Advertisement

ಆಹಾರಕ್ಕೆ ಧರ್ಮವಿಲ್ಲ; ಆಹಾರವೇ ಧರ್ಮವಯ್ಯ ಎಂದ ಜೊಮ್ಯಾಟೊ

09:53 AM Aug 01, 2019 | mahesh |

ಮಣಿಪಾಲ: ಆಹಾರ ತಿನ್ನುವವನಿಗೆ ಧರ್ಮ ಇರಬಹುದು. ಆದರೆ ಆಹಾರಕ್ಕೆ ಮಾತ್ರ ಧರ್ಮ ಇಲ್ಲ, ಇರಲೂ ಸಾಧ್ಯವಿಲ್ಲ. ಆಹಾರದ ಮುಖ್ಯ ಉದ್ದೇಶವೇ ಹಸಿವನ್ನು ನೀಗಿಸುವುದು. ಧರ್ಮವನ್ನು ನೋಡಿಕೊಂಡು ನಾವು ಮನೆಗೆ ದಿನಸು ಸಾಮಗ್ರಿ ತರುತ್ತೇವೆಯೇ? ಇಲ್ಲ. ಹಿಂದೂ ಆಗಿರಲಿ, ಮುಸ್ಲಿಂ ಆಗಿರಲಿ ಅಥವ ಕ್ರಿಶ್ಚಿಯನ್‌ ಆಗಿರಲಿ ಅದಕ್ಕೂ ನಮ್ಮ ವ್ಯಾಪಾರಗಳಿಗೂ ಸಂಬಂಧ ಇಲ್ಲ. ನಮ್ಮ ಹಣಕ್ಕೆ ಸರಿಯಾಗಿ ಅಂಗಡಿಯಾದ ಸಾಮಗ್ರಿಯನ್ನು ಕೈಗಿಡುತ್ತಾನೆ. ಒಂದು ವೇಳೆ ಇಲ್ಲಿಯೂ ಧರ್ಮದ ಮನಸ್ಥಿತಿ ಅದು ನಮ್ಮಲ್ಲಿ ಇದ್ದರೆ ಅದು ಅಧರ್ಮದ ಹಾದಿಯ ಸಂಕೇತ.

Advertisement

ಇಲ್ಲಿ ಮಧ್ಯಪ್ರದೇಶದ ಜಬಲಾಪುರದ ನಿವಾಸಿ ಶುಕ್ಲಾ ಎಂಬವರು ಅವರು ಆಹಾರ ಬಿಡಿ, ಆಹಾರವನ್ನು ಒದಗಿಸುವ ವ್ಯಕ್ತಿ ಬೇರೆ ಧರ್ಮದವನು ಎಂಬ ಕಾರಣಕ್ಕೆ ತಾನು ಆರ್ಡರ್‌ ಮಾಡಿದ್ದ ಫ‌ುಡ್‌ ಆನ್ನು ಕ್ಯಾನ್ಸ್‌ಲ್‌ ಮಾಡಿದ್ದಾನೆ. ಇಷ್ಟು ಮಾತ್ರವಲ್ಲದೇ ಸಂಸ್ಥೆ ಈತನಿಗೆ ಸರಿಯಾದದ ಉಪದೇಶವನ್ನೂ ನೀಡಿದ್ದು, ಗ್ರಾಹಕನನ್ನು ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದಾನೆ.

ಆಗಿದ್ದೇನು?
ಶುಕ್ಲಾ ಜೊಮ್ಯಾಟೊದಲ್ಲಿ ಆಹಾರವೊಂದನ್ನು ಆರ್ಡರ್‌ ಮಾಡಿದ್ದ. ಆದರೆ ತನ್ನ ಆರ್ಡರ್‌ ಅನ್ನು ಪೂರೈಸಲು ಹಿಂದುಯೇತರ ವ್ಯಕ್ತಿ ಬರುತ್ತಿದ್ದಾನೆ ಎಂಬುದನ್ನ ತಿಳಿದುಕೊಂಡು ಆರ್ಡರ್‌ ಕ್ಯಾನ್ಸಲ್‌ ಮಾಡಿದ್ದಾನೆ. ಈ ಕುರಿತು ಸ್ವತಃ ಟ್ವೀಟ್‌ ಮಾಡಿರುವ ವ್ಯಕ್ತಿ ಕಾರಣವನ್ನು ತಿಳಿಸಿದ್ದಾನೆ.

ತನ್ನ ಟ್ವೀಟ್‌ನಲ್ಲಿ “ನಾನು ಜೊಮ್ಯಾಟೊದಲ್ಲಿನ ಆರ್ಡರ್‌ ಕ್ಯಾನ್ಸಲ್‌ ಮಾಡಿದ್ದೇನೆ. ಆಹಾರವನ್ನು ಪೂರೈಸಲು ಅವರು ಹಿಂದುಯೇತರ ವ್ಯಕ್ತಿಯನ್ನು ನೇಮಿಸಿದ್ದರು. ಡೆಲಿವರಿ ಬಾಯ್‌ನನ್ನು ಬದಲಾಯಿಸಲು ಅವರು ಒಪ್ಪಿಲ್ಲ. ಮಾತ್ರವಲ್ಲದೇ ಕ್ಯಾನ್ಸಲ್‌ ಮಾಡಿದ ಮೊತ್ತವನ್ನು ಹಿಂತಿರುಗಿಸಲು ಸಂಸ್ಥೆ ಒಪ್ಪಿಲ್ಲ ಎಂದಿದ್ದಾನೆ.

ಜೊಮ್ಯಾಟೊ ಹೇಳಿದ್ದೇನು ಗೊತ್ತಾ?
ಗ್ರಾಹಕನ ಈ ನಡೆಗೆ ಜೊಮ್ಯಾಟೊ ಖಾರವಾಗಿಯೇ ಪ್ರತಿಕ್ರಿಸಿದೆ. ಆಹಾರಕ್ಕೆ ಯಾವುದೇ ಧರ್ಮವಿರುವುದಿಲ್ಲ. ಆಹಾರವೇ ಧರ್ಮ ಎಂದು ಟ್ವೀಟ್‌ ಮುಖಾಂತರ ಹೇಳಿದೆ.

Advertisement

ಜೊಮ್ಯೊಟೊ ಸ್ಥಾಪಕ ದೀಪೀಂದರ್‌ ಗೋಯಲ್‌ ಇದಕ್ಕೆ ಪ್ರತಿಕ್ರಿಯಿಸಿ ಕಂಪನಿಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಮ್ಮ ಮೌಲ್ಯಗಳ ಮೂಲಕವೇ ನಾವು ವ್ಯಾಪಾರವನ್ನು ಮಾಡುತ್ತೇವೆ. ಇದಕ್ಕೆ ವ್ಯತಿರಿಕ್ತವಾಗಿದ್ದ ವ್ಯವಹಾರವನ್ನು ಕಳೆದುಕೊಳ್ಳಲು ನಮಗೆ ಯಾವುದೇ ಬೇಸರ ಇಲ್ಲ ಎಂದಿದ್ದಾರೆ. ಒಟ್ಟಾರೆಯಾಗಿ ಸಂಸ್ಥೆ ಆಹಾರದ ಕುರಿತು ಹೇಳಿರುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಪ್ರಶಂಸನೆಗೆ ಕಾರಣವಾಗಿದೆ.

ಗ್ರಾಹಕನ ಟ್ವೀಟ್‌
Just cancelled an order on @ZomatoIN they allocated a non hindu rider for my food they said they can’t change rider and can’t refund on cancellation I said you can’t force me to take a delivery I don’t want don’t refund just cancel

ಜೊಮ್ಯೊಟೊ ಟ್ವೀಟ್‌

ದೀಪೀಂದರ್‌ ಗೋಯಲ್‌  ಟ್ವೀಟ್‌

Advertisement

Udayavani is now on Telegram. Click here to join our channel and stay updated with the latest news.

Next