Advertisement

ಸಾಗರ: ಬೇಳೂರಿನಲ್ಲಿ ಆರು ಶತಮಾನಗಳ ಹಿಂದಿನ ದೇವಾಲಯ ಸಮುಚ್ಛಯ ಬೆಳಕಿಗೆ

05:07 PM Jul 31, 2022 | Vishnudas Patil |

ಸಾಗರ: ತಾಲೂಕಿನ ಕೆಳದಿ ಸಮೀಪದ ಬೇಳೂರಿನಲ್ಲಿ ನಡೆದ ಅಷ್ಟಮಂಗಳ ಪ್ರಶ್ನೆ ಚಿಂತನದಲ್ಲಿ ಆರು ಶತಮಾನಕ್ಕೂ ಹಿಂದೆ ದಾಳಿಕೋರರಿಂದ ನಶಿಸಿಹೋಗಿದೆ ಎನ್ನಲಾದ ದೇವಾಲಯದ ಸಮುಚ್ಛಯದ ಕುರುಹು ಇತ್ತೀಚೆಗೆ ಬೆಳಕಿಗೆ ಬಂದಿದೆ.

Advertisement

640 ವರ್ಷಗಳ ಹಿಂದಿನ ಶಂಭುಲಿಂಗೇಶ್ವರ ದೇವಾಲಯ ಸಮುಚ್ಛಯ ಬೇಳೂರಿನ ಹೊಸಮನೆ ಬ್ಯಾಣದಲ್ಲಿ ಪತ್ತೆಯಾಗಿದೆ. ದೇವಾಲಯದ ಸಮುಚ್ಚಯದಲ್ಲಿ ಶಂಭುಲಿಂಗೇಶ್ವರ ದೇವರ ಸನ್ನಿಧಾನದ ಹೊರತಾಗಿ ಶ್ರೀವಿಷ್ಣು, ಭುವನೇಶ್ವರಿ ದೇವಿ, ಬಾಲ ಗಣಪತಿ ದೇವರ ಆರಾಧನೆ ನಡೆಯುತ್ತಿತ್ತು. ಭೃಂಗೀಶ್ ಎಂಬ ದೇವಗಣದ ಇರುವಿಕೆ ಕಂಡುಬಂದಿದೆ ಎಂದು ಕೇರಳ ಮೂಲದ ಜ್ಯೋತಿಷ್ಯರಾದ ವೇದಮೂರ್ತಿ ವಳಕ್ಕುಂಜ ವೆಂಕಟರಮಣ ಭಟ್‌ರನ್ನು ಒಳಗೊಂಡ ಜ್ಯೋತಿಷಿಗಳ ತಂಡ ಅಭಿಪ್ರಾಯ ನೀಡಿದೆ.

ಇದರ ಪರಿಸರದಲ್ಲಿ ಅತಿ ಹಳೆಯ ಪಾಳು ಬಿದ್ದ ಚೌಕ ಬಾವಿ, ಕಲ್ಲು ಕಟ್ಟಿದ ಗುರುತುಗಳು, ಶಿಲಾ ಪ್ರತಿಮೆ ಹಾಗೂ ಜಲಾಶಯದ ಕುರುಹುಗಳು ಗೋಚರಿಸಿರುತ್ತದೆ. 2017 ರಲ್ಲಿ ವಿದ್ವಾನ್ ಬಿ.ಎಲ್.ನಾಗರಾಜ ಅವರು ಇಲ್ಲಿ ದೇವಾಲಯದ ಕುರುಹುಗಳನ್ನು ಪತ್ತೆ ಹಚ್ಚಿದ್ದರು. ಈ ಹಿನ್ನೆಲೆಯಲ್ಲಿ ಜೂನ್ 19 ರಂದು ನಡೆದ ಅಷ್ಟಮಂಗಲ ಪೂಜೆ ಮತ್ತು ಜುಲೈ 19 ರಿಂದ 22 ರವರೆಗೆ ನಡೆದ ಅಷ್ಟಮಂಗಲ ಪ್ರಶ್ನೆ ಚಿಂತನ ಕಾರ್ಯಕ್ರಮದಲ್ಲಿ ವೇದಮೂರ್ತಿಗಳಾದ ಮುರುಳಿಕೃಷ್ಣ ವಳಕ್ಕುಂಜ, ವಿ.ಬಿ.ಹಿರಣ್ಯ ವೆಂಕಟೇಶ್ ಭಟ್, ಸುಬ್ರಮಣ್ಯ ಕುಮಾರ್, ಜಯರಾಮ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next