Advertisement

ಮೋದಿ, ಶಾ, ಕೇಂದ್ರ ಸಚಿವರಿಂದ ಸರಣಿ ಪ್ರಚಾರ ಸಭೆ

11:51 PM Apr 07, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದ ಮತದಾನಕ್ಕೆ ಇನ್ನು 10 ದಿನವಷ್ಟೇ ಬಾಕಿಯಿದ್ದು, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೇರಿದಂತೆ ಹಲವು ಕೇಂದ್ರ ಸಚಿವರು, ನಾಯಕರು ರಾಜ್ಯದಲ್ಲಿ ಪ್ರವಾಸ ಕೈಗೊಂಡು ಪ್ರಚಾರ ನಡೆಸಲಿದ್ದಾರೆ.

Advertisement

ನಾಳೆ ಡಿಆರ್‌ಡಿಒಗೆ ಮೋದಿ ಭೇಟಿ
ನಾಯಕನಹಟ್ಟಿ: ಇಲ್ಲಿಗೆ ಸಮೀಪದ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರದೇಶಕ್ಕೆ ಮೋದಿಯವರು ಏ.9ರಂದು ಭೇಟಿ ನೀಡಲಿದ್ದಾರೆ. ಡಿಆರ್‌ಡಿಒ, ಐಐಎಸ್ಸಿ, ಬಿಎಆರಿ, ಇಸ್ರೋ ಸೇರಿದಂತೆ ದೇಶದ ಪ್ರಮುಖ ವೈಜ್ಞಾನಿಕ ಸಂಸ್ಥೆಗಳು ಹತ್ತು ಸಾವಿರ ಎಕರೆ ಪ್ರದೇಶದಲ್ಲಿವೆ. ಇದೇ ಮೊದಲ ಬಾರಿಗೆ ಪ್ರಧಾನಿ ಇಲ್ಲಿಗೆ ಭೇಟಿ ನೀಡಲಿದ್ದು, ಇಲ್ಲಿನ ಪ್ರದೇಶದಲ್ಲಿ ಕೈಗೊಂಡಿರುವ ಯೋಜನೆ ಹಾಗೂ ಸಂಶೋಧನೆಗಳ ಬಗ್ಗೆ ವಿಜ್ಞಾನಿಗಳಿಂದ ಮಾಹಿತಿ ಪಡೆಯಲಿದ್ದಾರೆ.

ಯಡಿಯೂರಪ್ಪ ಪ್ರವಾಸ
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಸೋಮವಾರ ಮಾಲೂರು, ಬೇತಮಂಗಲ, ಬಂಗಾರಪೇಟೆ, ಮುಳಬಾಗಿಲು, ಶ್ರೀನಿವಾಸಪುರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ. ಏ.9 ರಂದು ದೊಡ್ಡಬಳ್ಳಾಪುರದಲ್ಲಿ ಪ್ರಚಾರ ಮಾಡಲಿದ್ದಾರೆ. ಏ.10ರಂದು ಕಡೂರು, ಅರಸೀಕೆರೆ, ಹಳೇಬೀಡು, ಹೊಳೆನರಸೀಪುರ, ಬಾಳುಪೇಟೆಯಲ್ಲಿ ಪ್ರಚಾರ ನಡೆಸುವರು.

ಏ.11ಕ್ಕೆ ಚಿಕ್ಕಮಗಳೂರು, ಸಕ್ಕರಾಯಪಟ್ಟಣ, ತರೀಕೆರೆ, ಚಳ್ಳಕೆರೆ, ಹೊಸದುರ್ಗ, ಹೊಳಲ್ಕೆರೆಯಲ್ಲಿ ಪ್ರಚಾರ ನಡೆಸಲಿದ್ದಾರೆ.ಏ.16ರಂದು ಕಲಬುರಗಿ, ಏ.17ಕ್ಕೆ ಶಿಕಾರಿಪುರ, ಸೊರಬ, ಶಿವಮೊಗ್ಗ, ಏ.19ರಂದು ಸಾಗರ, ಶಿವಮೊಗ್ಗ ಗ್ರಾಮಾಂತರ ಹಾಗೂ ಏ.20ರಂದು ಭದ್ರಾವತಿ, ಶಿವಮೊಗ್ಗ, ಹೊಸನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

ಮೋದಿ ಕಾರ್ಯಕ್ರಮ
ಮೋದಿಯವರು ನಾಲ್ಕು ದಿನ ರಾಜ್ಯಕ್ಕೆ ಭೇಟಿ ನೀಡಿ, ಏಳು ಕ್ಷೇತ್ರಗಳಲ್ಲಿ ಪ್ರಚಾರ
ನಡೆಸಲಿದ್ದಾರೆ.
– ಏ.9 : ಮಧ್ಯಾಹ್ನ 1ಕ್ಕೆ ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜು ಮೈದಾನ, ಮಧ್ಯಾಹ್ನ 3ಕ್ಕೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಪ್ರಚಾರ ಸಭೆ.
– ಏ.12 : ಮಧ್ಯಾಹ್ನ 2ಕ್ಕೆ ಗಂಗಾವತಿಯಲ್ಲಿ ಪ್ರಚಾರ.
– ಏ.13: ಮಧ್ಯಾಹ್ನ 3 ಗಂಟೆಗೆ ಮಂಗಳೂರಿನ ಕೇಂದ್ರ ಮೈದಾನ ಹಾಗೂ ಸಂಜೆ 5.30ಕ್ಕೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪ್ರಚಾರ ಸಭೆ.
ಏ.18: ಮಧ್ಯಾಹ್ನ 1ಕ್ಕೆ ಬಾಗಲಕೋಟೆ ಹಾಗೂ ಸಂಜೆ 3.30ಕ್ಕೆ ಚಿಕ್ಕೋಡಿಯಲ್ಲಿ ಪ್ರಚಾರ ಸಭೆ.

Advertisement

ಅಮಿತ್‌ ಶಾ ಕಾರ್ಯಕ್ರಮ
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾಅವರು ಮೂರು ದಿನ ಪ್ರವಾಸ ನಡೆಸಿ,ಆರು ಕ್ಷೇತ್ರಗಳಲ್ಲಿ ರೋಡ್‌ ಶೋ, ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಪ್ರಚಾರ ನಡೆಸಲಿದ್ದಾರೆ.
– ಏ.10: ಸಂಜೆ 4ಕ್ಕೆ ಕೋಲಾರದ ಕಿರಿಯ ಕಾಲೇಜು ಮೈದಾನದಲ್ಲಿ ಪ್ರಚಾರ ಸಭೆ. ಸಂಜೆ 6ಕ್ಕೆ ಚಿಕ್ಕಬಳ್ಳಾಪುರ ಕ್ಷೇತ್ರ ವ್ಯಾಪ್ತಿಯ ಯಲಹಂಕದಲ್ಲಿ ರೋಡ್‌ ಶೋ.
– ಏ.14: ಮಧ್ಯಾಹ್ನ 12ಕ್ಕೆ ತುಮಕೂರಿನಲ್ಲಿ ರೋಡ್‌ ಶೋ. ಮಧ್ಯಾಹ್ನ 2ಕ್ಕೆ ಹಾಸನದಲ್ಲಿ ಸಾರ್ವಜನಿಕ ಸಭೆ.
– ಏ.17: ಮಧ್ಯಾಹ್ನ 1ಕ್ಕೆ ದಾವಣಗೆರೆ ಹಾಗೂ ಮಧ್ಯಾಹ್ನ 3ಕ್ಕೆ ಶಿವಮೊಗ್ಗದಲ್ಲಿ ರೋಡ್‌ ಶೋ.

ಕೇಂದ್ರ ಸಚಿವರ ಸರಣಿ ಪ್ರಚಾರ
ಕೇಂದ್ರ ಸಚಿವೆ ಸುಷ್ಮಾ ಸ್ವರಾಜ್‌
– ಏ.20: ಹುಬ್ಬಳ್ಳಿ- ಧಾರವಾಡದಲ್ಲಿ ಪ್ರಚಾರ ಸಭೆ.

ಕೇಂದ್ರ ಸಚಿವ ನಿತಿನ್‌ ಗಡ್ಕರಿ
– ಏ.15: ಮಧ್ಯಾಹ್ನ 3ಕ್ಕೆ ಚಾಮರಾಜನಗರ ಹಾಗೂ ಸಂಜೆ 5ಕ್ಕೆ ಉಡುಪಿಯಲ್ಲಿ ಸಾರ್ವಜನಿಕ ಸಭೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌
– ಏ.15: ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಲ್ಲಿ ಮಹಿಳಾ ಸಮಾವೇಶದಲ್ಲಿ ಭಾಗಿ. ಮಧ್ಯಾಹ್ನ 12.30ಕ್ಕೆ ಕಾರವಾರದಲ್ಲಿ ಪ್ರಚಾರ ಸಭೆ.

ಕೇಂದ್ರ ಸಚಿವೆ ಸ್ಮತಿ ಇರಾನಿ
– ಏ.19 ರಂದು ಮಧ್ಯಾಹ್ನ 2.30ಕ್ಕೆ ವಿಜಯಪುರ ಹಾಗೂ ಸಂಜೆ 4.30ಕ್ಕೆ ಬೆಳಗಾವಿ, ಏ.21ರಂದು ಮಧ್ಯಾಹ್ನ 12ಕ್ಕೆ ಬಳ್ಳಾರಿ, ಮಧ್ಯಾಹ್ನ 2ಕ್ಕೆ ರಾಯಚೂರಿನಲ್ಲಿ ಪ್ರಚಾರ ಸಭೆ.

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌
– ಏ.17ರಂದು ಬೆಳಗ್ಗೆ 11ಕ್ಕೆ ಬೀದರ್‌, ಮಧ್ಯಾಹ್ನ 1ಕ್ಕೆ ಕಲಬುರಗಿ ಹಾಗೂ ಸಂಜೆ 4ಕ್ಕೆ ಹುಬ್ಬಳ್ಳಿ- ಧಾರವಾಡ ಕ್ಷೇತ್ರದಲ್ಲಿ ಪ್ರಚಾರ ಸಭೆ.

ಮಾಜಿ ಸಿಎಂ ಶಿವರಾಜ್‌
ಸಿಂಗ್‌ ಚೌಹಾಣ್‌
– ಏ.9: ಬೆಳಗ್ಗೆ 11ಕ್ಕೆ ಬೀದರ್‌ ಕ್ಷೇತ್ರದ ಚಿಂಚೋಳಿ, ಮಧ್ಯಾಹ್ನ 1ಕ್ಕೆ ಗದಗ ಹಾಗೂ ಸಂಜೆ 4 ಗಂಟೆಗೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ವ್ಯಾಪ್ತಿಯ ಉತ್ತರಹಳ್ಳಿಯಲ್ಲಿ
ಪ್ರಚಾರ ಸಭೆ.

Advertisement

Udayavani is now on Telegram. Click here to join our channel and stay updated with the latest news.

Next