Advertisement

Indian Army: ರಜೆಯಲ್ಲಿದ್ದ ಯೋಧನ ಅಪಹರಿಸಿ ಹತ್ಯೆ

09:42 PM Sep 17, 2023 | Team Udayavani |

ಇಂಫಾಲ: ರಜೆಯ ಮೇರೆಗೆ ಮಣಿಪುರದ ತನ್ನ ಗ್ರಾಮಕ್ಕೆ ಆಗಮಿಸಿದ್ದ ಭಾರತೀಯ ಸೇನೆಯ ಯೋಧರೊಬ್ಬರನ್ನು ಅಪಹರಿಸಿ, ಹತ್ಯೆ ಮಾಡಲಾಗಿದೆ. ಸಿಪಾಯಿ ಸೆರ್ಟೊ ತಂಗ್ತಾಂಗ್‌ ಕೋಮ್‌ ಮೃತ ಯೋಧ. ಇಂಫಾಲ ಪಶ್ಚಿಮ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಶಸ್ತ್ರಸಜ್ಜಿತ ಮೂವರು ಅಪಹರಣಕಾರರು ಮನೆಗೆ ನುಗ್ಗಿ, ಬಂದೂಕು ತೋರಿಸಿ, ಸೆರ್ಟೊ ಅವರನ್ನು ತಮ್ಮ ವಾಹನದಲ್ಲಿ ಅಪರಿಸಿದ್ದರು. ಈ ವೇಳೆ ಅವರ 10 ವರ್ಷದ ಮಗ ಮನೆಯಲ್ಲಿದ್ದ.

Advertisement

ಭಾನುವಾರ ಬೆಳಗ್ಗೆ ಇಂಫಾಲ ಪೂರ್ವ ಜಿಲ್ಲೆಯ ಖುನಿಂಗೆಕ್‌ ಗ್ರಾಮದಲ್ಲಿ ಸೆರ್ಟೊ ಅವರ ಮೃತದೇಹ ಪತ್ತೆಯಾಗಿದೆ. ಅವರ ಹಣೆಯ ಮೇಲೆ ಬುಲೆಟ್‌ ಗುರುತು ಇತ್ತು ಎಂದು ಕುಟುಂಬದವರು ತಿಳಿಸಿದ್ದಾರೆ. ಸೆರ್ಟೊ ಅವರು ಪತ್ನಿ, ಪುತ್ರಿ ಹಾಗೂ ಪುತ್ರನನ್ನು ಅಗಲಿದ್ದಾರೆ. ಈ ಘಟನೆಯನ್ನು ಭಾರತೀಯ ಸೇನೆ ತೀವ್ರವಾಗಿ ಖಂಡಿಸಿದ್ದು, ಕುಟುಂಬದ ಜತೆಗೆ ನಿಲ್ಲುವ ಭರವಸೆ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next