Advertisement
ನಗರದಲ್ಲಿ ಭಾನುವಾರ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, “ಅಂತರ್ಜಾತಿ ವಿವಾಹವಾದವರಿಗೆ 2.50 ಲಕ್ಷ ರೂ. ಆರ್ಥಿಕ ನೆರವು ನೀಡಲಾಗುತ್ತಿದೆ. ಇದನ್ನು 5 ಲಕ್ಷ ರೂ.ಗೆ ಹೆಚ್ಚಳ ಮಾಡುವ ಬಗ್ಗೆ ಚಿಂತನೆ ನಡೆಸಲಾಗಿದೆ. ಹಾಗೆಯೇ ಅಂತರ್ಜಾತಿ ವಿವಾಹವಾದವರಿಗೆ ಉದ್ಯೋಗ, ಗ್ರಾಮೀಣ ಪ್ರದೇಶದ ಲ್ಲಿದ್ದರೆ 5 ಎಕರೆ ಜಮೀನು ನೀಡುವ ಸಂಬಂಧ ಕೇಂದ್ರ ಸರ್ಕಾರ ಆಸಕ್ತಿ ತಾಳಲಿದೆ,” ಎಂದರು.
Related Articles
Advertisement
ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ವರ್ಗ ಮತ್ತು ಹಿಂದುಳಿದ ವರ್ಗಗಳಿಗೆ ಶೇ. 49.5ರಷ್ಟು ಮೀಸಲಾತಿ ಇದೆ. ಇದನ್ನು ಆರ್ಥಿಕವಾಗಿ ಹಿಂದುಳಿದ ಎಲ್ಲ ಸಮುದಾಯದವರಿಗೆ ವಿಸ್ತರಿಸಲು ಮೀಸಲಾತಿ ಪ್ರಮಾಣವನ್ನು ಶೇ. 75ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.
ದೇಶದೆಲ್ಲೆಡೆ ಮೀಸಲಾತಿ ಬೇಕು ಎಂದು ಅನೇಕ ಸಮುದಾಯಗಳು ಪ್ರತಿಭಟನೆ ಮಾಡತೊಡಗಿವೆ. ಹರ್ಯಾಣದಲ್ಲಿ ಜಾಟ್, ಗುಜರಾತ್‌ನಲ್ಲಿ ಪಟೇಲ್ ಸಮುದಾಯ, ಆಂಧ್ರದಲ್ಲಿ ಕಾಪು, ರೆಡ್ಡಿ ಜನಾಂಗದವರು ಪ್ರತಿಭಟನೆಗೆ ಇಳಿದಿದ್ದಾರೆ. ಕರ್ನಾಟಕದಲ್ಲಿ ಒಕ್ಕಲಿಗರು ಮೀಸಲಾತಿ ಬೇಕು ಎಂದಿದಾರೆ. ಹೀಗಾಗಿ ಬಡವರನ್ನು ಗಮನದಲ್ಲಿಟ್ಟುಕೊಂಡು ಮೀಸಲಾತಿ ನೀಡಲಾಗುವುದು ಎಂದು ಸಚಿವ ಅಠಾವಳೆ ತಿಳಿಸಿದ್ದಾರೆ.
ನೋಟಿನ ಮೇಲೆ ಅಂಬೇಡ್ಕರ್ ಅವರ ಚಿತ್ರ ಹಾಕಿನೋಟು ರದ್ಧತಿಗೆ ಆರ್‌ಪಿಐ ಬೆಂಬಲ ಇದೆ. ಪ್ರತಿ 10 ವರ್ಷಕ್ಕೊಮ್ಮೆ ನೋಟುಗಳ ಬದಲಾವಣೆ ಮಾಡುವ ಮೂಲಕ ಕಪ್ಪು ಹಣಕ್ಕೆ ಕಡಿವಾಣ ಹಾಕಬೇಕು ಎಂದು ಅಂಬೇಡ್ಕರ್ ಕೂಡಾ ಹೇಳಿದ್ದರು. ದೇಶದಲ್ಲಿ ಇರುವ ನೋಟಿನಲ್ಲಿ ಮಹಾತ್ಮಗಾಂಧಿ ಭಾವಚಿತ್ರ ಇದೆ. ಇದಕ್ಕೆ ಯಾರದೇ ತಕರಾರಿಲ್ಲ. ಆದರೆ, ಸಂವಿಧಾನ ರಚಿಸಿದ ಅಂಬೇಡ್ಕರ್ ಅವರ ಆಶಯಗಳು ಸದಾ ಕಾಲ ಇರಬೇಕಾಗುತ್ತದೆ. ಹೀಗಾಗಿ ಇರುವ ಕರೆನ್ಸಿಗಳ ಪೈಕಿ ಯಾವುದಾದರೂ ಒಂದು ನೋಟಿನ ಮೇಲೆ ಅಂಬೇಡ್ಕರ್ ಭಾವಚಿತ್ರ ಮುದ್ರಿಸಬೇಕು ಎಂದು ಅಠಾವಳೆ ಆಗ್ರಹಿಸಿದರು.