Advertisement

ನಾಯಕತ್ವ ಅಭಿವೃದ್ಧಿಯಲ್ಲಿ  ಎಚ್‌ಆರ್‌ ಪಾತ್ರ ಮಹತ್ತರ

10:58 AM Feb 25, 2017 | Harsha Rao |

ಮಂಗಳೂರು: ನಾಯಕತ್ವ ಅಭಿವೃದ್ಧಿಯಲ್ಲಿ ಮಾನವ ಸಂಪನ್ಮೂಲ ವಿಭಾಗದ‌ ಪಾತ್ರ ಮಹತ್ತರವಾಗಿದ್ದು, ಅದು ಪ್ರತಿ ಸಂಸ್ಥೆಗಳ ಸಿಬಂದಿಯ ಸರ್ವಾಂಗೀಣ ಅಭಿವೃದ್ಧಿಯತ್ತ ಗಮನ ಹರಿಸುತ್ತದೆ. ಹೀಗಾಗಿ ಒಂದು ಸಂಸ್ಥೆಯ ಬೆಳವಣಿಗೆಗೆ ಈ ವಿಭಾಗದ ಕೊಡುಗೆ ಅಪಾರ ಎಂದು ಎಂಸಿಎಫ್‌ನ ನಿರ್ದೇಶಕ ಕೆ. ಪ್ರಭಾಕರ ರಾವ್‌ ಅಭಿಪ್ರಾಯ ಪಟ್ಟರು. 

Advertisement

ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೀಪಲ್‌ ಮ್ಯಾನೇಜ್‌ಮೆಂಟ್‌ ಹಾಗೂ ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ಮೆಂಟ್‌ನ ಬ್ಯುಸಿನೆಸ್‌ ಅಡ್ಮಿನ್‌ಸ್ಟ್ರೇಶನ್‌ ವಿಭಾಗದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಲಾದ ಪ್ರಸಕ್ತ ಮಾನವ ಸಂಪನ್ಮೂಲ ಸದ್ಭಳಕೆ ಮತ್ತು ಕಾರ್ಮಿಕ ಕಾನೂನು ವ್ಯವಸ್ಥೆಯಲ್ಲಿ ವ್ಯವಹಾರ ಕೌಶಲಗಳ ಅಭಿವೃದ್ಧಿ ವಿಚಾರದ ಕುರಿತು ನಡೆದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸವಾಲುಗಳನ್ನು ಸಮಸ್ಯೆ ಎಂದು ಪರಿಗಣಿಸಿ ಅದಕ್ಕೆ ಪರಿಹಾರ ಹುಡುಕುವ ಪ್ರಯತ್ನ ಮಾಡುವವನು ಉತ್ತಮ
ಮಾನವ ಸಂಪನ್ಮೂಲ ಅಧಿಕಾರಿ ಎಂದೆನಿಸಿಕೊಳ್ಳುತ್ತಾನೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ| ಉಮೇಶ್‌ ಎಂ. ಭೂಶಿ ಮಾತನಾಡಿ, ಹೆಚ್ಚಾದ ಕೆಲಸದ ಒತ್ತಡದಿಂದಾಗಿ ಬಹುತೇಕರು ಅದನ್ನು ಸಂತೋಷದಿಂದ ಮಾಡುತ್ತಿಲ್ಲ. ಇದರಿಂದ ಕೆಲಸದಲ್ಲಿ ಬದ್ಧತೆ ಇರುವುದಿಲ್ಲ ಎಂದರು.

ಕಾರ್‌ಡೋಲೈಟ್‌ ಸ್ಪೆಷಾಲಿಟಿ ಕೆಮಿಕಲ್‌ ಇಂಡಿಯಾ ಲಿಮಿಟೆಡ್‌ನ‌ ಪಾಲುದಾರ ಶೈಲೇಂದ್ರ ಭಟ್‌ಕಂಡೆ ಅಧ್ಯಕ್ಷತೆ ವಹಿಸಿದ್ದರು.

Advertisement

ಎಸ್‌ಡಿಎಂ ಪಿಜಿ ಸೆಂಟರ್‌ನ ನಿರ್ದೇಶಕ ಡಾ| ದೇವರಾಜ್‌ ಕೆ., ಸಹ್ಯಾದ್ರಿ ಕಾಲೇಜ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಮ್ಯಾನೇಜ್‌ ಮೆಂಟ್‌ನ ಬ್ಯುಸಿನೆಸ್‌ ಅಡ್ಮಿನ್‌ಸ್ಟ್ರೇಶನ್‌ ನಿರ್ದೇಶಕಿ ಡಾ| ವಿಶಾಲ್‌ ಸಮರ್ಥ ಮೊದಲಾದವರು ಉಪಸ್ಥಿತರಿದ್ದರು.

ನ್ಯಾಶನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಪೀಪಲ್‌ ಮ್ಯಾನೇಜ್‌ಮೆಂಟ್‌ ನ ಅಧ್ಯಕ್ಷ ಪಿ.ಸುರೇಶ್‌ ಸ್ವಾಗತಿಸಿದರು. ಸಂಯೋಜಕಿ ಪ್ರೊ| ಸುಷ್ಮಾ ವಿ. ವಂದಿಸಿದರು. ಸುಪ್ರಿತಾ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next