Advertisement

2ನೇ ತರಗತಿಯಿಂದ ಆಪ್ತ ಸಂಗಾತಿ

10:30 AM Jan 22, 2020 | mahesh |

ನಮ್ಮ ತಂದೆಗೆ ಕನ್ನಡಕ ಅಲ್ಲಿ ಎಲ್ಲೋ ಇಟ್ಟು ಸಿಗದೇ ಇದ್ದಾಗ ಪತ್ರಿಕೆ ಓದಿ ಹೇಳು ಎಂದು ನನ್ನ ಕೇಳುತ್ತಿದ್ದರು. ಅವರಿಗೆ ಉದಯವಾಣಿ ಅಂದರೆ ಅಭಿಮಾನ ಹೆಚ್ಚು. ಮೊದಲ ಪುಟದಲ್ಲಿರುವ ದೇಶದ ಬಗೆಗಿನ ನ್ಯೂಸ್‌, ವಿದೇಶದಲ್ಲಿ ಏನೇನು, ರಾಜಕೀಯ ವಾರ್ತೆಗಳು ಎಲ್ಲವನ್ನು ಓದಿಸಿ ಕೇಳಿಸಿಕೊಳ್ಳುತ್ತಿದ್ದರು. ಬಹುಶಃ ಆಗ ನಮ್ಮೂರಿಗೆ ಬರುತ್ತಿದ್ದು ಒಂದೋ ಎರಡೋ ಪತ್ರಿಕೆ ಮಾತ್ರ. ರವಿವಾರದ ಪುರವಣಿಗೆ ಕಾಯುತ್ತಿದ್ದೆ. ಕಿರಿಯರಿಗೆ ಮಾತ್ರವಲ್ಲ ;ಹಿರಿಯರು ಕಾದು ಓದುತ್ತಿದ್ದ -ದಮ್ಮ, ದಿಮ್ಮಿ, ಟಾಮಿ ಹೆಸರಿನ ಮಕ್ಕಳ ಚಿತ್ರ ಕಥೆ ಓದಲು ಸೂಜಿಗಲ್ಲಿನಂತಹ ಸೆಳೆತ. ಕ್ರಮಬದ್ಧವಾಗಿ ಮೊದಲ ಪುಟದಿಂದ ಶುರು ಮಾಡಿ ಹಾಗೇ ಮುಂದುವರೆಸಿ ಓದುತ್ತಿದ್ದೆ.

Advertisement

ವಿವಾಹದ ಅನಂತರ ಕರ್ನಾಟಕದಿಂದ ಕಾಸರಗೋಡು ಮನೆ ಸೇರಿದಾಗ ಅಲ್ಲಿಗೆ ಕನ್ನಡ, ಮಲಯಾಳಂ, ಇಂಗ್ಲಿಷ್‌ ಈ ಮೂರು ಪತ್ರಿಕೆ ಬರುತ್ತಿತ್ತು. ಭಾಷೆ ಕಲಿಯಲಿ ಎನ್ನುವ ದೃಷ್ಟಿಯಿಂದ ಮಲಯಾಳಂ ಪತ್ರಿಕೆ. ನನಗೋ ಉದಯವಾಣಿ ಓದದೇ ಸಮಾಧಾನ ಇರುತ್ತಿರಲಿಲ್ಲ. ನನಗಾಗಿ ಉದ ಯವಾಣಿ ತರಿಸಲು ಪ್ರಾರಂಭಿಸಿದರು. ಆಗ ಆದ ಸಂತೋಷ, ಸಮಾಧಾನಕ್ಕೆ ಬೆಲೆ ಕಟ್ಟಲಾಗದು. ಅಂದಿನಿಂದ ಉದಯವಾಣಿ ನಮ್ಮನೆಯ ಅವಿಭಾಜ್ಯ ಅಂಗ. ಈಗ ಸುಮಾರು 25 ವರ್ಷದಿಂದ ಓದುತ್ತಿದ್ದೇನೆ. ಬೆಳಗಿನ ಉಪಹಾರ ಮುಗಿಸಿ ಪತ್ರಿಕೆ ಹಿಡಿದರೆ ಮೊದಲ ಪುಟದಿಂದ ಆರಂಭವಾಗಿ ಕೊನೆ ಪುಟದ ಕಡೆ ಅಕ್ಷರದ ತನಕ ಓದುತ್ತಿದ್ದೇನೆ.

ಉದಯವಾಣಿಯಲ್ಲಿ ಅಂದಿನಿಂದ ಇಂದಿನ ತನಕ ನಾನು ಗಮನಿಸಿದ ವಿಚಾರ; ಸ್ಪಷ್ಟ ನಿಲುವು, ಒಳ್ಳೆಯ ಭಾಷಾ ಸಂಪತ್ತು, ಮುಖ್ಯ ಸುದ್ದಿಗಳನ್ನು ಪ್ರಸ್ತುತಪಡಿಸುವ ನಿಖರತೆ, ಸಂಪಾದಕೀಯದಲ್ಲಿನ ಅಂದಿನ ಮುಖ್ಯ ವಿಷ ಯದ ನಿಲುವು, ದೇಶ, ವಿದೇಶದ ವರದಿಯಷ್ಟೇ ಪ್ರಾದೇಶಿಕ ಸುದ್ದಿಗಳ ಮಾಹಿತಿ. ಓದುವ ಹಂಬಲ ಅಂದಿನಿಂದ ಈ ಇಂದಿನ ತನಕ ತಗ್ಗಿಲ್ಲ.

ಶುದ್ಧ ಕನ್ನಡ ಭಾಷಾ ಬಳಕೆ, ಉತ್ಪ್ರೇಕ್ಷೆ ರಹಿತ, ಹಿಂಸೆ, ಕ್ರೌರ್ಯದ ವೈಭವೀಕರಣ ಇಲ್ಲದೆ ಮನಸ್ಸಿಗೆ ಹತ್ತಿರವಾಗುವ ಆಪ್ತ ಬಂಧು ಉದಯವಾಣಿ.

ಕನ್ನಡದ ಓಬ್ಬ ಬರಹಗಾರ್ತಿ ಎಂಬ ನೆಲೆಯಲ್ಲಿ ಹೇಳಬೇಕಾದರೆ ಉದಯವಾಣಿ ನನ್ನನ್ನು ಪ್ರೋತ್ಸಾಹಿಸಿ ಅಂದಿನಿಂದ ಇಂದಿನ ತನಕ ಬೆಳೆಸಿದ್ದಕ್ಕೆ ಬೆಲೆ ಕಟ್ಟಲಾಗದು. ಮುದ್ರಣ, ವಿನ್ಯಾಸ, ಗುಣಮಟ್ಟ, ಪ್ರಸಾರ ಎಲ್ಲದರಲ್ಲೂ ಪತ್ರಿಕಾ ರಂಗದಲ್ಲಿ ಅಗ್ರಮಾನ್ಯವಾಗಿರುವ ಪತ್ರಿಕೆಯನ್ನು ಈ ಮಟ್ಟದಲ್ಲಿ ಬೆಳೆಸಲು ಹಗಲಿರುಳೆನ್ನದೆ ಶ್ರಮಿಸಿದ ಅದರ ಹಿಂದಿನ ಕರಗಳಿಗೆ ಧನ್ಯವಾದ ಹೇಳಲೇಬೇಕು.

Advertisement

ಕೃಷ್ಣವೇಣಿ, ಕಿದೂರು

Advertisement

Udayavani is now on Telegram. Click here to join our channel and stay updated with the latest news.

Next