Advertisement

ಕಾರಿಗೆ ಗುದ್ದಿ ಫ್ಲೈಓವರ್ ನಿಂದ ಬಿದ್ದ ಟ್ರಕ್

10:52 AM Oct 19, 2019 | keerthan |

ಮುಂಬೈ: ಅತೀ ವೇಗದಿಂದ ಬಂದ ಟ್ರಕ್ ಒಂದು ಕಾರು ಮತ್ತು ಆಟೋ ರಿಕ್ಷಾಗೆ ಗುದ್ದಿ ನಂತರ ಫ್ಲೈ ಓವರ್ ನಿಂದ ಕೆಳಕ್ಕೆ ಬಿದ್ದ ಘಟನೆ ಗುರುವಾರ ರಾತ್ರಿ ಮುಂಬೈನ ಪಶ್ಚಿಮ ಎಕ್ಸ್ ಪ್ರೆಸ್ ವೇ ಹೈವೇ ಬಳಿಯ ವಿಲೇ ಪಾರ್ಲೇ ನಲ್ಲಿ ನಡೆದಿದೆ.

Advertisement

ಘಟನೆಯಲ್ಲಿ ನಾಲ್ಕು ಜನರು ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿದೆ.

ಮೂಲಗಳ ಮಾಹಿತಿ ಪ್ರಕಾರ ಟ್ರಕ್ ಚಾಲಕ ಹೊರಗೆ ಜಿಗಿದು ಪಾರಾಗಿದ್ದು, ಟ್ಯಾಕ್ಸಿಯಲ್ಲಿದ್ದ ನಾಲ್ವರು ಗಾಯಗೊಂಡಿದ್ದಾರೆ.

ಘಟನೆಯಿಂದ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಪೊಲೀಸರು ಜಜ್ಜಿಹೋಗಿದ್ದ ವಾಹನಗಳನ್ನು ಕ್ರೇನ್ ಮೂಲಕ ತೆಗೆಸಿ, ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next