Advertisement
1900 ಶಾಲೆ ಆರಂಭಸ್ವಾತಂತ್ರ್ಯ ಹೋರಾಟ ಗಾರರಿಂದ ಶಾಲೆ
Related Articles
ಪ್ರಸ್ತುತ ಶಾಲೆಯಲ್ಲಿ 47 ವಿದ್ಯಾರ್ಥಿಗಳಿದ್ದು 3 ಶಿಕ್ಷಕರು,ಓರ್ವ ಅತಿಥಿ ಶಿಕ್ಷಕ ಮತ್ತು ಓರ್ವ ಗೌರವ ಶಿಕ್ಷಕರಿದ್ದಾರೆ. ಹಳೆವಿದ್ಯಾರ್ಥಿಗಳ ಸಹಕಾರದಿಂದ ಮುಂದಿನ ವರ್ಷದಿಂದ ಆಂಗ್ಲ ಭಾಷೆಯ ಗೌರವ ಶಿಕ್ಷಕರನ್ನು ನೇಮಿಸಲು ನಿರ್ಧರಿಸಲಾಗಿದೆ.
Advertisement
ಊರ ದಾನಿಗಳಿಂದ ಶಾಲೆಗೆ ವ್ಯವಸ್ಥೆ 1949ರಲ್ಲಿ ಶೆಣೈ ಕುಟುಂಬದಿಂದ ಹಸ್ತಾಂತರಗೊಂಡ ಬಳಿಕ ಬೋರ್ಡ್ ಶಾಲೆಯಾಗಿ ಪರಿವವರ್ತನೆಗೊಂಡು ಸ್ಕೂಲ್ ಬೋರ್ಡ್, ದಿ| ಕೃಷ್ಣರಾಯ ಶ್ಯಾನುಭಾಗ್ ಮತ್ತು ಊರಿನ ಪಠೇಲರ ಸಹಕಾರದೊಂದಿಗೆ ಕಟ್ಟಡ ನಿರ್ಮಾಣಗೊಂಡಿತು. ದಾನಿಗಳಾದ ದಿ|ಶ್ರೀನಿವಾಸ ಭಟ್,ವಲೇರಿಯನ್ ಆಲ್ವ ಹಾಗೂ ಅಡ್ವೆ ಶಿವರಾಮ ಶೆಟ್ಟಿಯವರ ದೇಣಿಗೆಯಿಂದ ಪಿಠೊಪಕರಣಗಳ ವ್ಯವಸ್ಥೆಯಾಯಿತು.
ಸರ್ವಶಿಕ್ಷಣ ಅಭಿಯಾನ ಜಾರಿಯಾದ ಬಳಿಕ ಶೌಚಾಲಯ, ಅನ್ನಪೂರ್ಣ ಅಕ್ಷರ ದಾಸೋಹ ಅಡುಗೆ ಕೋಣೆ, ಶಾಲಾ ಕಟ್ಟಡ, ಆವರಣಗೋಡೆ ಮತ್ತು ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರಗಳು ನಿರ್ಮಾಣಗೊಂಡಿವೆ.ಸುರತ್ಕಲ್ ಎನ್‌ಐಟಿಕೆಯಲ್ಲಿ ಸೇವೆ ಸಲ್ಲಿಸಿದ ಡಾ| ಬಿ.ಆರ್. ಸಾಮಗ, ಭಾರತೀಯ ವಾಯಪಡೆಯ ಅಧಿಕಾರಿ ಬಿ.ಜೆ.ಆಳ್ವ, ಶಿಕ್ಷಣ ತಜ್ಞ ದಿ| ಆರ್‌ಎಸ್.ಬೆಳ್ಳೆ,ನೈಜೀರಿಯಾ ಉದ್ಯಮಿ ಬೆಳ್ಳೆ ದೊಡ್ಡಮನೆ ಸೀತಾರಾಮ ಶೆಟ್ಟಿ,ವಿಶಾಖಪಟ್ಟಣ ಮೈಕಾಲಾಜಿ ವಿಜ್ಞಾನಿ ಡಾ| ದಾಮೋದರ ಶೆಣೈ,ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲ ಡಾ| ವಿನ್ಸೆಂಟ್ ಆಲ್ವ,ಕರ್ನಾಟಕ ಬ್ಯಾಂಕ್‌ಎಜಿಎಂ ಗೋಪಾಲಕೃಷ್ಣ ಸಾಮಗ ಸೇರಿದಂತೆ ವೈದ್ಯಕೀಯ, ಎಂಜಿನಿಯರಿಂಗ್, ಭಾರತೀಯಸೇನೆ, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ಹಳೆವಿದ್ಯಾರ್ಥಿಗಳನ್ನು ಈ ಶಿಕ್ಷಣ ಸಂಸ್ಥೆ ನೀಡಿದೆ. ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ನಾಗಿ ಶತಮಾನ ಕಂಡ ಕನ್ನಡ ಶಾಲೆಯನ್ನು ಉಳಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಹಳೆ ವಿದ್ಯಾರ್ಥಿಗಳ ಸಹಕಾರದೊಂದಿಗೆ ಪ್ರಯತ್ನಿಸುತ್ತಿದ್ದೇವೆ – ಹರೀಶ್ ಶೆಟ್ಟಿ,ಬೆಳ್ಳೆ ಗ್ರಾ.ಪಂ. ಉಪಾಧ್ಯಕ್ಷರು ದೇಶ ವಿದೇಶಗಳಲ್ಲಿ ನೆಲೆಸಿರುವ ಹಳೆ ವಿದ್ಯಾರ್ಥಿಗಳಿಂದ ಸಹಕಾರದಿಂದ ಶತಮಾನೋತ್ಸವ ಆಚರಿಸಲು ಪ್ರಯತ್ನಿಸುತ್ತಿದ್ದೇವೆ. ಕನ್ನಡ ಶಾಲೆಯನ್ನು ಉಳಿಸುವ ಸಲುವಾಗಿ 1ನೇ ತರಗತಿಯಿಂದಲೇ ಆಂಗ್ಲ ಭಾಷೆ ಕಲಿಸುತ್ತಿದ್ದು ನ್ಪೋಕನ್ ಇಂಗ್ಲಿಷ್ ಕಲಿಸಲು ಪ್ರಯತ್ನ ನಡೆಸುತ್ತಿದ್ದೇವೆ.
-ನಾಗರತ್ನ, ಮುಖ್ಯ ಶಿಕ್ಷಕಿ. ಸತೀಶ್ಚಂದ್ರ ಶೆಟ್ಟಿ ,ಶಿರ್ವ