಕ ತೆಗೆದಾಗ ಮಾತ್ರ ಲೋಕದ ನೈಜ ಬಣ್ಣ ಕಾಣಿಸುತ್ತದೆ. ಆದರೆ ನಾವು ಪ್ರತಿ ಯೊಂದನ್ನೂ ನಮ್ಮದೇ ಪೂರ್ವಾಗ್ರಹ ಗಳ ಆಧಾರದಲ್ಲಿ ವ್ಯಾಖ್ಯಾನಿಸುತ್ತೇವೆ, ಅರ್ಥ ಮಾಡಿಕೊಳ್ಳುತ್ತೇವೆ.
Related Articles
ಹದಿನೈದು ವರ್ಷ ಗಳು ಸಂದವು. ಹದಿ ನಾರನೆಯ ವರ್ಷದಿಂದ ಆತ ಇರುವೆಗೆ ನೃತ್ಯ ಮಾಡುವುದನ್ನು ಕಲಿ ಸಲು ಆರಂಭಿಸಿದ. ಕಾಲ ಕ್ರಮೇಣ ಅದು ಗಿಟಾರ್ ನುಡಿಸುತ್ತ, ನರ್ತಿಸುವು ದನ್ನು ಕಲಿತಿತು.
Advertisement
ಬಿಡುಗಡೆಯ ದಿನ ಹತ್ತಿರ ಬಂತು. ಜೈಲಿನಿಂದ ಹೊರಹೋದ ಮೇಲೆ ಹೊಟ್ಟೆ ಗೇನು ಮಾಡುವುದು ಎಂದು ಆಲೋಚಿ ಸುತ್ತಿದ್ದವನಿಗೆ ಇರುವೆಯ ಪ್ರದರ್ಶನ ಏರ್ಪಡಿಸಿದರೆ ಲಕ್ಷಾಂತರ ರೂಪಾಯಿ ಹರಿದುಬರುವುದರಲ್ಲಿ ಸಂಶಯವೇ ಇಲ್ಲ ಎಂದು ಹೊಳೆದುಬಿಟ್ಟಿತು.
ಬಿಡುಗಡೆಯ ದಿನ ಸಂತಸ ಆಚರಣೆ ಗಾಗಿ ಆತ ಹತ್ತಿರದ ಪಾನ ಕೇಂದ್ರಕ್ಕೆ ಹೋದ. ಅಲ್ಲಿ ಬೇಕಾದುದನ್ನು ತರಿಸಿದ ಬಳಿಕ ಇರುವೆಯನ್ನು ಮೇಜಿನ ಮೇಲೆ ಕೂರಿಸಿ ನರ್ತಿಸಲು ಹೇಳಿದ. ಪಾನ ಕೇಂದ್ರದ ಸಿಬಂದಿಯನ್ನು ಕರೆದು, “ಹೇಗನಿಸುತ್ತದೆ’ ಎಂದು ಕೇಳಿದ.
ಸಿಬಂದಿ “ಫಟ್’ ಎಂಬ ಸಪ್ಪಳ ಸಹಿತ ಇರುವೆಯನ್ನು ಕೊಂದು ಹಾಕಿದ. “ಕ್ಷಮಿಸಿ ಸರ್, ಮುಂದಿನ ಬಾರಿ ಹೀಗಾಗದು; ಮೇಜನ್ನು ಚೆನ್ನಾಗಿ ಒರೆಸಿ ಇಡುತ್ತೇನೆ’ ಎಂದ.
ಆ ಸಿಬಂದಿಯದು ತನ್ನದೇ ಆದ ಪೂರ್ವಾನುಭವ – “ಮೇಜಿನ ಮೇಲೆ ನೊಣ, ಇರುವೆ ಇರಬಾರದು.’ ಪ್ರಾಯಃ ಹಿಂದೆ ಕೆಲವು ಗ್ರಾಹಕರು ಹೀಗಾಗಿದ್ದಕ್ಕೆ ಆತನಿಗೆ ಬೈದಿರಬಹುದು. ಈಗ ಆತ ಜಗತ್ತಿನ ಅತ್ಯಂತ ಅಮೂಲ್ಯವಾದ ಇರುವೆಯನ್ನು ಕೊಂದುಹಾಕಿದ್ದ.
ವಿವೇಚನೆಯನ್ನು ಉಪಯೋಗಿಸದೆ ಪೂರ್ವಗ್ರಹಿಕೆಗಳ ಆಧಾರದಲ್ಲಿ ಕೆಲಸ ಮಾಡಿದರೆ ನಮ್ಮ ಕಥೆಯೂ ಇದೇ.
( ಸಾರ ಸಂಗ್ರಹ)