Advertisement

ಕುಮಾರಸ್ವಾಮಿ ಮಣಿಸಲು ಸೈನಿಕನ ಕಾರ್ಯಾಚರಣೆ

12:02 AM May 03, 2023 | Team Udayavani |

ರಾಮನಗರ: ಹಾಲಿ ಮತ್ತು ಮಾಜಿ ಪ್ರಧಾನಿಗಳ ಪ್ರಚಾರ, ಸಿಎಂ ಆಗಲು ಹೊರಟಿರುವವರು, ಸಿಎಂ ಕುರ್ಚಿ ಕೆಡವಿದವರ ಮುಖಾಮುಖೀ ಕ್ಷೇತ್ರದಲ್ಲಿ ರಾಜಕೀಯ ರಂಗೇರುವಂತೆ ಮಾಡಿದ್ದು, ದಳಪತಿ ಕುಮಾರಸ್ವಾಮಿ ಮಣಿ ಸಲು ಬಿಜೆಪಿಯಿಂದ ಸೈನಿಕ ಚಿತ್ರದ ಖ್ಯಾತಿಯ ಯೋಗೇಶ್ವರ್‌ ಕಣಕ್ಕಿಳಿದಿದ್ದಾರೆ. ಇವರಿಬ್ಬರ ಜಿದ್ದಾಜಿದ್ದಿನ ಹೋರಾಟದ ನಡುವೆ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ.

Advertisement

ಕ್ಷೇತ್ರದಲ್ಲಿ ಒಕ್ಕಲಿಗ ಸಮುದಾಯದ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಮುಸ್ಲಿಂ, ದಲಿತ ಮತ್ತು ಹಿಂದುಳಿದ ಸಮು ದಾಯದ ಮತಗಳು ನಿರ್ಣಾಯಕವೆನಿಸಿದೆ. ಈ ಬಾರಿ ಗೆಲುವಿಗೆ ಟೊಂಕ ಕಟ್ಟಿರುವ ಎರಡೂ ಅಭ್ಯರ್ಥಿಗಳು ಎಲ್ಲ ಸಮುದಾಯಗಳ ಓಲೆ„ಕೆಗೆ ಕಸರತ್ತು ನಡೆಸುತ್ತಿದ್ದಾರೆ.

ಎಚ್‌ಡಿಕೆಗೆ ಪ್ರತಿಷ್ಠೆಯ ಕಣ: ಕಳೆದ ಬಾರಿ ರಾಮನಗರ-ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡಿದ್ದ ಎಚ್‌ಡಿಕೆ, ಈ ಬಾರಿ ಚನ್ನಪಟ್ಟಣದಿಂದ ಮಾತ್ರ ಮರುಆಯ್ಕೆ ಬಯಸಿದ್ದಾರೆ. ಕ್ಷೇತ್ರದಲ್ಲಿ ಎದು ರಾಳಿಯೇ ಇಲ್ಲ ಎಂದುಕೊಂಡಿದ್ದ ಯೋಗೇಶ್ವರ್‌ ಮಣಿಸುವ ಮೂಲಕ ಚನ್ನಪಟ್ಟಣದಲ್ಲಿ ಜೆಡಿಎಸ್‌ ಪತಾಕೆಯನ್ನು ಹಾರಿಸಿರುವ ಕುಮಾರಸ್ವಾಮಿಗೆ ಮತ್ತೆ ಗೆಲುವು ಸಾಧಿಸುವುದು ಅತ್ಯವಶ್ಯಕ. ಎಚ್‌.ಡಿ. ಕುಮಾರಸ್ವಾಮಿ ಗೆದ್ದ ಬಳಿಕ  ಕ್ಷೇತ್ರದ 1,500 ಕೋಟಿ ರೂ. ಯೋಜನೆ ನೀಡಿ ದ್ದಾರೆ, ಜೆಡಿಎಸ್‌ನ ಪಂಚರತ್ನ ಯೋಜನೆಗಳು, ಮತ್ತೆ ಸಿಎಂ ಆಗುತ್ತಾರೆ ಎಂಬ ಟ್ರಂಪ್‌ಕಾರ್ಡ್‌ ಬಳಸಿ ಅವರ ಪಕ್ಷದ ಮುಖಂಡರು ಕುಮಾರಸ್ವಾಮಿ ಪರ ವಾಗಿ ಕ್ಷೇತ್ರದಲ್ಲಿ ಮತಯಾಚನೆ ಮಾಡುತ್ತಿದ್ದಾರೆ. ಜೆಡಿಎಸ್‌ ಪರವಾಗಿ ಪ್ರಬಲ ಸಮುದಾಯವಾದ ಒಕ್ಕಲಿಗ ಸಮುದಾಯ ಹೆಚ್ಚು ಒಲವು ಹೊಂದಿ ರುವುದು, ಅಲ್ಪ ಸಂಖ್ಯಾಕ ಮತಗಳ ಬಗ್ಗೆ ಅಚಲ ವಿಶ್ವಾಸ ಹೊಂದಿರುವ ಜೆಡಿಎಸ್‌ ಉಳಿದ ಜಾತಿಗಳ ಮತವನ್ನು ಪಡೆದು ಗೆಲ್ಲಬಹುದು ಎಂಬ ಲೆಕ್ಕಾಚಾರದಲ್ಲಿದೆ.

ಎಚ್‌ಡಿಕೆ ಮಣಿಸಲು ಸೈನಿಕನ ಕಸರತ್ತು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‌ ಈ ಬಾರಿ ಕ್ಷೇತ್ರದಲ್ಲಿ ಕುಮಾರಸ್ವಾಮಿ ಮಣಿಸಲು ಬೆವರು ಸುರಿಸುತ್ತಿದ್ದಾರೆ. ಈಗಾಗಲೇ ಸ್ವಾಭಿಮಾನಿ ಸಂಕಲ್ಪ ನಡಿಗೆಯ ಮೂಲಕ ಕ್ಷೇತ್ರದ ಮನೆಮನೆ ಸುತ್ತಿರುವ ಯೋಗೇಶ್ವರ್‌ ಸ್ವಾಭಿಮಾನದ ಪ್ರಶ್ನೆಯ ಜತೆಗೆ ಮನೆಮಗ ಎಂಬ ಟ್ರಂಪ್‌ಕಾರ್ಡ್‌ ಬಳಸಿದ್ದಾರೆ. ಕ್ಷೇತ್ರದಲ್ಲಿ ಪ್ರಧಾನಿ ಮೋದಿ ಬಂದು ಪ್ರಚಾರ ಮಾಡಿರುವುದು ವರದಾನವಾಗುತ್ತದೆ ಎಂಬುದು ಯೋಗೇಶ್ವರ್‌ ಲೆಕ್ಕಾಚಾರ. ಕ್ಷೇತ್ರದಲ್ಲಿ ಮಹಿಳಾ ಮತಗಳ ಜತೆಗೆ ಒಕ್ಕಲಿಗ ಸಮುದಾಯದ ಕೆಲವು ಮತಗಳನ್ನು ಸೆಳೆಯುವುದು, ಹಿಂದುಳಿದ ಸಮುದಾಯದ ಮತಗಳ ಬೆಂಬಲದೊಂದಿಗೆ ಗೆಲುವ ಕಾಣುವ ಹವಣಿಕೆ ಯೋಗೇಶ್ವರ್‌ರದ್ದು.

ಕಾಂಗ್ರೆಸ್‌ ನಡೆ ಏನು?: ಕಾಂಗ್ರೆಸ್‌ ಹಿಂದುಳಿದ ಸಮುದಾಯದ ಎಸ್‌.ಗಂಗಾಧರ್‌ ಅವರನ್ನು ಕಣಕ್ಕಿಳಿಸಿದೆ. ಇವರು ತೆಗೆದುಕೊಳ್ಳುವ ಮತಗಳ ಆಧಾರದ ಮೇಲೆ ಜೆಡಿಎಸ್‌, ಬಿಜೆಪಿ ಅಭ್ಯರ್ಥಿಯ ಗೆಲುವು ನಿರ್ಧಾರವಾಗುತ್ತದೆ. ಅಲ್ಲದೆ, ಕಾಂಗ್ರೆಸ್‌ನ ಶಕ್ತಿ ಪ್ರದರ್ಶನದ ಅರಿವು ಆಗುತ್ತದೆ.

Advertisement

~ ಸು.ನಾ.ನಂದಕುಮಾರ್‌

Advertisement

Udayavani is now on Telegram. Click here to join our channel and stay updated with the latest news.

Next