Advertisement
ಅದರಲ್ಲೂ ಅತಿ ಹೆಚ್ಚು ಕಾರುಗಳನ್ನು ಮಾರಾಟ ಮಾಡಿದ ಹೆಗ್ಗಳಿಕೆ ಮಾರುತಿ ಸುಝಕಿ ಕಂಪನಿಯದ್ದಾಗಿದೆ. ಕಳೆದ ತಿಂಗಳು ಈ ಕಂಪನಿ, 1.28 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಜೊತೆಗೆ, ಮೇ ತಿಂಗಳಲ್ಲಿ ತನ್ನ ಇತಿಹಾಸದಲ್ಲೇ ಅತಿ ಹೆಚ್ಚು ಕಾರುಗಳನ್ನು (27,191) ವಿದೇಶಕ್ಕೆ ರಫ್ತು ಮಾಡಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಮಾರುತಿ, 46.5 ಲಕ್ಷ ಕಾರುಗಳನ್ನು ಮಾರಾಟ ಮಾಡಿತ್ತು. ಅದಕ್ಕೆ ಹೋಲಿಸಿದರೆ ಈ ವರ್ಷದ ಮಾರಾಟ ಗಣನೀಯವಾಗಿ ಹೆಚ್ಚಾಗಿರುವುದು ಕಂಡುಬಂದಿದೆ. ಇನ್ನು, ಟೊಯೊಟಾ ಕಂಪನಿಯೊಂದಿಗೆ ಮಾಡಿಕೊಂಡಿರುವ ಒಪ್ಪಂದದಡಿ, 6,222 ಕಾರುಗಳನ್ನು ಆ ಕಂಪನಿಗೆ ನೀಡಿದೆ.
Related Articles
ಟಾಟಾ ಕಂಪನಿ ಕೂಡ ಮೇ ತಿಂಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಕಾರುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದೆ. ಪ್ಯಾಸೆಂಜರ್ ವಾಹನಗಳ ವಿಭಾಗದಲ್ಲಿ 43,341 ಕಾರುಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷದ ಮೇ ತಿಂಗಳಿಗೆ ಹೋಲಿಸಿದರೆ ಈಗಾಗಿರುವ ಮಾರಾಟ ಶೇ. 185ರಷ್ಟು ಹೆಚ್ಚಾಗಿದ್ದು ಇದೊಂದು ದಾಖಲೆಯಾಗಿದೆ ಎಂದು ಹೇಳಿದೆ.
Advertisement