Advertisement

ಕೊರೊನಾ ನಿಯಂತ್ರಣಕ್ಕೆ ಸರ್ಕಾರ ತೆಗೆದುಕೊಂಡ ಮಹತ್ವದ ನಿರ್ಧಾರ

10:00 PM Mar 22, 2020 | Team Udayavani |

ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ರಚಿಸಿರುವ ಟಾಸ್ಕ್ ಪೋರ್ಸ್‌ ತಂಡದ ಸಚಿವರೊಂದಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಭಾನುವಾರ ಎರಡು ತುರ್ತು ಸಭೆ ನಡೆಸಿ, ಮಹತ್ವದ ನಿರ್ಣಯಗಳನ್ನು ತೆಗೆದುಕೊಂಡಿದ್ದಾರೆ.

Advertisement

ಯಡಿಯೂರಪ್ಪ ಅವರ ಡಾಲರ್ಸ್‌ ಕಾಲೋನಿಯಲ್ಲಿರುವ ಖಾಸಗಿ ನಿವಾಸದಲ್ಲಿ ನಡೆದ ಸಭೆಯಲ್ಲಿ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್‌ ಹಾಗೂ ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ ಪಾಲ್ಗೊಂಡಿದ್ದರು.

ಸಭೆಯ ಮುಖ್ಯಾಂಶಗಳು
– ಸರ್ಕಾರಿ ಮತ್ತು ಸರ್ಕಾರೇತರ ಆಸ್ಪತ್ರೆಗಳಿಗೂ ಕೊವಿಡ್‌ ತಪಾಸಣೆಗೆ ಪರವಾನಿಗೆಗೆ ಸೂಚನೆ.
– ಸ್ಥಳೀಯ ವಿಮಾನ ಪ್ರಯಾಣಿಕರಿಗೂ ತಪಾಸಣೆ ಕಡ್ಡಾಯ.
– ಎಲ್ಲಾ ಚುನಾವಣೆಗಳ ಮುಂದೂಡಿಕೆ.
– ಬಾಲಭ್ರೂಯಿ ಅಥಿತಿ ಗೃಹವನ್ನು ಕೊರೊನಾ ವಾರ್‌ ರೂಂ ಆಗಿ ಪರಿವರ್ತನೆ.
– ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಎಲ್ಲಾ ಕಾರ್ಯಗಳು ನಡೆಯಲಿವೆ.
– ಬಡವರಿಗೆ ಎರಡು ತಿಂಗಳ ರೇಷನ್‌ ಕೊಡಲು ತೀರ್ಮಾನ.
– ಮುಂದಿನ 15 ದಿನ ನಗರದಿಂದ ಯಾರೂ ಹಳ್ಳಿಗಳಿಗೆ ಹೋಗದಂತೆ ಮನವಿ.
– 1,700 ಹಾಸಿಗೆಯ ವಿಕ್ಟೋರಿಯಾ ಆಸ್ಪತ್ರೆಯನ್ನು ಕೊವಿಡ್‌-19ಗೆ ಮಾತ್ರ ಪರಿವರ್ತಿಸಲು ತೀರ್ಮಾನ .
– ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮತ್ತು ಇತರ ಎಲ್ಲಾ ಪರೀಕ್ಷೆ ಮುಂದೂಡಿಕೆ.
– ರಾಜ್ಯದ ಎಲ್ಲಾ ಗಡಿ ಭಾಗ ಬಂದ್‌ ಮಾಡಲು ತೀರ್ಮಾನ.
– ಜೀವನಾವಶ್ಯಕ ವಸ್ತುಗಳ ಕೊರತೆಯಾಗದಂತೆ ಕ್ರಮ.
– ರಾಜ್ಯದಲ್ಲಿ ಸೋಮವಾರ ಕೂಡ ಸಾರ್ವಜನಿಕ ಸಾರಿಗೆ ಸೇವೆಯನ್ನು ರದ್ದು ಮಾಡಲು ತೀರ್ಮಾನ
– ಎಲ್ಲಾ ಎ.ಸಿ.ಬಸ್ಸುಗಳ ಸಂಚಾರವನ್ನು 31ನೇ ಮಾರ್ಚ್‌ 2020ರವರೆಗೆ ಸ್ಥಗಿತಗೊಳಿಸಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next