Advertisement

ವಿಕಲಚೇತನ ಬಾಲಕಿಗೆ ಸ್ಕೂಟರ್‌ ಕೊಡಿಸಿದ ಕಿಮ್ಮನೆ

02:39 PM Jul 13, 2017 | |

ತೀರ್ಥಹಳ್ಳಿ: ಈ ಬಾಲಕಿಗೆ ಹುಟ್ಟಿನಿಂದಲೇ ವಯಸ್ಸಿಗೆ ಸರಿಯಾಗಿ ದೇಹ ಬೆಳೆಯದ ಸಮಸ್ಯೆ. ಈಗ 9ನೇ ತರಗತಿಯವರೆಗೆ ಬಂದಿದ್ದರೂ ದೇಹ ಮಾತ್ರ ಎರಡೂವರೆ ಅಡಿಯನ್ನು ಮೀರಿ ಬೆಳೆದಿಲ್ಲ. ದೇಹ ಬೆಳೆದಿರದಿದ್ದರೂ ಆತ್ಮವಿಶ್ವಾಸ, ಮನಸ್ಸು ದೃಢವಾಗಿದ್ದು, ವಿದ್ಯಾಭ್ಯಾಸ ಕಲಿತು ತನ್ನ ಕಾಲ ಮೇಲೆ ತಾನು ನಿಲ್ಲಬೇಕೆಂಬ ಹಂಬಲ. ಆದರೆ, ಅದಕ್ಕೆ ಅಡ್ಡಿಯಾಗುತ್ತಿದ್ದುದು ಆಕೆ
ಕಲಿಯಲು ಹೋಗುತ್ತಿದ್ದ ಶಾಲೆಯ ಅಂತರ. ದಿನನಿತ್ಯ ಆಕೆ 4 ಕಿಲೋಮೀಟರ್‌ ದೂರ ಇಲ್ಲಿನ ಕಟ್ಟೇಹಕ್ಕಲಿನ ತುಂಬ್ರಮನೆ
ಸರ್ಕಾರಿ ಪ್ರೌಢಶಾಲೆಯವರೆಗೆ ಹೋಗಿಬರಬೇಕಾಗಿತ್ತು. ಬಸ್ಸಿನ ಸೌಲಭ್ಯ ಇದೆಯಾದರೂ ಬಸ್ಸನ್ನು ಹತ್ತಿ ಇಳಿಯುವುದು ಆಕೆಗೆ ಸಾಧ್ಯವಿರಲಿಲ್ಲ. ಇನ್ನು ಆಕೆಯ ಓದಿನ ಹಂಬಲಕ್ಕೆ ಸ್ಪಂದಿಸಿ ಸ್ವಂತ ವಾಹನವನ್ನು ಕೊಡಿಸುವ ಸಾಮರ್ಥ್ಯವೂ ಆಕೆಯ ಬಡ
ಪೋಷಕರಿಗಿರಲಿಲ್ಲ.

Advertisement

ಆಕಸ್ಮಿಕವಾಗಿ ಶಾಸಕ ಕಿಮ್ಮನೆ ರತ್ನಾಕರ್‌ ಆ ಊರಿಗೆ ಭೇಟಿ ನೀಡಿದಾಗ ಚಟುವಟಿಕೆಯ ಚಿಲುಮೆಯಂತಿದ್ದ ಈ ಬಾಲಕಿಯನ್ನು ಕಂಡು ಮನಸ್ಸು ಕರಗಿ ಮಾತನಾಡಿಸಿದ್ದಾರೆ. ಮಾತನಾಡಿಸುತ್ತಾ ಹೋದಂತೆ ಆಕೆಯ ಓದುವ ಅದಮ್ಯ ಹಂಬಲ ಮತ್ತು ತಂದೆ ಮಂಜುನಾಥ
ಶೆಟ್ಟಿ, ತಾಯಿ ಸುಮರ ಬಡತನದ ಬವಣೆಯು ಅರ್ಥವಾಯಿತು. ಬಳಿಕ ಶಾಸಕರ ಕಚೇರಿಗೆ ಬಾಲಕಿಯನ್ನು ಕಂಡು ಹೋಗುವಂತೆ
ಸೂಚಿಸಿದ ಕಿಮ್ಮನೆ ರತ್ನಾಕರ್‌, ಇಲಾಖೆಯ ವತಿಯಿಂದ ಯಾವುದಾದರು ಸಹಾಯ ಆ ಬಾಲಕಿಗೆ ದೊರಕಿಸಲು ಸಾಧ್ಯವೆ
ಎಂಬುದನ್ನು ಅ ಧಿಕಾರಿಗಳಲ್ಲಿ ಕೇಳಿದಾಗ ಅಂತಹ ಯಾವ ಯೋಜನೆಯೂ ಸರ್ಕಾರದ ವತಿಯಿಂದ ಲಭ್ಯವಿಲ್ಲ ಎಂಬ ಉತ್ತರ ಬಂದಿದೆ.

ಕೊನೆಗೆ ಇಲಾಖೆಯನ್ನು ವಿಚಾರಿಸಿ ಪ್ರಯೋಜನವಿಲ್ಲ ಎಂದುಕೊಂಡ ಕಿಮ್ಮನೆ ರತ್ನಾಕರ್‌, ಸ್ವತಃ ತಾವೇ ಬ್ಯಾಂಕಿನಲ್ಲಿ
ಸಾಲಮಾಡಿ ಆಕೆಗೆ ಅಂಗವಿಕಲರು ಉಪಯೋಗಿಸಬಹುದಾದ ತ್ರಿಚಕ್ರ ವಾಹನದಂತಹ ವಿನ್ಯಾಸದ ಹೊಸ ಸ್ಕೂಟರ್‌ವೊಂದನ್ನು ಕೊಡಿಸಿ ಆಕೆಯ ಓದಿನ ಹಂಬಲಕ್ಕೆ ನೀರೆರೆದಿದ್ದಾರೆ. ಸ್ಕೂಟರ್‌ನ್ನು ಸೌಮ್ಯಳಿಗೆ ವಿತರಿಸುವ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಡಿ.ಎಸ್‌. ವಿಶ್ವನಾಥ ಶೆಟ್ಟಿ, ಬಗರ್‌ಹುಕುಂ ಸಮಿತಿ ಅಧ್ಯಕ್ಷ ಪಟಮಕ್ಕಿ ಮಹಾಬಲೇಶ್‌, ಪಪಂ ಸದಸ್ಯ ರಾಘವೇಂದ್ರ ಶೆಟ್ಟಿ, ಕಾಂಗ್ರೆಸ್‌
ಮುಖಂಡರಾದ ಬಂಡೆ ವೆಂಕಟೇಶ್‌, ಪಡುವಳ್ಳಿ ಹಷೇìಂದ್ರಕುಮಾರ್‌, ಬಂಕೇರಿ ಫಣಿರಾಜ್‌, ತಗಡವಳ್ಳಿ ಶ್ರೀಧರ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next