Advertisement

ಒಂದು ಲಘು ಕತೆ

07:28 PM Aug 10, 2019 | mahesh |

ಓರ್ವ ಇಂಜಿನಿಯರ್‌ ಮತ್ತಾತನ ಪತ್ನಿ ಸದಾ ಪರಸ್ಪರ ಜಗಳವಾಡುತ್ತಿದ್ದರು. ಕಲಹದ ವೇಳೆ ಅವರ ತಾರಕ ಧ್ವನಿ ನೆರೆಹೊರೆಯವರಿಗೆ ನಡುರಾತ್ರಿಯವರೆಗೂ ಕೇಳಿಸುತ್ತಿತ್ತು.
ಜಗಳ ನಡೆಯುತ್ತಿರುವಾಗಲೆಲ್ಲ ಪತ್ನಿ,”” ನಾನು ಸತ್ತನಂತರ ಸಮಾಧಿಯನ್ನು ಅಗೆದು ಮೇಲಕ್ಕೆ ಬಂದು ಮತ್ತೆ ಪತಿಯನ್ನು ಪೀಡಿಸುತ್ತೇನೆ ” ಎಂದು ಬೆದರಿಕೆ ಒಡ್ಡುತ್ತಿದ್ದಳು. ಆದ್ದರಿಂದ ನೆರೆಹೊರೆಯವರೂ ಆಕೆಗೆ ಹೆದರುತ್ತಿದ್ದರು ಮತ್ತು ಅದು ಆಕೆಗೆ ಹೆಮ್ಮೆಯ ವಿಷಯವೂ ಆಗಿತ್ತು.

Advertisement

ಕಾಕತಾಳೀಯವೆಂಬಂತೆ ಆಕೆ ಒಮ್ಮೆ ಸತ್ತು ಹೋದಳು.
ಆಕೆಯ ಶವವನ್ನು ಹೂತು ಸಂಸ್ಕಾರ ಪೂರ್ಣಗೊಳಿಸಿದ ಬಳಿಕ ಇಂಜಿನಿಯರ್‌ ಪತಿ ನಿರಾಳವಾಗಿ ಸ್ಥಳೀಯ ಬಾರ್‌ ಒಂದರೊಳಗೆ ನುಸುಳಿ ಇನ್ನಿಲ್ಲವೆಂಬಂತೆ ಮದಿರಾಪಾನ ಮಾಡಿ ಮನೆಗೆ ಬಂದ.

ಆತನ ಬಗ್ಗೆ ಕಾಳಜಿ ಹೊಂದಿರುವ ನೆರೆಹೊರೆಯವರು, “”ಇಂದು ರಾತ್ರಿ ನಿಜವಾಗಿಯೂ ಆಕೆ ಸಮಾಧಿಯನ್ನು ಅಗೆದು ಹೊರಬಂದು ನಿನಗೆ ಉಪದ್ರವ ನೀಡಿಯಾಳೆಂದು ಹೆದರಿಕೆಯಾಗುವುದಿಲ್ಲವೆ?” ಎಂದು ವಿಚಾರಿಸಿದರು. ಇಂಜಿನಿಯರ್‌ ಗೆಲುವಿನ ನಗೆ ಬೀರುತ್ತ ಉತ್ತರಿಸಿದ, “”ಅವಳು ಎಷ್ಟು ಬೇಕಾದರೂ ಅಗೆಯಲಿ, ನಾನು ಆಕೆಯನ್ನು ತಲೆ ಕೆಳಗಾಗಿಸಿ ಹೂತಿದ್ದೇನೆ!”

ರಮಣ್‌ ಶೆಟ್ಟಿ

Advertisement

Udayavani is now on Telegram. Click here to join our channel and stay updated with the latest news.

Next