Advertisement

Sangeet Naari Mahal: ಗುಮ್ಮಟ ನಗರಿಯಲ್ಲಿ ಒಂದು ಸಂಗೀತ ಮಹಲ್‌

07:27 AM Jun 06, 2024 | Team Udayavani |

ವಿಜಯಪುರ ಆದಿಲಶಾಹಿಗಳ ರಾಜಧಾನಿಗೆ ಮುಕುಟಪ್ರಿಯದಂತಿದ್ದ ನವರಸಪುರ, ತನ್ನ ತನವನ್ನು ಕಳೆದುಕೊಂಡು ಕಳೆಗುಂದುತ್ತಿದೆ. ಈ ನವರಸಪುರ ಹಿಂದೆ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿತ್ತು. ಆದರೆ ಈಗ ಅವಸಾನದ ಅಂಚಿನಲ್ಲಿದೆ. ಈ ಐತಿಹಾಸಿಕ ಸ್ಮಾರಕಗಳ ಅಳಲು ಕೇಳುವವರು ಕಣ್ಣುಕಿವಿ ಮುಚ್ಚಿಕೊಂಡು ಕುಳಿತಿದ್ದಾರೆ.

Advertisement

ನವರಸಪುರ ನಗರವನ್ನು ಸಂಗೀತದ ಸೇವೆಗಾಗಿ ಸಂಗೀತ ಸುಧೆಯನ್ನು ಹರಿಸಲು ನಿರ್ಮಿಸಲಾಯಿತು. ಇದು ವಿಜಯಪುರದಿಂದ ಅಥಣಿಗೆ ಹೋಗುವ ರಸ್ತೆಯಲ್ಲಿ ಸುಮಾರು 7 ಕಿ.ಮೀ ದೂರದಲ್ಲಿದೆ. ಇದನ್ನು 1599 ರಲ್ಲಿ ಜಗದ್ಗುರು ಎಂದೇ ಖ್ಯಾತಿಯಾಗಿರುವ ಎರಡನೇ ಇಬ್ರಾಹಿಂ ಆದಿಲ್‌ಶಹಾನು ಪ್ರಾಚೀನ ಕಾಲದ ತೊರವಿ ಎಂಬ ಗ್ರಾಮದ ಹತ್ತಿರ ಹೊಸನಗರವನ್ನು ನಿರ್ಮಿಸಿ ಅದಕ್ಕೆ ನವರಸಪುರ ಎಂದು  ಹೆಸರು ಬರಲು ಅನೇಕ ಕಥೆಗಳಿವೆ.

ಅದರಲ್ಲಿ ಹೆಚ್ಚು ಪ್ರಖ್ಯಾತಿ ಪಡೆದ ಕಥೆಯೆಂದರೆ ತೊರವಿಯ ಒಬ್ಬ ವ್ಯಕ್ತಿಯ ಒಂದು ಸಲ ಇಬ್ರಾಹಿಂ ಆದಿಲ್‌ಶಾಹನಿಗೆ ಸುರವನ್ನು ತಂದುಕೊಟ್ಟನು. ಅದನ್ನು ಸೇವಿಸದ ಇಬ್ರಾಹಿಂನು ಅದರಲ್ಲಿರುವ ರುಚಿಯನ್ನು ಅನುಭವಿಸಿ ನವರಸಪುರ ಎಂದು ಕರೆದನು.ಮುಂದೆ ಅದೇ ನವರಸಪುರ. ಆದಿಲ್‌ಶಾಹಿಗಳ ಕಾಲದಲ್ಲಿ ನವರಸಪುರದಿಂದ ವಿಜಯಪುರ ನಗರಕ್ಕೆ ಬರಲು ರಸ್ತೆಯಿತ್ತು.

ಆ ರಸ್ತೆಯು ಜೋರಾಪುರದ ಮೋತಿಗುಮ್ಮಟಕ್ಕೆ ಹೊಂದಿ ಕೊಂಡಿತ್ತೆಂದು ನಮ್ಮ ಇತಿಹಾಸ ತಿಳಿಸುತ್ತದೆ. ಅಲ್ಲಿಗೆ ತನ್ನ ರಾಜಧಾನಿಯನ್ನು ವರ್ಗಾಯಿಸಬೇಕೆಂದಿದ್ದನು. ಈ ನಗರವನ್ನು ನಿರ್ಮಿಸಲು ಸುಮಾರು 20 ಸಾವಿರ ಕೆಲಸಗಾರರು ಇದಕ್ಕಾಗಿ ಶ್ರಮ ಪಟ್ಟಿದ್ದಾರೆ.

Advertisement

ಸಂಗೀತ ಮಹಲ್‌ ಎದುರಿಗೆ ನಾರಿ ಮಹಲ್‌ ಇದೆ. ಇಲ್ಲಿ  ಆಸ್ಥಾನಕ್ಕೆ ಕಾರ್ಯಕ್ರಮ ನೀಡಲು ಬರುತ್ತಿದ್ದ ಸಂಗೀತಗಾರ್ತಿಯರು ಮತ್ತು ನೃತ್ಯಗಾರ್ತಿಯರು ಇಲ್ಲಿ ವಾಸಿಸುತ್ತಿದ್ದರು. ಪುರುಷರಿಗೆ ಪ್ರವೇಶವಿರಲಿಲ್ಲ. ಇಂದು ಈ ಮಹಲ್‌ ಕುರೂಪಿಯಂತಾಗಿದೆ. ಸಂಗೀತ ಮಹಲ್‌ ಪುಂಡರ, ಕಳ್ಳಕಾಕರ ಸ್ಥಳವಾಗಿ ಮಾರ್ಪಟ್ಟಿದೆ. ಇದನ್ನು ಕಾಯುವ ಭದ್ರತಾ ಸಿಬಂದಿಗೆ ಸಮವಸ್ತ್ರವೂ ಇಲ್ಲ.

ಇದಲ್ಲದೇ ಇಡೀ ಸಂಗೀತ ಮಹಲ್‌ಗೆ ಇವರೊಬ್ಬರೇ ಭದ್ರತಾ ಸಿಬಂದಿ. ಇಲ್ಲಿ ಪ್ರವಾಸಿಗರಿಗೆ ಕುಡಿಯಲು ನೀರಿಲ್ಲ. ಬೋರ್‌ವೆಲ್‌ ಕೆಟ್ಟು ಹೋಗಿ ಎಷ್ಟೊ ದಿನಗಳಾಗಿವೆ. ಹಾಗಾಗಿ ಪ್ರವಾಸಿಗರಿಗೆ ಬೇಕಾದ ಮೂಲ ಸೌಕರ್ಯಗಳನ್ನು ಕಲ್ಪಿಸಬೇಕಿದೆ.

ಇದನ್ನು ಉಳಿಸಬೇಕಾದ ಯುವಜನಾಂಗ ಸ್ಮಾರಕಗಳ ಗೋಡೆಗಳ ಮೇಲೆ ಗೀಚಿ ಹಾಳು ಮಾಡುತ್ತಿದ್ದಾರೆ. ಇದು ಅನಾಗರಿಕರ ಕೆಲಸ. ನವರಸಪುರವನ್ನು ಇಂದು ಗುರುತಿಸಬೇಕಾದರೆ ನಾವು ಸಂಗೀತ ಮಹಲ್‌ ಮೂಲಕವೇ ಗುರುತಿಸಬೇಕಾಗಿದೆ. ಮಲಿಕ್‌ ಅಂಬರ್‌ ಇವುಗಳನ್ನು ನಾಶ ಮಾಡಿದ ಅಂದಿನಿಂದ ಅವು ತನ್ನತನವನ್ನು ಕಳೆದುಕೊಂಡು ಅನಾಥವಾಗಿವೆ.  ಈ ಸ್ಮಾರಕಗಳನ್ನು ಉಳಿಸಿಕೊಳ್ಳಲು ನಮ್ಮ ಅಧಿಕಾರಿಗಳು ಇತ್ತ ಕಡೆ ಗಮನ ಹರಿಸುತ್ತಿಲ್ಲ. ಈ ಸ್ಮಾರಕಗಳು ನಮ್ಮ ದೇಶದ ಸಂಪತ್ತು.ಇವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಸಂರಕ್ಷಿಸಿಡುವುದು ನಮ್ಮ ಗುರುತರವಾದ ಜವಾಬ್ದಾರಿಯಾಗಿರುವುದನ್ನು ಮರೆಯಬಾರದು.

-ದೀಕ್ಷಾ ಮುಚ್ಚಂಡಿ

ವಿಜಯಪುರ

 

Advertisement

Udayavani is now on Telegram. Click here to join our channel and stay updated with the latest news.

Next