Advertisement

Garmin ನಿಂದ ಗಾಲ್ಫರ್ ಗಳಿಗಾಗಿಯೇ ವಿಶೇಷ ವಾಚ್

07:18 PM Jul 13, 2023 | Team Udayavani |

ನವದೆಹಲಿ: ಸ್ಪೋರ್ಟ್ಸ್ ಮತ್ತು ಫಿಟ್ನೆಸ್ ಸ್ಮಾರ್ಟ್ ವಾಚ್ ಗಳ ಬ್ರಾಂಡ್ ಆದ ಗಾರ್ಮಿನ್ ಇಂಡಿಯಾ, ಭಾರತದಲ್ಲಿ ಅಪ್ರೋಚ್ ® S70 ಸರಣಿಯ ಸ್ಮಾರ್ಟ್ ವಾಚ್ ಗಳನ್ನು ಇಂದು ಬಿಡುಗಡೆ ಮಾಡಿದೆ.

Advertisement

ಗಾಲ್ಫ್ ಸೇರಿದಂತೆ ಫಿಟ್‌ನೆಸ್ ಉದ್ದೇಶದಿಂದ ವಿನ್ಯಾಸಗೊಳಿಸಲಾದ ಗಾಲ್ಫ್ ಸ್ಮಾರ್ಟ್‌ವಾಚ್‌ಗಳಾಗಿವೆ. ಗಾಲ್ಫ್ ಆಟಗಾರರ ಉತ್ತಮ ಆಲ್-ರೌಂಡ್ ಆಟಕ್ಕೆ ಸಹಾಯ ಮಾಡುತ್ತದೆ. ಅಪ್ರೋಚ್ S70 ಸ್ಮಾರ್ಟ್ ವಾಚ್ ಮೋಡ್‌ನಲ್ಲಿ 16 ದಿನಗಳವರೆಗೆ ಮತ್ತು GPS ಬಳಸುವಾಗ 20 ಗಂಟೆಗಳವರೆಗೆ ಚಾರ್ಜ್ ಹೊಂದಿದೆ.

ಇದು ಅಮೋಲೆಡ್ ಟಚ್ ಸ್ಕ್ರೀನ್ ಹೊಂದಿದೆ. ಗಾಲ್ಫರ್ ಗಳು 43 ಸಾವಿರ ಪ್ರಿಲೋಡೆಡ್ ಗಾಲ್ಫ್ ಕೋರ್ಸ್ ಗಳನ್ನು ಇದರಲ್ಲಿ ಪಡೆಯಬಹುದಾಗಿದೆ. 24/7 ಆರೋಗ್ಯ ನಿಗಾವಣೆ, ಫಿಟ್ನೆಸ್ ಟ್ರ್ಯಾಕಿಂಗ್ ಹೊಂದಿದೆ. ಸೆರಾಮಿಕ್ ಬೆಜೆಲ್ ಹಾಗೂ ಗೀರು ನಿರೋಧಕ ಲೆನ್ಸ್, 1.2 ಮತ್ತು 1.4 ಇಂಚಿನ ಪರದೆಯನ್ನು ಈ ವಾಚ್ ಗಳು ಹೊಂದಿದೆ.

ಈ ವಾಚ್ ಗಳು ಅಮೆಜಾನ್ ಮತ್ತು ಗಾರ್ಮಿನ್ ಬ್ರಾಂಡ್ ಸ್ಟೋರ್ ಗಳಲ್ಲಿ ಲಭ್ಯ. ಮೂರು ಮಾಡೆಲ್ ಗಳಲ್ಲಿ ಇದು ಲಭ್ಯವಿದ್ದು, 42 ಎಂಎಂ. ಮಾದರಿಗೆ 72,990 ರೂ. ಹಾಗೂ 47 ಎಂಎಂ. ಮಾದರಿಗೆ 78,490 ರೂ. ದರವಿದೆ.

Advertisement

Udayavani is now on Telegram. Click here to join our channel and stay updated with the latest news.

Next