ಬೀಳಗಿ: ತಾಲೂಕಿನಲ್ಲಿ ಸುಸಜ್ಜಿತ ಕ್ರೀಡಾಶಾಲೆಯ ಅವಶ್ಯಕತೆಯಿದ್ದು, ಸೊನ್ನ ಗ್ರಾಮದಲ್ಲೇ ಕ್ರೀಡಾಶಾಲೆ ಸ್ಥಾಪನೆ ಗುರಿ ಹೊಂದಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ .ಆರ್.ನಿರಾಣಿ ಹೇಳಿದರು.
ಸೊನ್ನ ಗ್ರಾಮದಲ್ಲಿ ಮಾರುತೇಶ್ವರ ಕಾರ್ತಿಕೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಅಂತಾರಾಜ್ಯ ಮಟ್ಟದ ಪುರುಷರ ಕಬಡ್ಡಿ ಪಂದ್ಯಾವಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸೊನ್ನ ಗ್ರಾಮದ ಜಮೀನುಗಳಿಗೆ ನೀರಾವರಿ ಸೌಲಭ್ಯ ಒದಗಿಸಲಾ ಗುವುದು. ಗ್ರಾಮದ ಅಭಿವೃದ್ಧಿಗೆ ಹೆಚ್ಚಿನ ಅಸಕ್ತಿ ವಹಿಸಲಾಗುವುದು ಎಂದರು. ಗ್ರಾಮೀಣ ಭಾಗದಲ್ಲಿ ನಡೆಯುವ ಜಾತ್ರೆಯಲ್ಲಿನ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿವಿಧ ಕ್ರೀಡೆಗಳಿಂದ ನೆಮ್ಮದಿ ದೊರೆಯುತ್ತದೆ. ಪ್ರತಿಯೊಬ್ಬರು ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮಾನಸಿಕ ಹಾಗೂ ಬೌ ದ್ಧಿಕ ಶಕ್ತಿ ಹೆಚ್ಚಾಗಲಿದೆ ಎಂದರು.
ಗ್ರಾಮದ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸೊನ್ನ ಗ್ರಾಮದ ರಸ್ತೆಯ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಆಗಿದೆ. ರಸ್ತೆ ಅಭಿವೃದ್ಧಿ ಕಾಮಗಾರಿ, ಶಾಲಾ ಕೊಠಡಿ ಉದ್ಘಾಟಿಸಲಾಗುವುದು. ಇನ್ನು ಕಸವಿಲೇವಾರಿ ಘಟಕವನ್ನು 20 ಲಕ್ಷ ರೂ. ಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತದೆ. ಬೀಳಗಿ ತಾಲೂಕಿನಲ್ಲಿ ಒಂದು ಸುಸಜ್ಜಿತ ಕ್ರೀಡಾಶಾಲೆ ಮಾಡಬೇಕಿದೆ. ಅದನ್ನು ಸೊನ್ನ ಗ್ರಾಮದಲ್ಲೇ ಸ್ಥಾಪನೆ ಮಾಡಲಾಗುವುದು ಎಂದರು.
ಬಿಜೆಪಿ ತಾಲೂಕು ಅಧ್ಯಕ್ಷ ಈರಣ್ಣ ಗಿಡ್ಡಪ್ಪಗೋಳ, ಎಪಿಎಂಸಿ ಸದಸ್ಯ ರಾಮಣ್ಣ ಕಾಳಪ್ಪಗೋಳ, ಬಿಜೆಪಿ ತಾಲೂಕು ಮಾಜಿ ಅಧ್ಯಕ್ಷ ಎಂ.ಎಂ. ಶಂಭೋಜಿ, ಗ್ರಾಪಂ ಅಧ್ಯಕ್ಷ ವಿಜಯ ಚಲವಾದಿ, ಪಟ್ಟಣ ಪಂಚಾಯಿತಿ ಸದಸ್ಯ ವಿಠuಲ ಬಾಗೇವಾಡಿ, ಗುರುನಾಥ ಪೋಲೆಶಿ, ಮಲ್ಲಯ್ಯ ಕುದರಿಮಠ, ಮಲ್ಲಪ್ಪ ಗಡೆಚ್ಚಿ, ಶ್ರೀಶೈಲ ಮಲಕಗೊಂಡ, ಇನಾಮಸಾಬ ತೆಗ್ಗಿ, ಆದಿಮಸಾಬ ಒಂಟಿ, ಮಲ್ಲಪ್ಪ ಮಡೆಪ್ಪಗೋಳ, ಬಸು ಪುರ್ಲಿ, ಬಸು ಪುರ್ಲಿ, ಡೋಗ್ರಿಸಾಬ ಬೇವಿನಗಿಡ, ಶ್ರೀಶೈಲ ಲಗಳಿ ಇದ್ದರು.