ತಾವರಗೇರಾ: ಪಟ್ಟಣದ ವಿವಿಧ ಸಮುದಾಯಗಳ ಶವ ಸಂಸ್ಕಾರಕ್ಕೆ ಮೀಸಲಿಟ್ಟಿರುವ ರುದ್ರಭೂಮಿ ಬಯಲು ಬಹಿರ್ದೆಸೆಯಿಂದ ಗಬ್ಬು ನಾರುತ್ತಿರುವುದು ಒಂದೆಡೆಯಾದರೇ, ಇನ್ನೊಂದೆಡೆ ಒತ್ತುವರಿಯಿಂದಾಗಿ ರುದ್ರಭೂಮಿ ಇದ್ದರೂ ಇಲ್ಲದಂತಾಗಿದೆ. ಇದಲ್ಲದೇ ಸ್ಮಶಾನ ಜಾಗೆ ಇರುವರೆಗೂ ಕಂದಾಯ ಇಲಾಖೆಗೆ ವರ್ಗಾವಣೆಗೊಳ್ಳದಿರುವುದು ಒತ್ತುವರಿಗೆ ಕಾರಣವಾಗಿದೆ.
ಪಟ್ಟಣದ ಎಲ್ಲ ಸಮಾಜದ ಶವ ಸಂಸ್ಕಾರಕ್ಕಾಗಿ ಸರ್ವೇ ನಂ: 54ರಲ್ಲಿ 18ಎಕರೆ 36 ಗುಂಟೆ ಜಾಗ ಗುರುತಿಸಲಾಗಿದ್ದು, ಈಗ ಇದು ಸಾರ್ವಜನಿಕರ ಬಹಿರ್ದೆಸೆಯ ತಾಣವಾಗಿ ಹಾಗೂ ಪಟ್ಟಣ ಪಂಚಾಯಿತಿಯ ಕಸ ವಿಲೇವಾರಿ ಘಟಕವಾಗಿ ಪರಿಣಮಿಸುತ್ತಿದೆ. ಇದರಿಂದಾಗಿ ಶವ ಸಂಸ್ಕಾರಕ್ಕೆ ತೆರಳುವವರು ದುರ್ವಾಸನೆಯಲ್ಲಿಹಾಗೂ ತ್ಯಾಜ್ಯದ ದಿಬ್ಬಗಳನ್ನು ದಾಟಿಕೊಂಡು ಹೋಗುವ ಪರಿಸ್ಥಿತಿ ಎದುರಾಗಿದೆ. ಸಂಬಂಧಿಸಿದ ಕಂದಾಯ ಇಲಾಖೆ ಹಾಗೂ ಸ್ಥಳೀಯ ಪಟ್ಟಣ ಪಂಚಾಯತಿಯವರು ನಿರ್ಲಕ್ಷ್ಯ ತೋರುತ್ತಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಇನ್ನೂ ಕೆಲವು ಕಡೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೂಡ ಎಲ್ಲೆಂದರಲ್ಲಿ ಕಸ ಹಾಕುವುದರಿಂದಾಗಿಸ್ಮಶಾನದ ಜಾಗೆ ಮರೆಯಾಗಿದ್ದು, ಕೇವಲ ಬಯಲು ಬಹಿರ್ದೆಸೆ ಮತ್ತು ಕಸದ ತೊಟ್ಟಿಯಾಗಿ ಮಾರ್ಪಟ್ಟಿದೆ.
ಈ ಹಿಂದೆ ಗ್ರಾಮ ಪಂಚಾಯತ್ ವತಿಯಿಂದ ಉದ್ಯೋಗ ಖಾತ್ರಿ ಯೋಜನೆಯಡಿ ಒಂದು ಬಾರಿ ಮಾತ್ರ ಸ್ವಚ್ಛತೆ ಕೈಗೊಂಡಿದ್ದನ್ನು ಬಿಟ್ಟರೆ ಇದುವರೆಗೂ ಯಾವುದೇ ರೀತಿಯ ಅಭಿವೃದ್ಧಿ ಕಾಮಗಾರಿ ನಡೆದಿಲ್ಲ. ಈ ರುದ್ರಭೂಮಿ ಸುತ್ತಲೂ ಕಾಂಪೌಂಡ್ ಅವಶ್ಯಕತೆ ಇದ್ದು, ಉಳಿದ ಜಾಗವನ್ನು ಒತ್ತುವರಿ ಮಾಡಿಕೊಳ್ಳದಂತೆ ನೋಡಿಕೊಳ್ಳಬೇಕೆಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಇಲ್ಲಿಯ ಪ್ರಗತಿಪರ ಸಂಘಟನೆಗಳ ಪದಾಧಿಕಾರಿಗಳು ಈ ಬಗ್ಗೆ ಹಲವು ಬಾರಿ ಸಂಬಂಧಿ ಸಿದ ಅಧಿಕಾರಿಗಳ ಗಮನಕ್ಕೆ ತಂದರು ಕೂಡ ಯಾವುದೇ ಪ್ರಯೋಜನವಾಗಿಲ್ಲ. ಉಳಿದಂತೆ ಇನ್ನಿತರ ಸಮಾಜದ ಇನ್ನು 30 ಎಕರೆ ಜಾಗೆಯಲ್ಲಿ ರುದ್ರಭೂಮಿಗಳಿದ್ದು, ಅವುಗಳು ಯಾವುದೇ ಒತ್ತುವರಿ ಇಲ್ಲದಿದ್ದರು ಕೂಡ ಕೆಲವರು ಆ ಜಾಗೆಯಲ್ಲಿ ತಿಪ್ಪೆಗಳನ್ನು ಹಾಕುವ ಮೂಲಕ ಹಾಗೂ ದನಗಳ ಕೊಟ್ಟಿಗೆಗಳಾಗಿ ಮಾರ್ಪಡಿಸಿಕೊಂಡಿದ್ದಾರೆ. ಅವುಗಳನ್ನು ಕೂಡ ತೆರವುಗೊಳಿಸಿ ಶವ ಸಂಸ್ಕಾರಕ್ಕೆಅನುಕೂಲ ಕಲ್ಪಿಸಿಕೊಡಬೇಕೆಂಬುದು ಪಟ್ಟಣದ ಜನತೆ ಒತ್ತಾಯ.
ಪಟ್ಟಣದಲ್ಲಿ ವಿವಿಧ : ಸಮುದಾಯದ ಶವಸಂಸ್ಕಾರಕ್ಕಾಗಿ ಮೀಸಲಿಟ್ಟಿರುವ ರುದ್ರಭೂಮಿಯಲ್ಲಿ ಬಯಲು ಬಹಿರ್ದೆಸೆ ಹಾಗು ಪಪಂ ಕಸ ವಿಲೇವಾರಿ ಮಾಡುತ್ತಿರುವದರಿಂದಾಗಿ ಸ್ಮಶಾನ ಜಾಗೆ ಇದ್ದರೂ ಇಲ್ಲದಂತಾಗಿದೆ. ಈ ಬಗ್ಗೆ ಸಂಬಂಧಿಸಿದ ಅ ಧಿಕಾರಿಗಳು ಕೂಡಲೇ ಕ್ರಮ ಕೈಗೊಳ್ಳಬೇಕು. ಆನಂದ ಭಂಡಾರಿ, ದಲಿತ ಮುಖಂಡ