Advertisement

ಗ್ರಾಪಂ ಸಾಮಾನ್ಯ ಸಭೆಯಲ್ಲಿ ಮಾತಿನ ಚಕಮಕಿ

06:22 PM Aug 27, 2022 | Team Udayavani |

ದೋಟಿಹಾಳ: ಗ್ರಾಪಂನಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯಲ್ಲಿ ಪಿಡಿಒ ಮತ್ತು ಗ್ರಾಪಂ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಗ್ರಾಪಂಗೆ ಕಸ ವಿಲೇವಾರಿ ವಾಹನ ಬಂದಿದ್ದು, ಚಾಲಕನ ನೇಮಕಾತಿ ನಿಯಮಗಳ ಬಗ್ಗೆ ಗ್ರಾಪಂ ಸದಸ್ಯರಿಗೆ ಮಾಹಿತಿ ನೀಡದೇ ಏಕಾಏಕಿ ವಾಟ್ಸ್‌ಆ್ಯಪ್‌ ಗೆ ಹಾಕಿರುವುದು ಏಕೆ ಎಂದು ಸದಸ್ಯರು ಪ್ರಶ್ನಿಸಿದರು.

Advertisement

ಇದಕ್ಕೆ ಉತ್ತರಿಸಿದ ಪಿಡಿಒ ಮುತ್ತಪ್ಪ ಛಲವಾದಿ, ನಾನು ಕಸ ವಿಲೇವಾರಿ ವಾಹನ ಸಿಬ್ಬಂದಿ ನೇಮಕಾತಿಯ ನಿಯಮದ ಮಾಹಿತಿ ಹಾಕಿರುವುದು ನಮ್ಮ ಗ್ರಾಪಂ ಸದಸ್ಯರ ಗ್ರೂಪ್‌ಗೆ ಮಾತ್ರ ಎಂದು ಹೇಳಿದರು. ಇದಕ್ಕೆ ಸದಸ್ಯರು ಒಪ್ಪಲಿಲ್ಲ, ಹಾಗಿದ್ದರೆ ಚಾಲಕರ ಹುದ್ದೆಗೆ ಸಾರ್ವಜನಿಕರಿಂದ ಅರ್ಜಿಗಳು ಬರಲು ಕಾರಣವೇನು ಎಂದು ಪ್ರಶ್ನೆ ಮಾಡಿದರು.

ಈ ನಿಯಮ ನಮ್ಮ ಗ್ರಾಪಂಗೆ ಮಾತ್ರ ಅಲ್ಲ. ಎಲ್ಲ ಗ್ರಾಪಂಗಳಿಗೂ ಒಂದೇ ಇರುವುದರಿಂದ ಬೇರೆಯವರಿಂದ ಅಥವಾ ಸಂಜೀವಿನಿ ಸಂಘದ ಸದಸ್ಯರಿಂದ ಮಾಹಿತಿ ಪಡೆದು ಅರ್ಜಿ ಸಲ್ಲಿಸಿರಬಹುದು ಎಂದು ಪಿಡಿಒ ಹೇಳಿದರು. ಮಾಹಿತಿ ನೀಡದೇ ನೀವೇ ಕೆಲಸ ಮಾಡುತ್ತಿದ್ದಿರಿ ಎಂದು ಸದಸ್ಯರು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಪಿಡಿಒ ನಾನು ಏಕ ಪಕ್ಷೀಯವಾಗಿ ಅಧಿಕಾರ ಚಲಾವಣೆ ಮಾಡಿಲ್ಲ. ಗ್ರಾಪಂ ಅಧ್ಯಕ್ಷರಿಗೆ ಮತ್ತು ಗ್ರಾಪಂ ಸದಸ್ಯರೇ ಗಮನಕ್ಕೆ ತಂದೆ
ಕೆಲಸ ಮಾಡುತ್ತಿದ್ದೇನೆ. ನರೇಗಾದಡಿ ಸದ್ಯ ರೈತರಿಗೆ ವೈಯಕ್ತಿಕವಾಗಿ ಬದು ನಿರ್ಮಾಣ, ಕೃಷಿಗೊಂಡ ನಿರ್ಮಾಣ ಮಾಡಿಕೊಳ್ಳಲು ಅವಕಾಶವಿದೆ. ಉಳಿದ ಯಾವು ಕಾಮಗಾರಿಗಳಿಗೆ ಇನ್ನೂ ಅನುಮೋದನೆ ನೀಡಿಲ್ಲ ಎಂದು ಹೇಳಿದರು.

ಇದೇ ವೇಳೆ ಸಾರ್ವಜನಿಕರಲ್ಲಿ ಸಾಂಕ್ರಾಮಿಕ ರೋಗ ಲಕ್ಷಣಗಳು ಹೆಚ್ಚಾಗಿ ಕಂಡು ಬರುತ್ತಿದ್ದು, ಕೂಡಲೇ ಗ್ರಾಮದ ಸ್ವತ್ಛತೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ವಾಣಿಜ್ಯ ಮಳಿಗೆಗಳ ಬಾಡಿಗೆ ವಸೂಲಿ, ಜೆಜೆಎಂ ಕಾಮಗಾರಿ, ಸಾರ್ವಜನಿಕರಿಂದ ಬಂದ ಅರ್ಜಿ, ಸಿಬ್ಬಂದಿ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಗ್ರಾಪಂ ಅಧ್ಯಕ್ಷ ಲಕ್ಷ¾ವ್ವ ಹನುಮಪ್ಪ ಕುಷ್ಟಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಪಂ ಸದಸ್ಯರು ಹಾಗೂ ಗ್ರಾಪಂ ಸಿಬ್ಬಂದಿಗಳು ಭಾಗವಹಿಸಿದ್ದರು.

ಗ್ರಾಪಂಗೆ ಬಂದ ಕಸ ವಿಲೇವಾರಿ ವಾಹನ ಚಾಲಕ ಸಿಬ್ಬಂದಿ ನೇಮಕಾತಿ ನಿಯಮಗಳ ಮಾಹಿತಿಯನ್ನು ನಮ್ಮ ಗ್ರಾಪಂ ಸದಸ್ಯರ ಗ್ರೂಪಿಗೆ ಮಾತ್ರ ಹಾಕಿದ್ದೇನೆ. ಬೇರೆಯವರಿಗೆ ನಾನು ಮಾಹಿತಿ ನೀಡಿಲ್ಲ. ಕೆಲವರು ಬೇರೆಯವರಿಂದ, ಸಂಜೀವಿನಿ ಸಂಘದರಿಂದ ಮಾಹಿತಿ ಪಡೆದು ಅರ್ಜಿ ಅರ್ಜಿ ಸಲ್ಲಿಸಲು ಬಂದ್ದಿದರು. ಇದನ್ನೇ ಸದಸ್ಯರು ತಪ್ಪಾಗಿ ತಿಳಿದುಕೊಂಡಿದ್ದಾರೆ.
*ಮುತ್ತಪ್ಪ ಛಲವಾದಿ,
ದೋಟಿಹಾಳ ಗ್ರಾಪಂ ಪಿಡಿಒ

Advertisement
Advertisement

Udayavani is now on Telegram. Click here to join our channel and stay updated with the latest news.

Next