Advertisement

ಬಿಎಸ್ಸೆನ್ನೆಲ್ಗೆ ಪರಿಹಾರ ಪ್ಯಾಕೇಜ್‌?

01:20 AM Jul 04, 2019 | mahesh |

ನವದೆಹಲಿ: ನಷ್ಟದಲ್ಲಿರುವ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಸಂಸ್ಥೆಗಳಿಗೆ ಒಟ್ಟಾರೆ 74,000 ಕೋಟಿ ರೂ.ಗಳ ಸಹಾಯಧನ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. ಸ್ವಯಂ ನಿವೃತ್ತಿ ಬಯಸುವ ಎರಡೂ ಕಂಪನಿಗಳ ನೌಕರರಿಗೆ ಗಣನೀಯ ಮೊತ್ತ ನೀಡಲು ಹಾಗೂ ಸ್ವಯಂ ನಿವೃತ್ತಿ ಯೋಜನೆಯನ್ನು ಮತ್ತಷ್ಟು ಆಕರ್ಷಕವಾಗಿಸಲು ಶೇ. 5ರಷ್ಟು ಪರಿಹಾರ ಧನವನ್ನು ಹೆಚ್ಚುವರಿಯಾಗಿ ನೀಡಲು ತೀರ್ಮಾನಿಸಲಾಗಿದೆ. ಇನ್ನು, 4ಜಿ ತರಂಗಾಂತರ ಸೇವೆಗಳ ಅನುಷ್ಠಾನಕ್ಕೆ ಹಾಗೂ ಸಂಸ್ಥೆಗಳ ತಾಂತ್ರಿಕ ನಿರ್ವಹಣೆಗಳ ಖರ್ಚು ವೆಚ್ಚಕ್ಕೆ 74,000 ಕೋಟಿ ರೂ.ಗಳ ಪ್ಯಾಕೇಜನ್ನು ಬಳಸಲು ಚಿಂತನೆ ನಡೆಸಲಾಗಿದೆ. ಈ ಬಗ್ಗೆ ‘ದ ಟೈಮ್ಸ್‌ ಆಫ್ ಇಂಡಿಯಾ’ ವರದಿ ಮಾಡಿದೆ.

Advertisement

‘ಎರಡೂ ಸಂಸ್ಥೆಗಳಲ್ಲಿನ ಹೂಡಿಕೆ ಹಿಂಪಡೆಯುವ ನಿರ್ಧಾರವನ್ನು ಕೈಬಿಡಲಾಗಿದೆ. ಹಾಗಾಗಿ, ಈ ಪ್ಯಾಕೇಜ್‌ ನೀಡಲು ತೀರ್ಮಾನಿಸಲಾಗಿದೆ. ಸುಮಾರು 20,000 ಕೋಟಿ ರೂ. ಮೊತ್ತದ 4ಜಿ ತರಂಗಾತರವನ್ನು ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಹಾಗೂ ಎಂಟಿಎನ್‌ಎಲ್ ಸಂಸ್ಥೆಗಳಿಗೆ ನೀಡಲು ಕೇಂದ್ರ ನಿರ್ಧರಿಸಿದ್ದು, ಇದರ ಮೂಲ ಶುಲ್ಕವಾದ 13,000 ಕೋಟಿ ರೂ.ಗಳನ್ನಷ್ಟೇ ಈ ಎರಡೂ ಕಂಪನಿಗಳು ನೀಡಬೇಕಾಗುತ್ತದೆ’ ಎಂದು ಪತ್ರಿಕೆ ವರದಿಯಲ್ಲಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next