Advertisement

ಜಲಾಶಯ ರಕ್ಷಣೆಗೆ ಪ್ರತ್ಯೇಕ ಸಂಸ್ಥೆ

11:02 PM Nov 25, 2021 | Team Udayavani |

ಬೆಂಗಳೂರು: ರಾಜ್ಯದಲ್ಲಿ ರುವ ಎಲ್ಲ ಜಲಾಶಯಗಳನ್ನು ರಕ್ಷಿಸಲು ಪ್ರತ್ಯೇಕ ಸಂಸ್ಥೆ ಸ್ಥಾಪಿಸಲು ಸರಕಾರ ನಿರ್ಧರಿಸಿದೆ.

Advertisement

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಜರಗಿದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.

ಕೇಂದ್ರ ಸರಕಾರ  ಜಲಾಶಯ ಸಂರಕ್ಷಣ ಸಂಸ್ಥೆ (ಡ್ಯಾಮ್‌ ಸೇಫ್ಟಿ ಆರ್ಗನೈಸೇಶನ್‌) ರಚಿಸಿದ್ದು, ಅದೇ ಮಾದರಿಯಲ್ಲಿ ದೇಶದ ಎಲ್ಲ ರಾಜ್ಯಗಳಲ್ಲೂ ಜಲಾಶಯ ಸಂರಕ್ಷಣೆ ಸಂಸ್ಥೆ ಸ್ಥಾಪಿಸಲು ಕೇಂದ್ರ  ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಈ ನಿರ್ಣಯ ಕೈಗೊಂಡಿದೆ.

ಈ ಸಂಸ್ಥೆ ಮುಖ್ಯ ಎಂಜನಿಯರ್‌ ನೇತೃತ್ವದಲ್ಲಿ  ಕಾರ್ಯ ನಿರ್ವಹಿ ಸಲಿದ್ದು, ಜಲಾಶಯಗಳ ಸಂರಕ್ಷಣೆ ಕುರಿತು ವರ್ಷದಲ್ಲಿ ಕನಿಷ್ಠ ಎರಡು ಬಾರಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವ ಕೆಲಸ ಮಾಡಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಸಚಿವರ ನಡುವೆ ಮಾತಿನ ಚಕಮಕಿ:

Advertisement

ಚಿಕ್ಕಬಳ್ಳಾಪುರ ಜಿಲ್ಲೆಗೆ ಆರೋಗ್ಯ ಇಲಾಖೆಯ ಎಲ್ಲ ಯೋಜನೆಗಳನ್ನು ತೆಗೆದುಕೊಂಡು ಹೋಗಲಾಗುತ್ತಿದೆ ಎನ್ನುವ ಕುರಿತು ಸಚಿವರಾದ ನಾರಾಯಣ ಗೌಡ ಮತ್ತು ಡಾ| ಸುಧಾಕರ್‌ ನಡುವೆ  ಚಕಮಕಿ ನಡೆ ದಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಜಲಜೀವನ್‌ ಮಿಷನ್‌ಗೆ ಅನುದಾನ :

ಜಲಜೀವನ್‌ ಮಿಷನ್‌ ಯೋಜನೆ ಅಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಮಂಗಳೂರು ತಾಲೂಕುಗಳ ಉಳಾಯಿಬೆಟ್ಟು ಮತ್ತು ಇತರ 14 ಹಳ್ಳಿಗಳಿಗೆ (117) ಜನ ವಸತಿಗಳಿಗೆ ಡಿಬಿಒಟಿ ಆಧಾರದಲ್ಲಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ 71.10 ಕೋ.ರೂ. ಯೋಜನೆಗೆ ಹಾಗೂ ಮಂಗಳೂರು ಮತ್ತು ಮೂಡಬಿದಿರೆ ತಾಲೂಕಿನ 39 ಹಳ್ಳಿಗಳ  389 ಜನವಸತಿ ಪ್ರದೇಶಗಳಿಗೆ 145.48 ಕೋಟಿ ರೂ.ಗಳ ಯೋಜನೆಗೆ ಅನುಮೋದನೆ ನೀಡಲಾಗಿದೆ.

ಪ್ರಮುಖ ನಿರ್ಣಯ :

ಕೃಷಿ ಇಲಾಖೆಯಲ್ಲಿ  164 ಸಂಚಾರಿ ಸಸ್ಯ ಆರೋಗ್ಯ ಚಿಕಿತ್ಸಾಲಯಕ್ಕೆ 41 ಕೋ. ರೂ. ಯೋಜನೆಗೆ ಒಪ್ಪಿಗೆ.

ನಬಾರ್ಡ್‌ ಪ್ರಾಯೋಜಿತ ಯೋಜನೆಗಳ ಅಡಿ ಕೃಷಿ ವಿವಿ ಗಳಿಗೆ ಅನುಮೋದಿತ 79.66 ಕೋ. ರೂ. ಸಿವಿಲ್‌ ಕಾಮಗಾರಿ ಕೈಗೊಳ್ಳಲು ಅನುಮೋದನೆ.

 ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಜಮೀನು ಹಂಚಿಕೆ ನೀತಿಗೆ ತಿದ್ದುಪಡಿಗೆ ಒಪ್ಪಿಗೆ.

ಕರ್ನಾಟಕ ಸಿವಿಲ್‌ ಸೇವೆ (ಪರಿ ವೀಕ್ಷಣೆ) ತಿದ್ದುಪಡಿ ನಿಯಮ 2021 ಅನುಮೋದನೆ.

 2022ನೇ ಸಾಲಿನ ಸಾರ್ವತ್ರಿಕ ರಜಾ ದಿನ ಹಾಗೂ ಪರಿಮಿತ ರಜಾ ದಿನಗಳ ನಿಗದಿಗೆ ಒಪ್ಪಿಗೆ.

ಯಲಹಂಕ ತಾಲೂಕಿನ ಹೇಸರಘಟ್ಟ ಹೋಬಳಿಯ ಹುರಳಿಚಿಕ್ಕನಹಳ್ಳಿಯಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್ತಿಗೆ 9.12 ಎಕರೆ ಜಮೀನು ನೀಡಲು ಒಪ್ಪಿಗೆ.

Advertisement

Udayavani is now on Telegram. Click here to join our channel and stay updated with the latest news.

Next