Advertisement

ಫಲಾಪೇಕ್ಷೆ ಇಲ್ಲದೇ ಮಾಡುವ ಸೇವೆ ದೇವಾರ್ಪಿತ

05:16 PM Jan 24, 2022 | Shwetha M |

ವಿಜಯಪುರ: ಯಾವುದೇ ಫಲಾಪೇಕ್ಷೆ ಇಲ್ಲದೇ ಮಾಡಿದ ಸೇವೆ ವಿಶ್ವರೂಪಿ. ಪರಮಾತ್ಮನ ಪ್ರತೀಕ ಇಷ್ಟಲಿಂಗಕ್ಕೆ ಸಮರ್ಪಿತ ಎಂದು ನೆಲೋಗಿಯ ಸಿದ್ದಲಿಂಗ ಶ್ರೀಗಳು ಹೇಳಿದರು.

Advertisement

ವಿಜಯಪುರ ನಗರದಲ್ಲಿ ಹಮ್ಮಿಕೊಂಡಿದ್ದ ಸಾಧಕರಿಗೆ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀವರ್ಚನ ನೀಡಿದ ಶ್ರೀಗಳು, ವಿಜಯಪುರ ಜಿಲ್ಲೆಯಲ್ಲಿ ದ್ರಾಕ್ಷಿ ಬೆಳೆಗೆ ಇತಿಹಾಸದ ಹಿರಿಮೆ ಹೊಂದಿರುವ ಕನಮಡಿ ಪಾಟೀಲ ಕುಟುಂಬದ ಸಂಜಯ ಪಾಟೀಲ ಅವರು ಪುಣೆಯ ರಾಷ್ಟ್ರೀಯ ದ್ರಾಕ್ಷಿ ಸಂಶೋಧನಾ ಕೇಂದ್ರದ ಸದಸ್ಯರಾಗಿ ಆಯ್ಕೆಯಾಗಿರುವುದು ಆಯ್ಕೆ ಸಂತೋಷ ತಂದಿದೆ ಎಂದರು.

ಅರ್ಧ ದಶಕದ ಹಿಂದೆ ಕರ್ನಾಟಕಕ್ಕೆ ಅಪರಿಚಿತವಿದ್ದ ದ್ರಾಕ್ಷಿ ಬೆಳೆಯನ್ನು ಅದರಲ್ಲೂ ಅಪರೂಪದ ತಳಿಯ ದ್ರಾಕ್ಷಿ ಬೆಳೆ ಬೆಳೆದು ಅನೇಕ ರೈತರಿಗೆ ಸ್ಪೂರ್ತಿಯಾದವರು ಕನಮಡಿ ಪಾಟೀಲ ಕುಟುಂಬದ ಹಿರಿಯರಿಗೆ ಸಲ್ಲುತ್ತದೆ ಎಂದರು.

ತಾವು ಮಾತ್ರ ಬೆಳೆದು ಆರ್ಥಿಕ ಅಭಿವೃದ್ಧಿ ಸಾಧಿಸದೇ ಇತರರೂ ದ್ರಾಕ್ಷಿ ಬೆಳೆಯಲು ಪ್ರೇರಣೆ ನೀಡಿದರು. ಇದೀಗ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ದ್ರಾಕ್ಷಿ ದೇಶ-ವಿದೇಶಗಳಲ್ಲಿ ಭಾರಿ ಬೇಡಿಕೆ ಪಡೆದಿದೆ. ತೋಟಗಾರಿಕೆಯಲ್ಲಿ ದ್ರಾಕ್ಷಿ ಬೆಳೆ ವಾಣಿಜ್ಯ ಬೆಳೆಯಾಗಿ ರೂಪುಗೊಂಡಿದ್ದು, ಬಡ ರೈತರ ಬದುಕು ಬಂಗಾರವಾಗಿ ಪರಿಣಮಿಸಿದೆ ಎಂದರು.

ಸಾನ್ನಿಧ್ಯ ವಹಿಸಿದ್ದ ಕಕಮರಿಯ ರಾಯಲಿಂಗೇಶ್ವರ ಸಂಸ್ಥಾನಮಠದ ಅಭಿನವ ಗುರುಲಿಂಗಜಂಗಮ ಶ್ರೀಗಳು ಆಶೀವರ್ಚನ ನೀಡಿದರು. ಸನ್ಮಾನ ಸ್ವೀಕರಿಸಿ ಮಾತನಾಡಿದ ಯುವ ಧುರೀಣ ಸಂಜಯ ಪಾಟೀಲ ಕನಮಡಿ, ಹೆತ್ತವರು, ಗುರು- ಹಿರಿಯರ ಹಾಗೂ ಸಮಾಜದ ಋಣ ತೀರಿಸುವದು ಯಾರಿಂದಲೂ ಅಸಾಧ್ಯ. ಆದರೂ ತಮಗೆ ದೊರೆತ ಅವಕಾಶ ಅವಧಿಯಲ್ಲಿ ಪ್ರಾಮಾಣಿಕವಾಗಿ ಉತ್ತಮ ಕಾರ್ಯ ಮಾಡಿ ಎಲ್ಲರ ಸಮಾಜದಲ್ಲಿ ಜನರ ಪ್ರೀತಿ ಗಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಮಲ್ಲನಗೌಡ ಪಾಟೀಲ ಮನಗೂಳಿ, ದಾನೇಶ ಅವಟಿ, ರಾಯನಗೌಡ ಪಾಟೀಲ, ಬಸನಗೌಡ ಬಿರಾದಾರ, ಶ್ರೀಕಾಂತ ಪಟ್ಟಣಶೆಟ್ಟಿ ಇದ್ದರು. ಸಿದ್ದು ಗಬ್ಬೂರು ನಿರೂಪಿಸಿದರು. ಮಲ್ಲಣ್ಣ ಮಡಿವಾಳರ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next